

ಬೆಂಗಳೂರು: ಅತ್ಯಂತ ವಿರಳ ಹಾಗೂ ಕ್ಲಿಷ್ಟಕರವಾದ ವ್ಯಾಸ್ಕುಲಾರ್ ಮತ್ತು ಎಂಡೋ ವ್ಯಾಸ್ಕುಲಾರ್ ಎಂಬ ತಂತ್ರಜ್ಞಾನ ಅಳವಡಿಸಿ ಶಸ್ತ್ರಚಿಕಿತ್ಸೆ ಮೂಲಕ ಬೆಂಗಳೂರಿನ ಜೈನ್ ಆಸ್ಪತ್ರೆ ವೈದ್ಯರು ಪಾಕಿಸ್ತಾನದ ರೋಗಿಯೊಬ್ಬರಿಗೆ ಮರುಜೀವ ನೀಡಿದ್ದಾರೆ. ಅಹಮ್ಮದ್ ರೆಹಮಾನ್ ಎಂಬುವರೇ ರೋಗದಿಂದ ಗುಣಮುಖರಾದ ಪಾಕಿಸ್ತಾನಿ ಪ್ರಜೆ.
39 ವರ್ಷದ ಪಾಕಿಸ್ತಾನದ ಪ್ರಜೆ ರೆಹಮಾನ್ ಅಹಮ್ಮದ್ 2008ರಿಂದ ತೀವ್ರ ಎದೆ, ಬೆನ್ನು ನೋವು ಮತ್ತು ಅತಿಯಾದ ರಕ್ತದೊತ್ತಡದಿಂದ ಬಳಲುತ್ತಿದ್ದರು. ಪಾಕಿಸ್ತಾನದ ಕರಾಚಿಯ ಖಾಸಗಿ ಸ್ಪತ್ರೆಯಲ್ಲಿ ತಪಾಸಣೆ ಮಾಡಿದಾಗ `ಅರೋಟಿಕ್ ಡಿಸೆಕ್ಷನ್ ಟೈಪ್-ಬಿ' ಎಂಬ ಅಪಾಯಕಾರಿ ಸಮಸ್ಯೆ ಇರುವುದು ಪತ್ತೆಯಾಯಿತು. ಈ ಸಮಸ್ಯೆ ಪರಿಹಾರಕ್ಕೆ ಎಂಡೋ ವ್ಯಾಸ್ಕುಲಾರ್ ಶಸ್ತ್ರಚಿಕಿತ್ಸೆ ಅನಿವಾರ್ಯವಾಗಿದ್ದರಿಂದ ಕರಾಚಿಯಲ್ಲಿ ರೆಹಮಾನ್ ಅಹಮ್ಮದ್ ಸಂಬಂಧಿಕರೊಬ್ಬರು ಅಮೆರಿಕ ಅಥವಾ ಬೆಂಗಳೂರಿನ ಜೈನ್ ಆಸ್ಪತ್ರೆಗೆ ತೆರಳುವಂತೆಸಲಹೆ ನೀಡಿದ್ದಾರೆ. ಅದರಂತೆ ಜೈನ್ ಆಸ್ಪತ್ರೆಯಲ್ಲಿ ನ.20ರಂದು 6 ಗಂಟೆಗಳ ಲ ಹಾಗೂ ನವೆಂಬರ 27 ರಂದು 3 ಗಂಟೆಗಳ ಕಾಲ ಶಸ್ತ್ರಚಿಕಿತ್ಸೆ ಮಾಡಿ ದ್ದಾರೆ. ಈಗ ಹಮಾನ್ ಅಹಮ್ಮದ್ ಈಗ ಸಂಪೂರ್ಣ ಗುಣಮುಖರಾಗಿದ್ದಾರೆ.