ಬಿಬಿಎಂಪಿ ಚುನಾವಣೆಯಿಂದ ಹಿಂದೆ ಸರಿದ ಆಪ್

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಚುನಾವಣೆಗೆ ರಾಜಕೀಯ ಪಕ್ಷಗಳು ಭರದ ಸಿದ್ಧತೆ ನಡೆಸಿವೆ. ಈ ಮಧ್ಯೆ ಆಮ್ ಆದ್ಮಿ ಪಕ್ಷ ಬಿಬಿಎಂಪಿ ಚುನಾವಣೆಯಲ್ಲಿ ಸ್ಪರ್ಧಿಸದಿರುವುದಾಗಿ ಹೇಳಿದೆ...
ಅರವಿಂದ್ ಕೇಜ್ರಿವಾಲ್
ಅರವಿಂದ್ ಕೇಜ್ರಿವಾಲ್
Updated on: 
ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಚುನಾವಣೆಗೆ ರಾಜಕೀಯ ಪಕ್ಷಗಳು ಭರದ ಸಿದ್ಧತೆ ನಡೆಸಿವೆ. ಈ ಮಧ್ಯೆ ಆಮ್ ಆದ್ಮಿ ಪಕ್ಷ ಬಿಬಿಎಂಪಿ ಚುನಾವಣೆಯಲ್ಲಿ ಸ್ಪರ್ಧಿಸದಿರುವುದಾಗಿ ಹೇಳಿದೆ. 
ಬಿಬಿಎಂಪಿ ತ್ರಿಭಜನೆ ವಿಧೇಯಕವೂ ರಾಷ್ಟ್ರಪತಿಗಳ ಮುಂದಿದೆ. ವಿಧೇಯಕಕ್ಕೆ ಯಾವಾಗಬೇಕಾದರು ಅಂಗೀಕಾರ ಸಿಗಬಹುದು. ಈಗಿರುವಾಗ ಬಿಬಿಎಂಪಿ ಚುನಾವಣೆ ಅನಗತ್ಯ. ಚುನಾವಣೆ ನಡೆಸುವುದು ಸರಿಯಲ್ಲ ಎಂದು ಆಪ್ ಸಂಚಾಲಕ ಸಿದ್ದಾರ್ಥ್ ಶರ್ಮಾ ತಿಳಿಸಿದ್ದಾರೆ. 
ಜನರ ಹಣ ಖರ್ಚು ಮಾಡಿ ಬಿಬಿಎಂಪಿ ಚುನಾವಣೆಗೆ ಸಿದ್ಧತೆ ನಡೆದಿದೆ. ಈ ರೀತಿಯ ಚುನಾವಣೆಗೆ ಆಪ್ ನ ಸಮ್ಮತಿಯಿಲ್ಲ. ಹೀಗಾಗಿ ಬಿಬಿಎಂಪಿ ಚುನಾವಣೆಯಿಂದ ಹಿಂದೆ ಸರಿಯುವ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಶರ್ಮಾ ತಿಳಿಸಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com