ವಂಡರ್‍ಲಾ ಕಾರ್ನಿವಲ್

ವಂಡರ್ ಲಾ ಅಮ್ಯೂಸ್‍ಮೆಂಟ್ ಪಾರ್ಕ್‍ನಲ್ಲಿ ಡಿ.24ರಿಂದ ವಂಡರ್‍ಲಾ ಕಾರ್ನಿವಲ್ ಪ್ರಾರಂಭವಾಗಿದ್ದು ಜ.3ರವರೆಗೆ ನಡೆಯಲಿದೆ. ಈ ದಿನಗಳಲ್ಲಿ ಸಾಹಸಮಯ...
ವಂಡರ್ ಲಾ
ವಂಡರ್ ಲಾ

ಬೆಂಗಳೂರು: ವಂಡರ್ ಲಾ ಅಮ್ಯೂಸ್‍ಮೆಂಟ್ ಪಾರ್ಕ್‍ನಲ್ಲಿ ಡಿ.24ರಿಂದ ವಂಡರ್‍ಲಾ ಕಾರ್ನಿವಲ್ ಪ್ರಾರಂಭವಾಗಿದ್ದು ಜ.3ರವರೆಗೆ ನಡೆಯಲಿದೆ. ಈ ದಿನಗಳಲ್ಲಿ ಸಾಹಸಮಯ ರೈಡ್‍ಗಳು, ಮನರಂಜನೆ, ಸಂಗೀತ ಕಾರ್ಯಕ್ರಮ, ತಿಂಡಿ-ತಿನಿಸು, ಬಾಣ ಬಿರುಸು, ಗೃಹಾಲಂಕಾರ, ಕರಕುಶಲ ವಸ್ತುಗಳು ಸೇರಿದಂತೆ ವಿವಿಧ ಷಾಪಿಂಗ್ ಅನುಭವ ದೊರೆಯಲಿದೆ. ದೇಶ್ ತಂಡ ಜನಪದ ಸಂಗೀತ ಮತ್ತು ಕನ್ನಡ, ಹಿಂದಿ ಸಂಗೀತವನ್ನು ನುಡಿಸಲಿದೆ, ಬ್ಲೈಂಡ್ಸ್, ಬೆಂಗಳೂರಿನ ಮ್ಯೂಸಿಕ್ ಬ್ಯಾಂಡ್ ಮನರಂಜನೆ ನೀಡಲಿದೆ. ಚಕ್ರವ್ಯೂಹ ತಂಡ ಬ್ಲೂಸ್, ರಾಕ್, ಇಂಡಿಯನ್ ಸಮಕಾಲೀನ ಸಂಗೀತ ನುಡಿಸಲಿದ್ದು, ಹಿಂದಿ ರಾಕ್, ಪಾಪ್, ಬಾಲಿವುಡ್, ಬಾಂಗ್ಲಾ ಸಂಗೀತ ನಡೆಯಲಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com