ಸರ್ಕಾರಿ ದಂತ ವೈದ್ಯ ಸೀಟ್ ಖಾಸಗಿಯವರಿಗಿಲ್ಲ

ರಾಜ್ಯ ಸರ್ಕಾರದ ಕೋಟಾದಲ್ಲಿ ಬಾಕಿ ಇರುವ ಸ್ನಾತಕೋತ್ತರ ದಂತ ವೈದ್ಯ ಕೋರ್ಸ್ ನ ಸೀಟುಗಳು ಕಾಲೇಜು ಆಡಳಿತ ಮಂಡಳಿಗಳಿಗೆ...
ವಿದ್ಯಾರ್ಥಿಗಳು
ವಿದ್ಯಾರ್ಥಿಗಳು
Updated on: 

ಬೆಂಗಳೂರು: ರಾಜ್ಯ ಸರ್ಕಾರದ ಕೋಟಾದಲ್ಲಿ ಬಾಕಿ ಇರುವ ಸ್ನಾತಕೋತ್ತರ ದಂತ ವೈದ್ಯ ಕೋರ್ಸ್  ನ ಸೀಟುಗಳು ಕಾಲೇಜು ಆಡಳಿತ ಮಂಡಳಿಗಳಿಗೆ
ಬಿಟ್ಟುಕೊಡುವುದಿಲ್ಲ ಎಂದು ರಾಜ್ಯ ಸರ್ಕಾರ ಹೈಕೋರ್ಟ್‍ಗೆ ಜ್ಞಾಪನಾ ಪತ್ರ ಸಲ್ಲಿಸಿದೆ.
ರಾಜ್ಯದಲ್ಲಿ 250 ದಂತ ವೈದ್ಯಕೀಯ ಸ್ನಾತಕೋತ್ತರ ಸೀಟುಗಳಿವೆ. ಆದರೆ ಈ ಬಾರಿ ನಕಾರಾತ್ಮಕ ಅಂಕಗಳ ಮಾನದಂಡ ಅನುಸರಿಸಿದ ಹಿನ್ನೆಲೆಯಲ್ಲಿ
ಕೇವಲ 142 ವಿದ್ಯಾರ್ಥಿಗಳು ಮಾತ್ರ ಆಯ್ಕೆ ಆಗಿದ್ದಾರೆ. ಇದರಿಂದಾಗಿ ಉಳಿದ 108 ಸೀಟುಗಳು ಬಾಕಿ ಉಳಿದಿದೆ. ಈ ಸೀಟುಗಳನ್ನು ಸರ್ಕಾರ
ಕಾಲೇಜು ಆಡಳಿತ ಮಂಡಳಿಗೆ ನೀಡುವ ಸಾಧ್ಯತೆ ಹೆಚ್ಚಿದ್ದು, ಮೆರಿಟ್ ವಿದ್ಯಾರ್ಥಿಗಳಿಗೆ ಇದರಿಂದ ಅನ್ಯಾಯ ಆಗುವುದಾಗಿ ಡಾ.ಅಮೋಲ್ ಸೇರಿ 91 ಜನರು ಹೈಕೋರ್ಟ್‍ನಲ್ಲಿ ಅರ್ಜಿ ದಾಖಲಿಸಿದ್ದರು. ವಿಚಾರಣೆ ನಡೆಸಿದ ಹಿರಿಯ ನ್ಯಾ.ಕೆ.ಎಲ್. ಮಂಜುನಾಥ್ ಮತ್ತು ನ್ಯಾ.ರಾಘವೇಂದ್ರ ಸಿಂಗ್ ಚೌವ್ಹಾಣ್ ಅವರಿದ್ದ ವಿಭಾಗೀಯ ಪೀಠ, ಮೆರಿಟ್ ವಿದ್ಯಾರ್ಥಿಗಳಿಗೆ ಯಾವುದೇ ರೀತಿ ಅನ್ಯಾಯ ಆಗ ದಂತೆ ಸರ್ಕಾರ ಸಮಸ್ಯೆ ಬಗೆಹರಿಸಬೇಕು. ಅಭ್ಯರ್ಥಿ ಗಳ ಹಿತಾಸಕ್ತಿ , ರಕ್ಷಣೆ ದೃಷ್ಟಿಯಿಂದ ಸಮಸ್ಯೆಗೆ
ರಾಜ್ಯ ಸರ್ಕಾರ ಸೂಕ್ತ ಪರಿಹಾರ ಕಂಡುಕೊಳ್ಳಬೇಕು.ಬಾಕಿ ಉಳಿದಿರುವ ಸೀಟುಗಳನ್ನು ಸರ್ಕಾರ ಆಡಳಿತ ಮಂಡಳಿಗೆ ಒಪ್ಪಿಸಬಾರದು. ಹಾಗೆಯೇ  ಈಗಾಗಲೇ ತೇರ್ಗಡೆಗೊಂಡ 142 ವಿದ್ಯಾರ್ಥಿಗಳಿಗೆ ಕರ್ನಾಟಕ ಪರೀಕ್ಷಾ ಪ್ರಾ„ಕಾರ ಕೌನ್ಸೆಲಿಂಗ್ ನಡೆಸಲು ಯಾವುದೇ ನಿರ್ಬಂಧವಿಲ್ಲ ಎಂದು ಆದೇಶಿಸಿ ಅರ್ಜಿ ಇತ್ಯರ್ಥಪಡಿಸಿದೆ.
ಸರ್ಕಾರಕ್ಕೆ ತರಾಟೆ: ಬೆಳಿಗ್ಗೆ ವಿಚಾರಣೆ ಕೈಗೆತ್ತಿ ಕೊಂಡ ವಿಭಾಗೀಯ ಪೀಠ, ವಿದ್ಯಾರ್ಥಿಗಳಿಗೆ ಅನ್ಯಾಯ ಆಗದಂತೆ ನೋಡಿಕೊಳ್ಳಲು ಸರ್ಕಾರ ಬಳಿ ಇರುವ ಮಾರ್ಗವೇನು ಎಂದು ಪ್ರಶ್ನಿಸಿತು. ಇದಕ್ಕೆ ಪ್ರತಿಕ್ರಯಿಸಿದ ವಕೀಲರು ಆಕ್ಷೇಪಣೆ ಸಲ್ಲಿಸಲು ಕಾಲಾವಕಾಶ ನೀಡುವಂತೆ ಮನವಿ ಮಾಡಿದರು. ಇದಕ್ಕೆ ಕಿಡಿಕಾರಿದ ವಿಭಾಗೀಯ ಪೀಠ, ಶಾಸಕರು, ಮಂತ್ರಿಗಳು ಮತ್ತು ನ್ಯಾಯಾಧೀಶರಿಗೆ ಈ ಸೀಟುಗಳನ್ನು ನೀಡಲು ಉಳಿಸಿಕೊಂಡಿ ದ್ದೀರಾ? ವಿದ್ಯಾರ್ಥಿಗಳನ್ನು ರಕ್ಷಣೆಗೆ ಧಾವಿಸಬೇಕಾಗಿರುವುದು ಸರ್ಕಾರದ ಕರ್ತವ್ಯ. ಅದನ್ನು ಮಾ ಡದೆ, ದ್ವಂದ್ವ ನೀತಿ ಅನುಸರಿಸುತ್ತಿದ್ದೀರಾ. ಇದನ್ನು ಗಮನಿಸಿದರೆ ಕುರುಡರ ರಾಜ್ಯದಲ್ಲಿ ಒಕ್ಕಣ್ಣಿ ರೋನೆ ಜಾಣ ಎಂಬಂತಾಗಿದೆ. ಉದ್ದೇಶಪೂರ್ವ ಕವಾಗಿ ಈ ಸೀಟುಗಳನ್ನು ಖಾಸಗಿಯವರಿಗೆ ಒಪ್ಪಿ ಸಲು ನಿರ್ಧರಿಸಿದ್ದೀರಿ. ಹೀಗಾದರೆ ಮೆರಿಟ್ ವಿದ್ಯಾರ್ಥಿಗಳು ಏನು ಮಾಡಬೇಕು? ಈ ರೀತಿ ಮಾಡಲು ನಿಮ್ಮ ಸಚಿವರೇನಾದರು ಹೇಳಿದ್ದಾರೆಯೇ ?  ಎಲ್ಲಿದ್ದಾರೆ ನಿಮ್ಮ ಅಧಿಕಾರಿಗಳು. ಸಮಸ್ಯೆಬಗೆಹರಿಸುವುದು ನಿಮ್ಮ ಕರ್ತವ್ಯವಲ್ಲವೇ ಎಂದು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿತು.

