ಚೆನ್ನೈ ಸಂತ್ರಸ್ತರಿಗೆ ನೀವೂ ನೆರವಾಗಲು ಬಯಸುತ್ತೀರಾ?

ಕುಂಭದ್ರೋಣ ಮಳೆಯಿಂದ ಸಂಕಷ್ಟದಲ್ಲಿರುವ ಚೆನ್ನೈ ನಗರದ ನಿವಾಸಿಗಳಿಗೆ ಆಹಾರ ಪದಾರ್ಥಗಳ ಪೂರೈಕೆಗೆ ಮೈಸೂರು ಪೌರ ಮತ್ತು ಸಾಮಾಜಿಕ ಪ್ರಗತಿ ಲೋಕಮಾನ್ಯ ಸಂಘ ಮುಂದಾಗಿದ್ದು ನಗರದ ನಿವಾಸಿಗಳು ಆಹಾರ ಪದಾರ್ಥ ಮತ್ತು ನೀರಿನ ಬಾಟಲಿ ನೀಡಬೇಕೆಂದು ಸಂಘದ ಕಾರ್ಯದರ್ಶಿ...
(ಸಂಗ್ರಹ ಚಿತ್ರ)
(ಸಂಗ್ರಹ ಚಿತ್ರ)
Updated on: 

ಬೆಂಗಳೂರು: ಕುಂಭದ್ರೋಣ ಮಳೆಯಿಂದ ಸಂಕಷ್ಟದಲ್ಲಿರುವ ಚೆನ್ನೈ ನಗರದ ನಿವಾಸಿಗಳಿಗೆ ಆಹಾರ ಪದಾರ್ಥಗಳ ಪೂರೈಕೆಗೆ ಮೈಸೂರು ಪೌರ ಮತ್ತು ಸಾಮಾಜಿಕ ಪ್ರಗತಿ ಲೋಕಮಾನ್ಯ ಸಂಘ ಮುಂದಾಗಿದ್ದು ನಗರದ ನಿವಾಸಿಗಳು ಆಹಾರ ಪದಾರ್ಥ ಮತ್ತು ನೀರಿನ ಬಾಟಲಿ ನೀಡಬೇಕೆಂದು ಸಂಘದ ಕಾರ್ಯದರ್ಶಿ ಡಿ.ನಂ. ವೆಂಕಟರಮಣಯ್ಯ ಮನವಿ ಮಾಡಿದ್ದಾರೆ.

5 ಚಪಾತಿ, 2 ರಿಂದ 3 ಚಮಚ ಸಕ್ಕರೆ ಪೊಟ್ಟಣ, 2ರಿಂದ 3 ಚಮಚ ಚಟ್ನಿಪುಡಿ, ಸ್ವಲ್ಪ ಉಪ್ಪಿನಕಾಯಿ, 1 ಈರುಳ್ಳಿ ಸೇರಿಸಿರುವ ಒಂದೊಂದು ಪ್ಯಾಕೇಟ್ ಮತ್ತು ಕುಡಿಯುವ ನೀರಿನ 1 ಮತ್ತು 2 ಲೀಟರ್‍ನ ಬಾಟಲಿಗಳನ್ನು ನೀಡಬಹುದಾಗಿದೆ. ಆಹಾರ ಪದಾರ್ಥಗಳನ್ನು ಬುಧವಾರ ತಯಾರಿಸಿರಬೇಕು. ಇದರ ಜೊತೆಗೆ ಪುಟ್ಟ ಮಕ್ಕಳಿಗಾಗಿ ಹಾಲು, ಬೇಬಿ ಫುಡ್, ಸಿಹಿ ಹಾಗೂ ಖಾರಾ ಬನ್ ನೀಡಬಹುದಾಗಿದೆ.

ಡಿ.10ರಂದು ಚೆನ್ನೈಗೆ ತೆರಳುತ್ತಿದ್ದು, ಡಿ.9ರ ಸಂಜೆ 6 ಗಂಟೆ ಒಳಗೆ ಬುಧವಾರವೇ ತಯಾರಿಸಿದ್ದ ಆಹಾರ ಪದಾರ್ಥ ಕೋಟಾ ವಿಜಯಲಕ್ಷ್ಮಿ ಕಲ್ಯಾಣ ನಿಲಯ, ಸಜ್ಜನರಾವ್ ವೃತ್ತ ವಿಶ್ವೇಶ್ವರಪುರ ಇಲ್ಲಿಗೆ ತಲುಪಿಸಲು ಕೋರಲಾಗಿದೆ. ಹೆಚ್ಚಿನ ಮಾಹಿತಿಗೆ ವೆಂಕಟೇಶ್ ಬಾಬು ಮೊ. 9945774428, ಎಂ.ಆರ್. ನಟರಾಜ್ ಮೊ. 9964508085 ನ್ನು ಸಂಪರ್ಕಿಸಬಹುದಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com