

ಬೆಂಗಳೂರು: ಸ್ವಯಂಘೋಷಿತ ಬುದ್ಧಿ ಜೀವಿಗಳು ಬೀದಿಯಲ್ಲಿ ಬಹಿರಂಗವಾಗಿ ಗೋಮಾಂಸ ತಿಂದಿರುವುದು ಸರಿಯಲ್ಲ. ಈ ಸಾಹಿತಿಗಳ ಹುಚ್ಚಾಟಗಳನ್ನು ನೋಡಿ
ಹಿಂದೂಗಳು ಸುಮ್ಮನಿದ್ದಾರೆ. ಅವರ ಆಕ್ರೋಶ ಯಾವಾಗ ಸ್ಫೋಟವಾಗುತ್ತದೋ ಗೊತಿಲ್ಲ ಎಂದು ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಕೆ.ಎಸ್. ಈಶ್ವರಪ್ಪ ಹೇಳಿದ್ದಾರೆ.
ಬಿಜೆಪಿ ಸದಸ್ಯತ್ವ ಪರಿಶೀಲನಾ ಸಭೆಗೆ ಮುನ್ನ ಮಾತನಾಡಿ ಆಕ್ರೋಶ ವ್ಯಕ್ತಪಡಿಸಿದರು. ಇದೇ ಸಂದರ್ಭದಲ್ಲಿ ಪ್ರತಿಕ್ರಿಯೆ ನೀಡಿದ ಶಾಸಕ ಸಿ.ಟಿ ರವಿ, ಗಿರೀಶ್ ಕಾರ್ನಾಡ್ ಹಾಗೂ ಕೆ. ಮರುಳಸಿದ್ದಪ್ಪನವರಿಗೆ ಪ್ರಚೋದನೆ ಮಾಡುವುದೇ ಹವ್ಯಾಸವಾಗಿದೆ ಎಂದರು. ಸುರೇಶ್ ಕುಮಾರ್ ಕೂಡಾ ದೂರಿದರು.
ಬಿಜೆಪಿ ಸದಸ್ಯತ್ವ ಅಭಿಯಾನ ಪರಿಶೀಲನಾ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಪಕ್ಷದ ರಾಜ್ಯಾಧ್ಯಕ್ಷ ಪ್ರಹ್ಲಾದ್ ಜೋಷಿ, ಮುಂಬರುವ ಬಿಬಿಎಂಪಿ, ಗ್ರಾಪಂ, ಜಿಪಂ ಚುನಾವಣೆಗಳಲ್ಲಿ ಬಿಜೆಪಿ ದಿಗ್ವಿಜಯ ಸಾಧಿಸಿ ತನ್ನ ಬಲವಾದ ಅಸ್ತಿತ್ವ ಪ್ರದರ್ಶಿಸುವುದು ನಿಶ್ಚಿತ, ಕಾರ್ಯಕರ್ತರು ಈಗಿನಿಂದಲೇ ಚುನಾವಣೆಗೆ ಸಜ್ಜಾಗುವಂತೆ ಕರೆ ನೀಡಿದರು. ಸಭೆಯಲ್ಲಿ ಕೇಂದ್ರ ಸಚಿವ ಅನಂತ ಕುಮಾರ್, ಮೇಲ್ಮನೆ ಪ್ರತಿಪಕ್ಷ ನಾಯಕ ಈಶ್ವರಪ್ಪ, ಸಿ.ಟಿ ರವಿ ಮತ್ತಿತರರು ಇದ್ದರು.