ಈಗ ಹಣದ ಹೊಳೆ ಹರಿವ ಸಮಯ

ಈ ಬಾರಿ ಬಿಬಿಎಂಪಿ ಚುನಾವಣೆ ಯಲ್ಲಿ ಸುಮಾರು ರು.1,000 ಕೋಟಿಗಳ ವಹಿವಾಟು ನಡೆಯುವ ಸಾಧ್ಯತೆ ಕಾಣುತ್ತಿದೆ...
ಬಿಬಿಎಂಪಿ ಕಚೇರಿ (ಸಂಗ್ರಹ ಚಿತ್ರ)
ಬಿಬಿಎಂಪಿ ಕಚೇರಿ (ಸಂಗ್ರಹ ಚಿತ್ರ)
Updated on: 

ಬೆಂಗಳೂರು: ಈ ಬಾರಿ ಬಿಬಿಎಂಪಿ ಚುನಾವಣೆ ಯಲ್ಲಿ ಸುಮಾರು ರು.1,000 ಕೋಟಿಗಳ ವಹಿವಾಟು ನಡೆಯುವ ಸಾಧ್ಯತೆ ಕಾಣುತ್ತಿದೆ.

ಬಿಬಿಎಂಪಿ ಚುನಾವಣೆಗೆ ಇಷ್ಟೂ ದಿನಗಳೂ ನಡೆದಿದ್ದು ಬರೀ ಪ್ರಚಾರವೇ ಹೊರತು, ಚುನಾವಣೆಯ ನೈಜ ವಿಚಾರ ಅನುಷ್ಠಾನಕ್ಕೆ ಬಂದಿರಲಿಲ್ಲ. ಅಂದರೆ ಇಷ್ಟೂ ದಿನ ಪಕ್ಷಗಳ ಅಭ್ಯರ್ಥಿಗಳು ಕಾರ್ಯಕರ್ತರ ದೈನಂದಿನ ವೆಚ್ಚ, ವಾಹನ, ಮೈಕ್, ಕರಪತ್ರ, ಬ್ಯಾನರ್ ಗಳಂಥ ಪ್ರಚಾರಕ್ಕೆ ಮಾತ್ರ ವೆಚ್ಚ ಮಾಡಬೇಕಿತ್ತು. ಇದೇ ಮಾದರಿಯಲ್ಲಿ ಅಭ್ಯರ್ಥಿ ಪ್ರಚಾರ ಮಾಡಿದ್ದರೆ ಚುನಾವಣಾ ಆಯೋಗ ನಿಗದಿ ಮಾಡಿರುವಂತೆ ಕೇವಲ ರು.5 ಲಕ್ಷದಲ್ಲೇ ಚುನಾವಣೆ ಮುಗಿಸಬಹುದಿತ್ತು.

ತಲಾ ರು.2ರಿಂದ 3 ಕೋಟಿ: ನಿಜ ವಾದ ವೆಚ್ಚ ಆರಂಭವಾಗಿರುವುದು ಗುರುವಾರದಿಂದ. ಅಭ್ಯರ್ಥಿಗಳು ಹೇಳಿಕೊಳ್ಳಲಾಗದ ಮತ್ತು ಅಧಿಕೃತವಾಗಿ ಘೋಷಣೆ ಮಾಡಿಕೊಳ್ಳಲಾಗದ ಬಾಬುಗಳಿಗೆ ವೆಚ್ಚ ಮಾಡಲಾರಂಭಿಸಿದ್ದಾರೆ.

