

ಬೆಂಗಳೂರು: ಬ್ರಿಗೇಡ್ ರಸ್ತೆ ಸಮೀಪದ ರೆಸ್ಟ್ ಹೌಸ್ ಸ್ಟ್ರೀಟ್‍ನಲ್ಲಿರುವ ಸೇನೆಯ ಗೆಸ್ಟ್ ಹೌಸ್ ಆವರಣದಲ್ಲಿದ್ದ ಶ್ರೀಗಂಧದ ಮರ ಕದಿಯುವ ಯತ್ನ ನಡೆಸಿ ಸೇನಾ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿರುವ ಘಟನೆ ಭಾನುವಾರ ನಡೆದಿದೆ. ನಸುಕಿನ 3 ಗಂಟೆ ಸುಮಾರಿಗೆ ಗೆಸ್ಟ್ ಹೌಸ್‍ನ ಗೋಡೆ ಹಾರಿದ ದುಷ್ಕರ್ಮಿಗಳು ಮರ ಕಡಿಯುತ್ತಿದ್ದರು. ಈ ವೇಳೆ ಗೆಸ್ಟ್‍ಹೌಸ್‍ನಲ್ಲಿದ್ದ ಮೇಜರ್ ಭಾರದ್ವಾಜ್ ಸದ್ದು ಕೇಳಿ ಹೊರಗೆ ಬಂದಿದ್ದಾರೆ. ಈ ವೇಳೆ ಮರ ಕತ್ತರಿಸುತ್ತಿರುವುದನ್ನು ಗಮನಿಸಿ ದುಷ್ಕರ್ಮಿಗಳನ್ನು ಹಿಡಿಯಲು ಮುಂದಾಗಿದ್ದಾರೆ. ಆದರೆ, ಗರಗಸದಿಂದ ಭಾರದ್ವಾಜ್ ಅವರ ಮೇಲೆ ಹಲ್ಲೆ ನಡೆಸಿ ಸ್ಥಳದಿಂದ ಪರಾರಿಯಾಗಿದ್ದಾರೆ.
ಈ ಸಂಬಂಧ ಕಬ್ಬನ್‍ಪಾರ್ಕ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಗೆಸ್ಟ್ ಹೌಸ್‍ನ ಕಾಂಪೌಂಡ್ ಎತ್ತರವಾಗಿಲ್ಲ. ಹೀಗಾಗಿ, ದುಷ್ಕರ್ಮಿ ಗಳು ಸುಲಭವಾಗಿ ಒಳ ಪ್ರವೇಶಿಸಿದ್ದಾರೆ. 2 ತಿಂಗಳ ಹಿಂದೆಯೂ ಮರ ಕಡಿಯುವ ಯತ್ನ ನಡೆದಿದೆ. ಎಂದು ಹಿರಿಯ ಪೊಲೀಸ್ ಅಧಿಕಾರಿ ಹೇಳಿದರು. ಕಳೆದ ಒಂದು ತಿಂಗಳಲ್ಲಿ ಎರಡನೇ ಸಲ ಈ ರೀತಿ ಮರ ಕಳ್ಳತನ ಯತ್ನ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.