ಐಪಿಎಲ್ ಪಂದ್ಯಕ್ಕೆ ಮಾರ್ಗ ಬದಲಾವಣೆ

ಸೋಮವಾರ ನಡೆಯಲಿರುವ ಐಪಿಎಲ್ ಪಂದ್ಯದ ಹಿನ್ನೆಲೆಯಲ್ಲಿ ಅಂದು ಮಧ್ಯಾಹ್ನ 2 ಗಂಟೆಯಿಂದ ರಾತ್ರಿ 11 ಗಂಟೆಯ ತನಕ ನಗರದ..
ವಾಹನಗಳ ಸಂಚಾರ ದಟ್ಟನೆ
ವಾಹನಗಳ ಸಂಚಾರ ದಟ್ಟನೆ
Updated on: 

ಬೆಂಗಳೂರು: ಸೋಮವಾರ ನಡೆಯಲಿರುವ ಐಪಿಎಲ್ ಪಂದ್ಯದ ಹಿನ್ನೆಲೆಯಲ್ಲಿ ಅಂದು ಮಧ್ಯಾಹ್ನ 2 ಗಂಟೆಯಿಂದ ರಾತ್ರಿ 11 ಗಂಟೆಯ ತನಕ ನಗರದ ಚಿನ್ನಸ್ವಾಮಿ ಕ್ರೀಡಾಂಗಣದ ಸುತ್ತಮುತ್ತಲ ರಸ್ತೆಗಳಲ್ಲಿ ವಾಹನ ಸಂಚಾರಕ್ಕೆ ನಿರ್ಬಂಧ ವಿಧಿಸಲಾಗಿದೆ. ಕ್ವೀನ್ ರಸ್ತೆಯಲ್ಲಿ ಸಿಟಿಒ ವೃತ್ತದಿಂದ ಕ್ವೀನ್ಸ್ ವೃತ್ತದವರೆಗೆ, ಎಂಜಿ ರಸ್ತೆಯಲ್ಲಿ ಅನಿಲ್ ಕುಂಬ್ಳೆ ವೃತ್ತದಿಂದ ಕ್ವೀನ್ಸ್ ವೃತ್ತ, ಲಿಂಕ್ ರಸ್ತೆಯಲ್ಲಿ ಎಂಜಿ ರಸ್ತೆಯಿಂದ ಕಬ್ಬನ್ ರಸ್ತೆವರೆಗೆ, ರಾಜಭವನ ರಸ್ತೆ, ಟಿ.ಚೌಡಯ್ಯ ರಸ್ತೆ ಮತ್ತು ರೇಸ್ ಕೋರ್ಸ್ ರಸ್ತೆ, ಜತೆಗೆ ಕ್ರಿಕೆಟ್
ಮೈದಾನಕ್ಕೆ ಹೊಂದಿಕೊಂಡಂತಿರುವ ರಸ್ತೆ ಎರಡೂ ಕಡೆಗಳಲ್ಲಿ ನಿಗದಿತ ಸಮಯದಲ್ಲಿ ವಾಹನ ಸಂಚಾರಕ್ಕೆ ಅವಕಾಶವಿಲ್ಲ. ಹಾಗೆಯೇ , ಸೆಂಟ್ರಲ್ ಸ್ಟ್ರೀಟ್
ರಸ್ತೆಯಲ್ಲಿ ಎರಡೂ ಕಡೆ, ಕಬ್ಬನ್ ರಸ್ತೆಯಲ್ಲಿ ಬಿಆರ್‍ವಿ ವೃತ್ತದಿಂದ ಡಿಕೆನ್ಸ್‍ನ್ ರಸ್ತೆ ಜಂಕ್ಷನ್‍ವರೆಗೆ ಎರಡೂ ಕಡೆಗಳಲ್ಲೂ ಬಿಎಂಟಿಸಿ ಬಸ್‍ಗಳನ್ನು ಹೊರತು
ಪಡಿಸಿ, ಎಲ್ಲ ರೀತಿಯ ವಾಹನಗಳ ಸಂಚಾರವನ್ನು ನಿಷೇಧಿಸಲಾಗಿದೆ. ಸೆಂಟ್‍ಮಾಕ್ರ್ಸ್ ರಸ್ತೆಯಲ್ಲಿ ಎಸ್‍ಬಿಐ ವೃತ್ತದಿಂದ ಆಶೀರ್ವಾದಂ ವೃತ್ತದವರೆಗೆ, ಮ್ಯೂಸಿಯಂ ರಸ್ತೆಯಲ್ಲಿ ಎಂಜಿ ರಸ್ತೆಯಿಂದ ಸೆಂಟ್ ಮಾಕ್ರ್ಸ್ ರಸ್ತೆವರೆಗೆ ವಾಹನ ನಿಲುಗಡೆಗೆ ಅವಕಾಶವಿಲ್ಲ.