ದೂರೇನು?: ರಾಜ್ಯದಲ್ಲಿ 250 ದಂತ ವೈದ್ಯಕೀಯ ಸ್ನಾತಕೋತ್ತರ ಸೀಟುಗಳಿದ್ದು ಅವುಗಳಲ್ಲಿ ಪ್ರಸಕ್ತ ವರ್ಷದಲ್ಲಿ 142 ವಿದ್ಯಾರ್ಥಿಗಳು ಮಾತ್ರವೇಆಯ್ಕೆಯಾಗಿದ್ದಾರೆ. ಈ ಬಾರಿ ಒಂದು ಸಾವಿರ ವಿದ್ಯಾರ್ಥಿಗಳು ಪರೀಕ್ಷೆ  ಬರೆದಿದ್ದರೂ ನಕಾರಾತ್ಮಕ ಅಂಕದಿಂದಾಗಿ 108 ಸೀಟುಗಳು ಖಾಲಿ ಉಳಿಯುವಂತಾಗಿದೆ. ಉಳಿದ ಸೀಟುಗಳನ್ನು ಕಾಲೇಜುಗಳ ಆಡಳಿತ ಮಂಡಳಿಗೆ ನೀಡಲಾಗುತ್ತಿದೆ. ಇದರಿಂದ ಅರ್ಹ ವಿದ್ಯಾರ್ಥಿಗಳು ಶಿಕ್ಷಣದಿಂದ ವಂಚಿತರಾಗುವ ಸಾಧ್ಯತೆ ಇದೆ ಎಂದುಅರ್ಜಿದಾರರು ಅರ್ಜಿಯಲ್ಲಿ ಆರೋಪಿಸಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com