ತಮಿಳುನಾಡು ಸಂತ್ರಸ್ತರಿಗೆ ಸಂಸದ ರಾಜೀವ್ ನೆರವು

ರಾಜ್ಯಸಭಾ ಸದಸ್ಯ ರಾಜೀವ್ ಚಂದ್ರಶೇಖರ್ ಅವರು ಚೆನ್ನೈ ಸಂತ್ರಸ್ತರಿಗೆ ಸಂಸತ್ ಸದಸ್ಯರ ಕ್ಷೇತ್ರಾಭಿವೃದ್ಧಿ (ಎಂಪಿಎಲ್ ಎಡಿ)ನಿಧಿಯಿಂದ ರು.50 ಲಕ್ಷ ದೇಣಿಗೆ ನೀಡುವುದಾಗಿ ಘೋಷಿಸಿದ್ದಾರೆ. ಜೊತೆಗೆ ವೈಯಕ್ತಿಕವಾಗಿಯೂ ಅವರು ತಮ್ಮ ಸಾಮಥ್ರ್ಯಕ್ಕೆ ಅನುಗುಣವಾಗಿ ದೇಣಿಗೆ ನೀಡುವುದಾಗಿ ಹೇಳಿದ್ದಾರೆ...
ರಾಜ್ಯಸಭಾ ಸದಸ್ಯ ರಾಜೀವ್ ಚಂದ್ರಶೇಖರ್ (ಸಂಗ್ರಹ ಚಿತ್ರ)
ರಾಜ್ಯಸಭಾ ಸದಸ್ಯ ರಾಜೀವ್ ಚಂದ್ರಶೇಖರ್ (ಸಂಗ್ರಹ ಚಿತ್ರ)
Updated on: 

ಬೆಂಗಳೂರು: ರಾಜ್ಯಸಭಾ ಸದಸ್ಯ ರಾಜೀವ್ ಚಂದ್ರಶೇಖರ್ ಅವರು ಚೆನ್ನೈ ಸಂತ್ರಸ್ತರಿಗೆ ಸಂಸತ್ ಸದಸ್ಯರ ಕ್ಷೇತ್ರಾಭಿವೃದ್ಧಿ (ಎಂಪಿಎಲ್ ಎಡಿ)ನಿಧಿಯಿಂದ ರು.50 ಲಕ್ಷ ದೇಣಿಗೆ ನೀಡುವುದಾಗಿ ಘೋಷಿಸಿದ್ದಾರೆ. ಜೊತೆಗೆ ವೈಯಕ್ತಿಕವಾಗಿಯೂ ಅವರು ತಮ್ಮ ಸಾಮಥ್ರ್ಯಕ್ಕೆ ಅನುಗುಣವಾಗಿ ದೇಣಿಗೆ ನೀಡುವುದಾಗಿ ಹೇಳಿದ್ದಾರೆ.

ಕಳೆದ 2013ರ ಜೂನ್‍ನಲ್ಲಿ ಉತ್ತರಾಖಂಡ ನೆರೆ ಸಂದರ್ಭದಲ್ಲೂ ರಾಜೀವ್ ಚಂದ್ರ ಶೇಖರ್ ಎಂಪಿಎಲ್‍ಡಿಯಿಂದ ರು.25 ಲಕ್ಷ ದೇಣಿಗೆ ನೀಡಿದ್ದರು. 2009ರಲ್ಲಿ ಉತ್ತರ ಕರ್ನಾಟಕದಲ್ಲಿ ನೆರೆ ಬಂದಾಗ ತಮ್ಮ ಪ್ರತಿಷ್ಠಾನ ಮೂಲಕ ಶಿರಬಡಗಿ ಹಳ್ಳಿಯನ್ನು ದತ್ತು ತೆಗೆದುಕೊಂಡು ಮರು ನಿರ್ಮಾಣ ಮಾಡಿದ್ದರು. 300 ಮನೆಗಳನ್ನು ಪುನರ್ ನಿರ್ಮಾಣ ಮಾಡಿಕೊಟ್ಟಿದ್ದರು.

ಕಾರ್ಪೊರೇಟ್ ಕಂಪನಿಗಳ ದೇಣಿಗೆ-ಯಿಂದ ನಡೆಯುವ ಆಸರೆ ಕಾರ್ಯಕ್ರಮಕ್ಕೆ ರಾಜೀವ್ ಚಂದ್ರಶೇಖರ್ ಸಮನ್ವಯಕಾರರಾಗಿದ್ದು, ಇದರಡಿ 30,000 ಮನೆಗಳು ನಿರ್ಮಾಣಗೊಂಡಿವೆ ಎಂದು ಪ್ರಕಟಣೆ ತಿಳಿಸಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com