ಶುಕ್ರವಾರ ಇನ್ನೂ ತೀವ್ರವಾಗ ಲಿದ್ದು, ಮತದಾನ ದಿನದ ಮಧ್ಯಾಹ್ನ ದವರೆಗೂ ಮುಂದುವರಿಯುವ ಸಾಧ್ಯತೆ ಇದೆ. ಹೀಗಾಗಿ ಅಭ್ಯರ್ಥಿ ಗಳು ಸರಾಸರಿ ರು.2ರಿಂದ 3ಕೋಟಿವರೆಗೂ ವೆಚ್ಚ ಮಾಡುವ ಸಿದಟಛಿತೆಯಲ್ಲಿದ್ದಾರೆ ಎಂಬ ಅಂದಾಜಿದೆ. ಒಟ್ಟಾರೆ ಕಣದಲ್ಲಿರುವ 1,121 ಅಭ್ಯರ್ಥಿಗಳಲ್ಲಿ ಪಕ್ಷದಿಂದ ಕಣಕ್ಕಿಳಿ ದಿರುವ 651 ಅಭ್ಯರ್ಥಿಗಳು ಹೆಚ್ಚು ವೆಚ್ಚ ಮಾಡಿದರೆ, 399 ಪಕ್ಷೇತರರು ಕಡಿಮೆ ವೆಚ್ಚದಲ್ಲಿ ಗೆಲ್ಲುವುದಕ್ಕೆ ಯತ್ನಿಸುತ್ತಿದ್ದಾರೆ. ಹೀಗಾಗಿ ಪ್ರಮುಖ ಅಭ್ಯರ್ಥಿಗಳು ಕನಿಷ್ಠ ರು.2 ಕೋಟಿಯಿಂದ ರು.4 ಕೋಟಿ ವರೆಗೂ ವೆಚ್ಚ ಮಾಡುತ್ತಿದ್ದಾರೆ. ಇವರಲ್ಲಿ ಮಹಾದೇವಪುರ ವ್ಯಾಪ್ತಿಯಲ್ಲಿರುವ ಪ್ರಮುಖ ಪಕ್ಷಗಳ ಇಬ್ಬರು ತಲಾ ರು.15 ಕೋಟಿವರೆಗೂ ವೆಚ್ಚ ಮಾಡಲು ಮುಂದಾಗುತ್ತಿದ್ದಾರೆ ಎಂದು ಪಕ್ಷಗಳ ಮೂಲಗಳೇ ಹೇಳಿವೆ.

ನೇರ ಸಂಪರ್ಕ ಕಡಿಮೆ: 2012ರಲ್ಲಿ ನಡೆದ ಬಿಬಿಎಂಪಿ ಚುನಾವಣೆಯಲ್ಲಿ ಚುನಾವಣೆ ಅಬ್ಬರ ಇದಕ್ಕಿಂತ ಹೆಚ್ಚಾ ಗಿತ್ತಾದರೂ ಹಣಕಾಸಿನ ವಹಿವಾಟು ಹೆಚ್ಚಾಗಿರಲಿಲ್ಲ. ಅಂದಿನ ಚುನಾವಣೆ
ಯಲ್ಲಿ ಅಭ್ಯರ್ಥಿಗಳ ಪ್ರಚಾರಕ್ಕೆ ಕೇವಲ 13 ದಿನಗಳ ಕಾಲಾವಕಾಶವಿತ್ತು. ಆದರೆ, ಈ ಬಾರಿ ಚುನಾವಣೆಯಲ್ಲಿ ಆಗಸ್ಟ್ 14ರಿಂದ ಲೆಕ್ಕಾಚಾರ ಮಾಡುವುದಾದರೆ ಅಭ್ಯರ್ಥಿಗಳಿಗೆ ಬರೀ 6 ದಿನಗಳ ಅವಕಾಶ ಸಿಕ್ಕಿದೆ. ಹೀಗಾಗಿ ಮತದಾರರನ್ನು ನೇರ ಭೇಟಿ ಮಾಡಿ ಮನವೊಲಿಸಲು ಸಾಧ್ಯವಾಗಿಲ್ಲ. ಆದ್ದರಿಂದ ಕಡಿಮೆ ಸಮಯದಲ್ಲಿ ಹೆಚ್ಚು ಮತ ಪಡೆಯುವ ತಂತ್ರವಾಗಿ ಹಣವನ್ನು ಬಳಸಲು ಸಜ್ಜಾಗಿದ್ದಾರೆ.

ಇದಕ್ಕಾಗಿ ಅಭ್ಯರ್ಥಿಗಳು ತಮ್ಮದೇ ತಂಡವನ್ನು ರಚಿಸಿ, ಪ್ರತಿ ಮನೆಗಳ ಮತದಾರರ ಪಟ್ಟಿ ಸಿದ್ಧಪಡಿಸಿದ್ದಾರೆ. ಅವರಿಗೆ ತಲಾ ಇಂತಿಷ್ಟು ಎನ್ನುವಂತೆ ತಮ್ಮದೇ ಜಾಲದ ಮೂಲಕ ತಲುಪಿಸಲು ಮುಂದಾಗುತ್ತಿದ್ದಾರೆ. ಆದರೆ, ಇಂಥ ಪ್ರಯತ್ನಗಳು ಸುಶಿಕ್ಷಿತ ಮತ ದಾರರಿರುವ ಕಡೆ ಸಾಧ್ಯವಿಲ್ಲವಾದರೂ ನಗರದಲ್ಲಿರುವ 873 ಸ್ಲಂಗಳಲ್ಲಿ ಇದರ ಪ್ರಮಾಣ ಹೆಚ್ಚು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com