

ಬೆಂಗಳೂರು: ವಿಶ್ವವಿದ್ಯಾಲಯಗಳ ಪ್ರವೇಶಾತಿ ಪ್ರಕ್ರಿಯೆಯನ್ನು ಸಂಪೂರ್ಣ ಆನ್ ಲೈನ್ ಮುಖಾಂತರವೇ ನಡೆಸಬೇಕೆಂದು ವಿಶ್ವವಿದ್ಯಾನಿಲಯ ಧನಸಹಾಯ ಆಯೋಗ ದೇಶದ ಎಲ್ಲಾ ವಿವಿಗಳಿಗೆ ಸೂಚನೆ ನೀಡಿದೆ.
ವಿವಿಗಳ ಪ್ರವೇಶಾತಿ ಪ್ರಕ್ರಿಯೆ ಅಚ್ಚುಕಟ್ಟಾಗಿ, ಪಾರದರ್ಶಕ ಮತ್ತು ಸುಸೂತ್ರವಾಗಿ ನಡೆಯ ಬೇಕೆಂದರೆ ಆನ್‍ಲೈನ್ ವ್ಯವಸ್ಥೆ ಜಾರಿಗೆ ತರಬೇಕು. ಈ ಹಿನ್ನೆಲೆ ಯಲ್ಲಿ 2016ರ ಜೂನ್-ಜುಲೈ ನಿಂದ ಆರಂಭವಾಗುವ ಮುಂದಿನ ಶೈಕ್ಷಣಿಕ ವರ್ಷದಿಂದ ಈ ವ್ಯವಸ್ಥೆಯನ್ನು ಜಾರಿಗೆ ತರಬೇಕೆಂದು ವಿವಿ ಗಳಿಗೆ ಸೂಚಿಸಿದೆ. ಸದ್ಯ ಪ್ರವೇಶ ಪ್ರಕ್ರಿಯೆಯನ್ನು ಆರಂಭಿಸುವ ನಿಟ್ಟಿನಲ್ಲಿ ಪ್ರಕ್ರಿಯೆ ಆರಂಭಿಸಿದ್ದರೆ ಈ ಸಾಲಿನಿಂದ ಪೂರ್ಣ ಪ್ರಮಾಣದಲ್ಲಿ ಪ್ರವೇಶ ಪ್ರಕ್ರಿಂುÉುಯನ್ನು ಆನ್‍ಲೈನ್‍ನಲ್ಲೇ ನಡೆಸಬೇಕು ಎಂದು ಸ್ಪಷ್ಟವಾಗಿ ಸೂಚಿಸಲಾಗಿದೆ. ಕರ್ನಾಟಕದ ವಿಚಾರಕ್ಕೆ ಬಂದರೆ, ಈಗಾಗಲೇ ಬಹುತೇಕ ಎಲ್ಲಾ ವಿವಿಗಳು ಆನ್ ಲೈನ್ ಪ್ರವೇಶ ಪ್ರಕ್ರಿಯೆಯನ್ನು ಅಳವಡಿಸಿಕೊಂಡಿವೆ. ಕೆಲವು ವಿವಿ ಗಳಲ್ಲಿ ಮಾತ್ರ ಪೂರ್ತಿಯಾಗಿ ಅನುಷ್ಠಾನಗೊಂಡಿಲ್ಲ.