 ವಾಹನ ನಿಲುಗಡೆ ಎಲ್ಲಿಲ್ಲಿ?
ಪಂದ್ಯ ವೀಕ್ಷಣೆಗೆ ಬರುವವರಿಗೆ ಸೆಂಟ್‍ಜೋಸೆಫ್  ಇಂಡಿಯನ್ ಹೈಸ್ಕೂಲ್ ಮೈದಾನ, ಯುಬಿ ಸಿಟಿಯಲ್ಲಿ ವಾಹನಗಳ ನಿಲುಗಡೆಗೆ ವ್ಯವಸ್ಥೆ ಮಾಡಲಾಗಿದೆ. ಕೆಎಸ್‍ಸಿಎ ಸದಸ್ಯರಿಗೆ ಸೆಂಟ್‍ಮಾಕ್ರ್ಸ್ ಕ್ಯಾಥೆಡ್ರೆಲ್ ಚರ್ಚ ಆವರಣ, ಬೌರಿಂಗ್ ಇನ್ಸ್‍ಟಿಟ್ಯೂಟ್‍ಆವರಣದಲ್ಲಿ ವಾಹನ ನಿಲುಗಡೆಗೆ ಅವಕಾಶವಿದೆ. ಕ್ರಿಕೆಟ್ ವೀಕ್ಷಕರನ್ನು ಕರೆದುಕೊಂಡು
ಬರುವ ಬಿಎಂಟಿಸಿ ಬಸ್ಸುಗಳನ್ನು ಕಬ್ಬನ್ ರಸ್ತೆ ಮತ್ತು ಅನಿಲ್ ಕುಂಬ್ಳೆ ವೃತ್ತದಿಂದ ಸೆಂಟ್ರಲ್ ಸ್ಟ್ರೀಟ್‍ರಸ್ತೆಯ ಎಡಭಾಗದಲ್ಲಿ ಸಂಚಾರಕ್ಕೆ ಅಡಚಣೆಯÁಗದಂತೆ ನಿಲುಗಡೆಗೆ ಅನುಕೂಲ ಮಾಡಲಾಗಿದೆ. ವಾಹನ ಚಾಲಕರು ಪಂದ್ಯ ನಡೆಯುವ ಸಂದರ್ಭದಲ್ಲಿ ಈ ನಿಯಮಗಳನ್ನು ಕಟ್ಟು ನಿಟ್ಟಾಗಿ ಪಾಲಿಸುವ ಮೂಲಕ ಸುಗಮ ಸಂಚಾರಕ್ಕೆ ಅವಕಾಶ
ಮÁಡಿಕೊಡುವಂತೆ ನಗರ ಸಂಚಾರ ಪೊಲೀಸರು ಕೋರಿದ್ದಾರೆ.


ವೀಕ್ಷಕರ ಫೋಟೋ ತೆಗಿತಾರೆ!

