ಪ್ರತಿಪಕ್ಷ ನಾಯಕರಾಗಿದ್ದವರೂ ಕೋಟ್ಯಧಿಪತಿಗಳೇ

ಬಿಬಿಎಂಪಿಯ ಮೇಯರ್‍ಗಳ ಆಸ್ತಿ ಒಂದು ಕಡೆಯಾದರೆ, ಮತ್ತೊಂದೆಡೆ ಪ್ರತಿಪಕ್ಷ ನಾಯಕರಾಗಿದ್ದವರದ್ದು ಮತ್ತೊಂದು `ಕೈ'. ಬಿಬಿಎಂಪಿಯ ಪ್ರಥಮ ಅವಧಿಯಲ್ಲಿ ಕಾಂಗ್ರೆಸ್‍ನ ನಾಲ್ವರು ಪ್ರತಿಪಕ್ಷದ ನಾಯಕರಾಗಿದ್ದರು...
ಬಿಬಿಎಂಪಿ ಕಚೇರಿ (ಸಂಗ್ರಹ ಚಿತ್ರ)
ಬಿಬಿಎಂಪಿ ಕಚೇರಿ (ಸಂಗ್ರಹ ಚಿತ್ರ)
Updated on: 

ಬೆಂಗಳೂರು: ಬಿಬಿಎಂಪಿಯ ಮೇಯರ್‍ಗಳ ಆಸ್ತಿ ಒಂದು ಕಡೆಯಾದರೆ, ಮತ್ತೊಂದೆಡೆ ಪ್ರತಿಪಕ್ಷ ನಾಯಕರಾಗಿದ್ದವರದ್ದು ಮತ್ತೊಂದು `ಕೈ'. ಬಿಬಿಎಂಪಿಯ ಪ್ರಥಮ ಅವಧಿಯಲ್ಲಿ ಕಾಂಗ್ರೆಸ್‍ನ ನಾಲ್ವರು ಪ್ರತಿಪಕ್ಷದ ನಾಯಕರಾಗಿದ್ದರು. ಅವರ ಆಸ್ತಿ ಒಟ್ಟು ರು.25 ಕೋಟಿ. ನಾಲ್ವರು ಸಲ್ಲಿಸಿರುವ ಪ್ರಮಾಣಪತ್ರದ ಪ್ರಕಾರ, ಎರಡು ಅವಧಿಗೆ ಪ್ರತಿಪಕ್ಷನಾಯಕನಾಗಿದ್ದ ಮಂಜುನಾಥ ರೆಡ್ಡಿ ಅವರೇ ಆಸ್ತಿ ವಿಷಯದಲ್ಲಿ ಮುಂಚೂಣಿಯಲ್ಲಿದ್ದಾರೆ.

ಮಂಜುನಾಥರೆಡ್ಡಿ ಅವರ ಒಟ್ಟಾರೆ ಆಸ್ತಿ ಮೌಲ್ಯ ರು.13.37 ಕೋಟಿ. ಚಿನ್ನಸಾಲ ಹೆಂಡತಿ ಹೆಸರಿನಲ್ಲೇ ಇವೆ. ಅವಲಂಬಿತವಾಗಿರುವ ತಾಯಿಯ ಹೆಸರಲ್ಲಿ ಕೋಟ್ಯಂತರ ಆಸ್ತಿ ಇದೆ. ಇನ್ನು ಪ್ರಥಮ ಬಿಬಿಎಂಪಿ ಪ್ರತಿಪಕ್ಷ ನಾಯಕ ಎಂ. ನಾಗರಾಜ್ ಕಾಂಗ್ರೆಸ್ ನಿಂದ ಅಮಾನತುಗೊಂಡು ಮತ್ತೆ ಕಾಂಗ್ರೆಸ್‍ಗೇ ಮರು ಸೇರ್ಪಡೆ ಯಾಗಿ ಅದೇ ವಾರ್ಡ್‍ನಲ್ಲಿ ಸ್ಪರ್ಧಿಸಿದ್ದಾರೆ.

ಇವರ ಒಟ್ಟಾರೆ ಆಸ್ತಿ ರು.8.86 ಕೋಟಿ. ಇವರ ಹೆಸರಿನಲ್ಲಿರುವ ಹಣ ಮತ್ತು ಆಸ್ತಿಗಿಂತ ಪುತ್ರನ ಹೆಸರಿನಲ್ಲಿರುವುದೇ ಹೆಚ್ಚು. ಲಾ ಪಾಯಿಂಟ್‍ನಲ್ಲಿ ಎತ್ತಿದ ಕೈ ಎನಿಸಿರುವ ಗುಣಶೇಖರ್ ಆಸ್ತಿ ರು.1.83 ಕೋಟಿ. ಇವರ ಆಸ್ತಿ ಉದಯಶಂಕರ್ ಅವರ ಆಸ್ತಿಗಿಂತ ಹೆಚ್ಚು

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com