

ಬೆಂಗಳೂರು: ಅಕಾಲಿಕ ಮಳೆ ಅಬ್ಬರ ಉತ್ತರ ಕರ್ನಾಟಕ ಹಾಗೂ ಕರಾವಳಿ ಭಾಗದಲ್ಲಿ ಜೋರಾಗಿದ್ದು ಸಿಡಿಲಿಗೆ ಐವರು ಬಲಿಯಾಗಿ ದ್ದಾರೆ. ಶುಕ್ರವಾರ ಸಂಜೆ ಸುರಿದ ಬಿರುಗಾಳಿ,
ಗುಡುಗು ಸಹಿತ ಧಾರಾಕಾರ ಮಳೆಗೆ ಜನಜೀವನ ಅಸ್ತವ್ಯಸ್ತಗೊಂಡಿದ್ದು ಅಪಾರ ಪ್ರಮಾಣದ ಹಾನಿ ಸಂಭವಿಸಿದೆ. ಸಿಂದಗಿ ತಾಲೂಕಿನ ಹಾಳಗೊಂಡಕನಾಳ ಗ್ರಾಮದಲ್ಲಿ ಹೊಲದಿಂದ ವಾಪಸ್ ಮನೆಗೆ ಬರುತ್ತಿದ್ದ ಶಾರದಾಬಾಯಿ ಗಿರೆಪ್ಪ ತಿಳಗೂಳ (38), ಹೊಲದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಇಂಡಿ ತಾಲೂಕಿನ ಬೆನೆ ಕ ನ ಹಳ್ಳಿಯಲ್ಲಿ ರಾಜಶೇಖರ
ಸಿದ್ದಪ್ಪ ಹರಿಜನ (25), ಮರದಡಿ ಆಶ್ರಯ ಪಡೆದಿದ್ದ ಕಲಬುರ್ಗಿ ಜಿಲ್ಲೆ ಆಳಂದ ತಾಲೂಕಿನ ಕೊರಳಿ ಗ್ರಾಮದ ಕುರಿಗಾಹಿ ಮಹಿಳೆ ಲಕ್ಷ್ಮಣ ಜವಳಿ(45), ನರೋಣಾದ ರೈತ
ಹಣಮಂತರಾಯ ಶಿವರೆಡ್ಡಿ (22) ಹಾಗೂ ತೋಟದ ಮನೆಯ ಹೊಸ್ತಿಲಲ್ಲಿ ನಿಂತಿದ್ದ ಚಿಂಚೋಳಿ ತಾಲೂಕು ಮರಪಳ್ಳಿ ರೈತ ಶ್ರೀಮಂತ ಬಸವಂತಪ್ಪ ಪೂಜಾರಿ(20) ಸಿಡಿಲು ಬಡಿದು ಮೃತಪಟ್ಟಿದ್ದಾರೆ.