ಬೆಂಗಳೂರು: ನಗರದಲ್ಲಿ ನಡೆಯುವ ಐಪಿಎಲ್ ಪಂದ್ಯಗಳಿಗೆ ಬಿಗಿಭದ್ರತೆ ಒದಗಿಸಲು ನಗರ ಪೋಲೀಸ್ ಇಲಾಖೆ ಮುಂದಾಗಿದೆ. ಸುರಕ್ಷತೆಯ ದೃಷ್ಟಿಯಿಂದ
ಪಂದ್ಯ ವೀಕ್ಷಣೆಗೆ ಬರುವ ಪ್ರತಿಯೊಬ್ಬರ ಭಾವಚಿತ್ರ ಸೆರೆಹಿಡಿಯಲು ನಿರ್ಧರಿಸಿದೆ. ಐಪಿಎಲ್ ಪಂದ್ಯ ನಡೆಯುವ ನಗರದ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿನ
ಎಲ್ಲ ಪ್ರವೇಶ ದ್ವಾರಗಳಲ್ಲೂ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸುವ ಮೂಲಕ, ಪ್ರತಿಯೊಬ್ಬರ ಚಲನವಲನಗಳ ಮೇಲೆ ನಿಗಾ
ವಹಿಸಲಿದೆ. ಸೋಮವಾರ ಐಪಿಎಲ್  ಪಂದ್ಯ ನಡೆಯಲಿದೆ. ಭಾನುವಾರವೇ ಪೋಲೀಸರು, ಕ್ರೀಡಾಂಗಣದಲ್ಲಿನ ಭದ್ರತೆ ಪರಿಶೀಲನೆ ನಡೆಸಲಿದ್ದಾರೆ.
2012ರ ಐಪಿಎಲ್ ಪಂದ್ಯಾವಳಿ ವೇಳೆ ಸಂಭವಿಸಿದ ಬಾಂಬ್ ಸ್ಪೋ ಟದ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆ ಈ ಮುಂಜಾಗ್ರತಾ ಕ್ರಮ ಕೈಗೊಂಡಿದೆ. ಪಂದ್ಯಗಳ ಸೂಕ್ತ
ರಕ್ಷಣೆಗಾಗಿ ಈಗಾಗಲೇ ಆಯೋ ಜಕರು ಮತ್ತು ಕರ್ನಾಟಕ ಕ್ರಿಕೆಟ್ ಮಂಡಳಿಯು ಬಿಗಿ ಭದ್ರತೆಗೆ 1300 ಪೊಲೀಸರ ನೆರವು ಪಡೆದಿದೆ. ಅಲ್ಲದೇ ನಗರದ ಖಾಸಗಿ ಸಾಫ್ಟ್ವೇರ್ ಕಂಪನಿಯೊಂದು ತಾಂತ್ರಿಕವಾಗಿ ಕೈಗೊಳ್ಳಬಹುದಾದ ಕ್ರಮಗಳ ಜವಾಬ್ದಾರಿ ವಹಿಸಿಕೊಂಡಿದೆ. ಕ್ರೀಡಾಂಗಣದಲ್ಲಿ 38 ಸಾವಿರ ಆಸನಗಳಿವೆ. ಪ್ರತಿ ಆಸನವನ್ನು ಮೊದಲು
ಪರಿಶೀಲಿಸಲಾಗುತ್ತಿದೆ. ವಿಶೇಷವಾಗಿ ಪ್ರತಿಯೊಂದು ಪ್ರವೇಶ ದ್ವಾರದಲ್ಲೂ ತಲಾ ರು. 3 ಲಕ್ಷ ಮೌಲ್ಯದ ಹೈಟೆಕ್ ತಂತ್ರಜ್ಞಾನದ ಕ್ಯಾಮೆರಾಗಳನ್ನು ಅಳವಡಿಲಾಗಿದ್ದು, ಇವು  ಕ್ರೀಡಾಂಗಣದಲ್ಲಿನ ಪ್ರತಿಯೊಂದು ಚಟುವಟಿಕೆಗಳ ಮೇಲೂ ಕಣ್ಣಿಡಲಿವೆ. ಕಬ್ಬನ್‍ಪಾರ್ಕ್ ಠಾಣೆ ಪೊಲೀಸರು ಭದ್ರತೆಯ ಹೊಣೆ ಹೊತ್ತಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com