

ಬೆಂಗಳೂರು: ಈ ಬಾರಿ ಬಿಬಿಎಂಪಿ ಚುನಾವಣೆಯಲ್ಲಿ ರಾಜ್ಯಸಭಾ ಸದಸ್ಯ ರಾಜೀವ್‍ಚಂದ್ರಶೇಖರ್ ಅವರು ಬಿಜೆಪಿಗೆ ತತ್ವಾಧರಿತ ಬೆಂಬಲ ವ್ಯಕ್ತಪಡಿಸಿದ್ದಾರೆ.
ಭಾರತದ ಪರಿವರ್ತನೆಗಾಗಿ ನರೇಂದ್ರ ಮೋದಿ ಅವರ ನಾಯಕತ್ವ ಬೆಂಬಲಿಸಿ ಎಂದು ಲೋಕಸಭಾ ಚುನಾವಣಾ ಸಮಯದಲ್ಲಿ ಅಭಿಯಾನ ಆರಂಭಿಸಿದ್ದ ರಾಜೀವ್ ಚಂದ್ರಶೇಖರ್, ಈ ಚುನಾವಣೆಯಲ್ಲೂ ಮೋದಿ ಪರಿಕಲ್ಪನೆಯಂತೆ ನಗರ ಅಭಿವೃದ್ಧಿಗಾಗಿ ಬಿಜೆಪಿ ಬೆಂಬಲಿಸಿದ್ದಾರೆ. ಬಿಜೆಪಿಯ ಅಗ್ರ ನಾಯಕತ್ವದ ಘೋಷಿತ ಪರಿಕಲ್ಪನೆಗಳು ಮತ್ತು ಮೋದಿ ಅವರ ಯೋಜನೆಗಳಿಂದ ಬೆಂಗಳೂರನ್ನು ಮಾದರಿ ನಗರ ಮಾಡಲು ಸಾಧ್ಯ. ಆದ್ದರಿಂದ ಈ ಬಾರಿ ಚುನಾವಣೆಯಲ್ಲಿ ತಾವು ಬಿಜೆಪಿಯನ್ನು ಬೆಂಬಲಿಸುತ್ತಿರುವುದಾಗಿ ಅವರು ಹೇಳಿದ್ದಾರೆ.
ಭಾರತದಲ್ಲಿ ಭ್ರಷ್ಟಾಚಾರವನ್ನು ಮೂಲ ಸಹಿತ ಕಿತ್ತೊಗೆಯುವ ರಾಜಕೀಯ ನಾಯಕತ್ವ ದಶಕದ ನಂತರ ಮೋದಿ ಅವರಿಂದ ದೊರಕಿದೆ. ನಗರ ಆಡಳಿತದಲ್ಲಿ ನಾಗರಿಕ ಹಿತಾಸಕ್ತಿಗಳಿಗಿಂತ ಪಟ್ಟಭದ್ರ ಹಿತಾಸಕ್ತಿಗಳೇ ಮುಖ್ಯವಾಗಿವೆ. ನಿರ್ಲಕ್ಷ್ಯ ಮತ್ತು ಭ್ರಷ್ಟಾಚಾರದಿಂದ ನಗರ ಅಧೋಗತಿಯತ್ತ ಸಾಗುತ್ತಿದೆ. ಶಾಸಕರು, ಗುತ್ತಿಗೆದಾರರು ಹಾಗೂ ಬಿಲ್ಡರ್‍ಗಳು ಒಂದಾಗಿ ನಗರವನ್ನು ಕೊಳ್ಳೆ ಹೊಡೆಯುತ್ತಿದ್ದಾರೆ. ಇಂಥ ಸಂದರ್ಭದಲ್ಲಿ ಬೆಂಗಳೂರು ಸುಧಾರಣೆಗೆ ಉತ್ತಮ ಕಾರ್ಪೊರೇಟರ್‍ಗಳು ಬೇಕಾಗಿದ್ದಾರೆ. ಈ ಬಾರಿ ಚುನಾವಣೆಯಲ್ಲಿ ಬಿಜೆಪಿ ಉತ್ತಮ ಅಭ್ಯರ್ಥಿಗಳನ್ನು ಕಣಕ್ಕಿಳಿಸಿರುವುದರಿಂದ ಆ ಪಕ್ಷವನ್ನು ಬೆಂಬಲಿಸುವುದಾಗಿ ರಾಜೀವ್ ಚಂದ್ರಶೇಖರ್ ತಿಳಿಸಿದ್ದಾರೆ.
ಬಿಜೆಪಿ ಪ್ರಣಾಳಿಕೆಯಲ್ಲಿ ಆಡಳಿತ ಸುಧಾರಣೆ, ನಾಗರಿಕ ಪ್ರಾತಿನಿಧ್ಯ, ಉತ್ತರದಾಯಿತ್ವ, ಪಾರದರ್ಶಕತೆ ಮತ್ತು ಪ್ರಧಾನಿ ಮೋದಿ ಅವರ ಸ್ಮಾರ್ಟ್ ಸಿಟಿ ಯೋಜನೆ ಪರಿಕಲ್ಪನೆಯನ್ನು ಎತ್ತಿ ಹಿಡಿಯಲಾಗಿದೆ. ಆದ್ದರಿಂದ ಬಿಜೆಪಿಯನ್ನು ಬೆಂಬಲಿಸುವುದು ಸೂಕ್ತ ಎಂದು ಅವರು ಹೇಳಿದ್ದಾರೆ. ಈ ಬಾರಿ ಚುನಾವಣೆಯಲ್ಲಿ ಸಂತಸಪಡುವ ಮತ್ತೊಂದು ವಿಚಾರವೆಂದರೆ, ಎಲ್ಲಾ ಪಕ್ಷಗಳ ಅಭ್ಯರ್ಥಿಗಳು ಪ್ರಾಮಾಣಿಕತೆ ಮತ್ತು ನಗರ ಸುಧಾರಣೆ ಬಗ್ಗೆ ಪ್ರತಿಜ್ಞೆ ಸ್ವೀಕರಿಸಿರುವುದು. ಪಕ್ಷಗಳು ಅಭ್ಯರ್ಥಿಗಳು ಬೆಂಗಳೂರಿನ ಅಭಿವೃದ್ಧಿಗೆ ಕಟಿಬದಟಛಿರಾಗಿದ್ದೇವೆಂದು ಪ್ರಮಾಣ ಮಾಡಿರುವುದು ಸ್ವಾಗತಾರ್ಹ. ಹಾಗೆಯೇ ಅಂಥ ಪ್ರಾಮಾಣಿಕ ಮತ್ತು ದಕ್ಷ ಅಭ್ಯರ್ಥಿಗಳನ್ನು ಆಯ್ಕೆ ಮಾಡುವುದಕ್ಕೂ ಮತದಾರರು ಮುಂದಾಗಬೇಕು. ಇದಕ್ಕಾಗಿ ತಪ್ಪದೇ ಮತದಾನ ಮಾಡಬೇಕು ರಾಜೀವ್ ಚಂದ್ರಶೇಖರ್ ಕೋರಿದ್ದಾರೆ.