ಅಳು ನಿಲ್ಲಿಸದ ಮಗಳನ್ನೇ ಕೊಂದ ತಾಯಿ!

ಹೆತ್ತ ಮಗಳ ಅಳು ಸಹಿಸದ ತಾಯಿಮೂರು ವರ್ಷದ ಮಗಳನ್ನು ಉಸಿರುಗಟ್ಟಿಸಿ ಹತ್ಯೆ ಮಾಡಿರುವ ಮನಕಲುಕುವ ಘಟನೆ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on: 

ಬೆಂಗಳೂರು: ಹೆತ್ತ ಮಗಳ ಅಳು ಸಹಿಸದ ತಾಯಿಮೂರು ವರ್ಷದ ಮಗಳನ್ನು ಉಸಿರುಗಟ್ಟಿಸಿ ಹತ್ಯೆ ಮಾಡಿರುವ ಮನಕಲುಕುವ ಘಟನೆ ಕೆಜಿ ಹಳ್ಳಿಯಲ್ಲಿ ನಡೆದಿದೆ. ಪ್ರಕರಣ ಸಂಬಂಧ ನಾಜಿಯಾ ಸುಲ್ತಾನಾ (26) ಎಂಬುವರನ್ನು ಪೊಲೀಸರು ಬಂಧಿಸಿದ್ದಾರೆ. ತನ್ನ 3 ವರ್ಷದ ಮಗಳು ರುಬಿಯಾ ಕೌಸರ್ಗಳನ್ನು ಕೊಲೆ ಮಾಡಿದ ಆರೋಪ ಎದುರಿಸುತ್ತಿದ್ದಾರೆ. ಕೆ.ಜಿ.ಹಳ್ಳಿಯವೀರಣ್ಣಪಾಳ್ಯ ನಿವಾಸಿ ನಾಜಿಯಾ ಸುಲ್ತಾನಾ ಗೋವಿಂದಪುರದ ಆಟೋ ಚಾಲಕ ಆಸೀಫ್ ಮಹಮದ್ ನನ್ನು 3 ವರ್ಷಗಳ ಹಿಂದೆ ಪ್ರೇಮಿಸಿ ವಿವಾಹವಾಗಿದ್ದಳು. ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ 1 ವರ್ಷದಹಿಂದೆ ಪತ್ನಿಯನ್ನು ಆಸೀಫ್ ತೊರೆದು ಹೋಗಿದ್ದ. ಬಳಿಕ ನಾಜಿಯಾ ಮಗಳೊಂದಿಗೆ ಒಂಟಿ ಯಾಗಿ ವಾಸವಿದ್ದಳು. ಕಳೆದ 1 ತಿಂಗಳಿಂದ ಕೌಸರ್ ಡೆಂಘಿ ಜ್ವರದಿಂದ ಬಳಲುತ್ತಿದ್ದಳು.ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿದರೂ ಗುಣವಾಗಿರಲಿಲ್ಲ. ಆ.14ರಂದು ಮಧ್ಯಾಹ್ನ 3.30ರ ಸುಮಾರಿಗೆ ಕೌಸರ್ ಅಳುತ್ತಿದ್ದಳು. ಎಷ್ಟು ಬಾರಿ ಹೇಳಿದರೂ ಅಳು ನಿಲ್ಲಿಸದ್ದರಿಂದ ಕೋಪಗೊಂಡ ಸುಲ್ತಾನಾ, ಮಗಳ ಬಾಯಿ ಮತ್ತು ಮೂಗನ್ನು ಗಟ್ಟಿಯಾಗಿ ಕೈಗಳಿಂದ ಮುಚ್ಚಿದ್ದಳು. ಕಾಯಿಲೆಯಿಂದ ಮೊದಲೇ ಅಸ್ವಸ್ಥಳಾಗಿ ದ್ದ ಕೌಸರ್‍ಳ ಬಾಯಿ ಜತೆಗೆ ಮೂಗನ್ನು ಮುಚ್ಚಿದ್ದರಿಂದ ಉಸಿರಾಡಲಾಗದೆ ಕೊನೆಯುಸಿರೆಳದಳು. ಆಕಸ್ಮಿಕವಾಗಿ ಈ ಘಟನೆ ನಡೆದಿದ್ದು, ಸುಲ್ತಾನಗೆ ಮಗಳ ಕೊಲೆ ಮಾಡುವ ಉದ್ದೇಶವಿರಲಿಲ್ಲ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಫೇಸ್ ಬುಕ್‍ನಿಂದ ಗುರುತು ಪತ್ತೆ: ಮಗಳು ಮೃತಪಟ್ಟಿರುವುದು ಗೊತ್ತಾಗಿ ಭೀತಿಗೊಂಡ ಸುಲ್ತಾನಾ,ಸಮೀಪದ ರೆಹಮಾನಿಯಾ ಮಸೀದಿಗೆ ಹೋಗಿ ಶವವನ್ನು ಬಟ್ಟೆಯಲ್ಲಿ
ಸುತ್ತಿಟ್ಟು ಮನೆಗೆ ವಾಪಸ್ಸಾಗಿದ್ದಳು. ಶವ ನೋಡಿದ ಮಸೀದಿ ಸಿಬ್ಬಂದಿಪೊಲೀಸರಿಗೆ ಮಾಹಿತಿ ನೀಡಿದ್ದರು.ಶವದ ಫೋಟೋ ತೆಗೆದ ಪೊಲೀಸರು ಫೇಸ್‍ಬುಕ್ ಮತ್ತು ವಾಟ್ಸ್‍ಆ್ಯಪ್
ಮೂಲಕ ಪಾಲಕರ ಪತ್ತೆಗೆ ಮುಂದಾಗಿದ್ದರು.ಸಾಮಾಜಿಕ ಜಾಲ ತಾಣದಲ್ಲಿಫೋಟೋ ನೋಡಿದ ಸ್ಥಳೀಯರು ಶವ ಸುಲ್ತಾನಾಳ ಪುತ್ರಿಯದ್ದು ಎಂದು ಪೊಲೀಸರಿಗೆ ಮಾಹಿತಿ ನೀಡಿದ್ದರು. ಹೀಗಾಗಿ ಭಾನುವಾರ ರಾತ್ರಿ ಈರಣ್ಣ ಪಾಳ್ಯಕ್ಕೆ ತೆರಳಿದ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ.ಬಾಯಿ ಮುಚ್ಚಿಕೊಂಡಿದ್ದರಿಂದ ಮಗಳು ಮೃತಪಟ್ಟಳು. ಪೊಲೀಸರಿಗೆ ಗೊತ್ತಾದರೆ ಜೈಲಿಗೆ ಹೋಗಬೇಕಾಗುತ್ತದೆ. ಅಲ್ಲದೇ ಶವ ಸಂಸ್ಕಾರ ಮಾಡಲೂ ಹಣವಿಲ್ಲದ ಕಾರಣಶವವನ್ನು ಮಸೀದಿಯಲ್ಲಿಟ್ಟದ್ದಾಗಿ ಸುಲ್ತಾನಾ ವಿಚಾರಣೆ ವೇಳೆ ತಪ್ಪೊಪ್ಪಿಗೆ ಹೇಳಿಕೆ ನೀಡಿದ್ದಾಳೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com