

ಬೆಂಗಳೂರು: ರಾಜ್ಯದಲ್ಲಿ ರೈತರ ಸರಣಿ ಆತ್ಮಹತ್ಯೆ ಮುಂದುವರೆದಿದೆ. ಸ್ವಾತಂತ್ರ್ಯೋತ್ಸವ ದಿನವಾದ ಶನಿವಾರವೂ ಐದು ರೈತರು ಆತ್ಮಹತ್ಯೆಗೆ ಶರಣಾಗಿದ್ದಾರೆ.
ಸಿಂಧನೂರು ತಾಲೂಕಿನ ರಾಗಲಪರ್ವಿ ಗ್ರಾಮದ ಹನುಮಂತಯ್ಯ (45), ಗೀತಕ್ಯಾಂಪಿನ ಹನುಮಂತಪ್ಪ (55), ತಿಪಟೂರು ತಾಲೂಕಿನ ಲಕ್ಮಗೊಂಡನಹಳ್ಳಿಯ ಮಹಲಿಂಗಪ್ಪ (45), ಶ್ರೀರಂಗಪ್ಟಣ ತಾಲೂಕಿನ ಬೆಳಗೋಳ ಗ್ರಾಮದ ಕುಮಾರ್ (45), ಮತ್ತು ಸವದತ್ತಿ ತಾಲೂಕಿನ ಮರಕುಂಬಿ ಗ್ರಾಮದ ಬಸವಣೆಪ್ಪ ರೇವಣ್ಣವರ (60) ಆತ್ಮ ಮಾಡಿಕೊಂಡ ರೈತರು.