ಬಿಬಿಎಂಪಿ 3 ಭಾಗ ; ಚೆಂಡು ರಾಜಭವನಕ್ಕೆ

ಬಿಬಿಎಂಪಿ ವಿಭಜನೆಗೆ ಸುಗ್ರೀವಾಜ್ಞೆ ಪ್ರಕರಣ ಇದೀಗ ರಾಜ್ಯಪಾಲರ ಅಂಗಳ ತಲುಪಿದೆ. ಆದರೆ, ಪ್ರತಿಪಕ್ಷಗಳು ಸುಗ್ರೀವಾಜ್ಞೆಗೆ ಸಹಿಹಾಕದಂತೆ ರಾಜ್ಯಪಾಲರನ್ನು ...
ಬಿಬಿಎಂಪಿ
ಬಿಬಿಎಂಪಿ
Updated on: 

ಬೆಂಗಳೂರು: ಬಿಬಿಎಂಪಿ ವಿಭಜನೆಗೆ ಸುಗ್ರೀವಾಜ್ಞೆ ಪ್ರಕರಣ ಇದೀಗ ರಾಜ್ಯಪಾಲರ ಅಂಗಳ ತಲುಪಿದೆ. ಆದರೆ, ಪ್ರತಿಪಕ್ಷಗಳು ಸುಗ್ರೀವಾಜ್ಞೆಗೆ ಸಹಿಹಾಕದಂತೆ ರಾಜ್ಯಪಾಲರನ್ನು ಒತ್ತಾಯಿಸಲಿವೆ. ಬಿಜೆಪಿ ಹಾಗೂ ಜೆಡಿಎಸ್ ಮುಖಂಡರು, ಕಾರ್ಯಕರ್ತರು ನಗರದಲ್ಲಿ ಗುರು ವಾರ ಪ್ರತಿಭಟನೆ ನಡೆಸಲಿ ದ್ದಾರೆ. ಅಲ್ಲದೆ, ರಾಜ್ಯ ಸರ್ಕಾರ ಪ್ರಸ್ತಾಪಿಸಿರುವ `ವಿಭಜನೆ ಸುಗ್ರೀವಾಜ್ಞೆ'ಗೆ ಸಹಿ ಹಾಕಬಾರದು ಎಂದು ರಾಜ್ಯಪಾಲರಿಗೂ ಮನವಿ ಸಲ್ಲಿಸಲಿದ್ದಾರೆ. ಪಾಲಿಕೆ ಚುನಾವಣೆ ನಡೆಸಲು ಮನಸ್ಸಿಲ್ಲದ ಕಾಂಗ್ರೆಸ್ ಸರ್ಕಾರ, 198ವಾರ್ಡ್‍ಗಳಿಗೆಚುನಾವಣೆ ನಡೆಸಲು ಮೀಸಲು ಪಟ್ಟಿಯನ್ನು ಪ್ರಕಟಿಸಿದೆ. ಆದರೆ, ಅದರ ನಡುವೆಯೇ  ಮೂರು ಭಾಗ ಮಾಡುವ ಸುಗ್ರೀವಾಜ್ಞೆಯನ್ನೂ ಜಾರಿ ಮಾಡಿದರೆ ಚುನಾವಣೆ ಮುಂದಕ್ಕೆ ಹಾಕಬಹುದು ಎಂಬ ತಂತ್ರ ರೂಪಿಸಿದೆ. ಹೀಗಾಗಿ ರಾಜ್ಯಪಾಲರ ಮೊರೆ ಹೋಗಲು ನಿರ್ಧರಿಸಲಾಗಿದೆ. ಸರ್ಕಾರದ ವಿರುದಟಛಿ ಪ್ರತಿಭಟನೆಯನ್ನುತೀವ್ರಗೊಳಿಸುವುದಾಗಿಉಭಯ ಪಕ್ಷಗಳು ಘೋಷಿಸಿವೆ. ಗುರುವಾರ ಬೆಳಗ್ಗೆ 10 ಗಂಟೆಗೆ ಬಿಜೆಪಿ ಪ್ರತಿ ಭಟನಾ ರ್ಯಾಲಿ ಹಮ್ಮಿಕೊಂಡಿದೆ. ರಾಜಭವನಕ್ಕೆ ತೆರಳಿ, ರಾಜ್ಯಪಾಲರಿಗೆ ಸಹಿ ಹಾಕದಂತೆ ಮನವಿ ಸಲ್ಲಿಸಲಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com