

ಬೆಂಗಳೂರು: ರಾಜ್ಯದಲ್ಲಿ ಏಕರೂಪ ಶಿಕ್ಷಣ ವ್ಯವಸ್ಥೆ ಜಾರಿಗೆ ತರುವುದಕ್ಕೆ ರಾಜಕಾರಣಿಗಳಿಂದಲೇ ವಿರೋಧ ವ್ಯಕ್ತವಾಗುತ್ತಿದೆ ಎಂದು ಶಾಸಕ ಕೆ.ಆರ್.ರಮೇಶ್ ಕುಮಾರ್ ಅಸಮಾಧಾನ ವ್ಯಕ್ತಪಡಿಸಿದರು.
ಪ್ರೆಸ್‍ಕ್ಲಬ್‍ನಲ್ಲಿ ಶುಕ್ರವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಬಿ.ವಿ.ಸತ್ಯನಾರಾಯಣರಾವ್ ಅವರ ಸಾರ್ವಜನಿಕ ಶಿಕ್ಷ ಒಂದು ಕ್ಷ ಕರಿಣ ಕೃತಿ ಲೋಕಾರ್ಪಣೆಗೊಳಿಸಿ ಮಾತನಾಡಿದ ಅವರು, ಬಹುತೇಕ ಖಾಸಗಿ ಶಿಕ್ಷಣ ಸಂಸ್ಥೆಗಳು ರಾಜಕಾರಣಿಗಳ ಹಿಡಿತದಲ್ಲಿವೆ. ಹೀಗಾಗಿ ಏಕರೂಪದ ಶಿಕ್ಷ ವ್ಯವಸ್ಥೆಯಿಂದ ಖಾಸಗಿ ಸಂಸ್ಥೆಗಳ ಏಳಿಗೆಗೆ ತೊಂದರೆಯಾಗುವ ಸಂಭವ ಇರುವುದರಿಂದ ರಾಜಕಾರಣಿಗಳು ಅಡ್ಡಿಪಡಿಸುತ್ತಿದ್ದಾರೆ ಎಂದು ಅಭಿಪ್ರಾಯಪಟ್ಟರು.
ಭ್ರಷ್ಟಾಚಾರ ಎಂಬುದು ಯಾವುದೇ ಒಂದು ಜಾತಿ, ಧರ್ಮ ಅಥವಾ ಸಮಾಜಕ್ಕೆ ಸೀಮಿತವಾಗಿಲ್ಲ. ಎಲ್ಲೆಡೆ ಕ್ಯಾನ್ಸರ್ ರೋಗದಂತೆ ವ್ಯಾಪಕವಾಗಿ ಹರಡುತ್ತಿದೆ. ಈ ರೀತಿ ಸಮಾಜದಲ್ಲಿ ತುಂಬಿ ತುಳುಕು ತ್ತಿರುವ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಲು ಶಿಕ್ಷಣದಿಂದ ಮಾತ್ರ ಸಾಧ್ಯ ಎಂದರು.
ಜಾತಿ ವ್ಯವಸ್ಥೆಯಿಂದ ಸಮಾಜದ ಮೌಲ್ಯಗಳೇ ಕ್ಷೀಣಿಸುತ್ತಿವೆ. ಇದರ ವಿರುದ್ಧ ಪ್ರಗತಿಪರ ಚಿಂತಕರ ನೆರವು ಪಡೆದು ಹೋರಾಡಬೇಕು. ಈ ಮೂಲಕ ಜಾತಿ ವ್ಯವಸ್ಥೆಯಿಂದ ಮುಕ್ವಾದ ಸಮಾಜ ನಿರ್ಮಾಣ ಮಾಡಬೇಕು. ಬಹುತೇಕ ಮನಸ್ಸುಗಳು ಸತ್ಯವನ್ನೇ ಒಪ್ಪುವುದಿಲ್ಲ. ಇಂತಹ ಮನಸ್ಥಿತಿಯೇ ಅಸಹಿಷ್ಣುತೆಗೆ ಕಾರಣವಾಗುತ್ತಿದೆ. ಅಲ್ಲದೆ, ಪ್ರತಿಯೊಬ್ಬರಿಗೂ ಅಭಿವ್ಯಕ್ತಿ ಸ್ವಾತಂತ್ರ್ಯವಿದ್ದರೂ, ಅದನ್ನು ವ್ಯಕ್ತಪಡಿಸಲು ರಾಜ್ಯದಲ್ಲಿ ಅವಕಾಶವೇ ಇಲ್ಲದಾಗಿದೆ ಎಂದರು. ವಕೀಲ ಶಂಕರಪ್ಪ, ಲೇಖಕ ಬಿ.ವಿ.ಸತ್ಯನಾರಾಯಣರಾವ್ (ಸತ್ಯವಿಠಲ) ಹಾಜರಿದ್ದರು.