ಜಿಲ್ಲಾ ಸುದ್ದಿ

ಕಾಟಾಚಾರಕ್ಕೆ ಟ್ವಿಟರ್ ಖಾತೆ

ಕಾಟಾಚಾರಕ್ಕೆ ಟ್ವಿಟರ್ ಖಾತೆ
Published On :

ಬೆಂಗಳೂರು: 'ನಾನೇನು ಟ್ವೀಟ್ ಮಾಡುವುದಿಲ್ಲ. ಯಾವುದನ್ನೂ ಅಲ್ಲಿ ಬರೆಯುವುದಿಲ್ಲ. ನಾನೇ ಮಾಡುತ್ತೇನೋ, ಇನ್ಯಾರೋ ಮಾಡುತ್ತಾರೋ ಗೊತ್ತಿಲ್ಲ. ಆದರೆ, ನನ್ನ ಅಭಿಪ್ರಾಯ ಅಲ್ಲಿರುತ್ತದೆ'.

ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ವೆಬ್‌ಸೈಟ್, ಫೇಸ್‌ಬುಕ್, ಟ್ವೀಟರ್ ಖಾತೆಗಳನ್ನು ವಿಧಾನಸೌಧದಲ್ಲಿ ಸೋಮವರಾ ಉದ್ಘಾಟಿಸಿ ಪ್ರತಿಕ್ರಿಯಿಸಿದ್ದು ಹೀಗೆ.

ನಾನು ಮೊದಲಿನಿಂದ ಜನರೊಂದಿಗೆ ನೇರ ಸಂಪರ್ಕ ಇಟ್ಟುಕೊಂಡವನು. ನೇರ ಭೇಟಿ ಮಾಡುತ್ತಿದ್ದವನು. ಜನಸಂಖ್ಯೆ ಆಧಾರದಲ್ಲಿ ಈಗ 35 ವರ್ಷದೊಳಗಿನ ಯುವಕರು ಪ್ರಮಾಣ ಶೆ.65 ರಷ್ಟಿದೆ. ಈಗ ಎಲ್ಲರ ಕೈಯಲ್ಲೂ ಮೊಬೈಲ್ ಇದೆ. ಹಳೆಜಾಡಿನಲ್ಲೇ ಹೋಗುವುದಕ್ಕೆ ಆಗಲ್ಲ. ಅದಕ್ಕೆ ಸಾಮಾಜಿಕ ತಾಣಗಳ ಬಳಕೆ ಅಗತ್ಯ, ಅನಿವಾರ್ಯ. ಮೋದಿ ಅಥವಾ ಬಿಜೆಪಿಯವರು ಹೆಚ್ಚು ಕಾರ್ಯಗತರಾಗಿದ್ದಾರೆ ಎಂದೇನೂ ಅಲ್ಲ.

ಮೋದಿ ಪ್ರಧಾನಿ ಆಗುವುದಕ್ಕೆ ಮುನ್ನವೇ ಈ ಯೋಚನೆ ಇತ್ತು. ಅದು ಈಗ ಕಾರ್ಯಗತವಾಗಿದೆ ಅಷ್ಟೇ ಎಂದು ಪ್ರತಿಕ್ರಿಯಿಸಿದರು.

ನಾನು ಮೊಬೈಲ್ ಇಂಟರ್‌ನೆಟ್, ಸಾಮಾಜಿಕ ತಾಣಗಳನ್ನು ಉಪಯೋಗಿಸಿಲ್ಲ. ಈಗ ಕಲಿಯಲು ಪ್ರಯತ್ನಿಸುತ್ತೇನೆ. ನಾನು ಈಗ ಟ್ವೀಟ್, ಮಾಹಿತಿ ಹಾಕೋಲ್ಲ. ನನ್ನ ಬದಲಿಗೆ ನನ್ನ ಮಾಧ್ಯಮ ವಿಭಾಗ ಇದನ್ನು ನಿರ್ವಹಿಸುತ್ತದೆ ಎಂದರು.

ವೆಬ್‌ಸೈಟ್, ಸಾಮಾಜಿಕ ತಾಣಗಳಲ್ಲಿ ಮುಖ್ಯಮಂತ್ರಿಯವರ ದಿನಚರಿ ಸೇರಿದಂತೆ ಮಾಹಿತಿ ಹಕ್ಕು ಕಾಯಿದೆ ಮೂಲಕ ಲಭ್ಯವಾಗುವ ಎಲ್ಲ ವಿವರಗಳನ್ನೂ ಪ್ರಕಟಿಸಲಾಗುತ್ತದೆ.

ಇದು 'ಒನ್ ವೇ ಕಮ್ಯುನಿಕೇಶನ್‌'. ನಾವು ಮಾಹಿತಿ ಒದಗಿಸುತ್ತೇವೆ. ಜನರ ಸಂದೇಶಗಳಿಗೆ ಮುಖ್ಯಮಂತ್ರಿಯವರು ಪ್ರತಿಕ್ರಿಯಿಸುವುದಿಲ್ಲ. ಈ ವೆಬ್‌ಸೈಟ್ ಹಾಗೂ ಸಾಮಾಜಿಕ ತಾಣಗಳನ್ನು ಸರ್ಕಾರ ಮಾಹಿತಿ ತಂತ್ರಜ್ಞಾನ ಇಲಾಖೆ ಸಿದ್ಧಪಡಿಸಿದೆ. ಯಾವುದಕ್ಕೂ ವೆಚ್ಚ ಇಲ್ಲ ಎಂದು ಮಾಧ್ಯಮ ಸಲಹೆಗಾರ ದಿನೇಶ್ ಅಮೀನ್‌ಮಟ್ಟು ತಿಳಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.