

ಬೆಂಗಳೂರು: ಮಾಜಿ ಮುಖ್ಯಮಂತ್ರಿ ಜಗ ದೀಶ್ ಶೆಟ್ಟರ್ ವಿರುದ್ಧ ಬಿಎಂಟಿಎಸಿ ದಾಖಲಿಸಿದ್ದ ಎಫ್ಐಆರ್ ರದ್ದು ಕೋರಿ ಸಲ್ಲಿಸಿದ್ದ ಅರ್ಜಿಗೆ ಸಂಬಂಧಿಸಿದಂತೆ ಹೈಕೋರ್ಟ್ ತೀರ್ಪು ಕಾಯ್ದಿರಿಸಿದೆ.
ಶ್ರೀಗಂಧ ಕಾವಲ್ ಸಮೀಪದ ಗೋಲ್ಡನ್ ವ್ಯಾಲಿ ಎಜುಕೇಷನ್ ಟ್ರಸ್ಟ್‍ಗೆ ನೀಡಲಾಗಿದ್ದ ನಾಲ್ಕು ಎಕರೆ ಜಮೀನನ್ನು ಸ್ವಾತಂತ್ರ್ಯ ಹೋರಾಟಗಾರರೊಬ್ಬರ ಪುತ್ರನಿಗೆ ಮಂಜೂರು
ಮಾಡಿದ ಆರೋಪದ ಮೇಲೆ ಅವರ ವಿರುದ್ದ ಬಿಎಂಟಿಎಸಿ ದೂರು ದಾಖಸಿತ್ತು. ವಿಚಾರಣೆ ನಡೆಸಿದ ನ್ಯಾ.ಆರ್. ಬಿ.ಬೂದಿಹಾಳ್ ಅವರ ಪೀಠ, ತೀರ್ಪು ಕಾಯ್ದಿರಿಸಿದೆ.
ಏನಿದು ವಿವಾದ?
ಶ್ರೀಗಂಧ ಕಾವಲ್ ಬಳಿ ಇದ್ದ 47 ಎಕರೆ 11 ಗುಂಟೆ ಸರ್ಕಾರಿ ಜಮೀನನ್ನು ಕೃಷಿಯಿಂದ ಕೃಷಿಯೇತರ ಎಂದು ಪರಿವರ್ತಿಸಲಾಗಿತ್ತು. ಈ ಪೈಕಿ 10 ಎಕರೆಯನ್ನು ಒಕ್ಕಲಿಗರ
ಸಂಘ ಹಾಗೂ 15 ಎಕರೆಯನ್ನು ಗೋಲ್ಡನ್ ವ್ಯಾಲಿ ಎಜುಕೇಷನ್ ಸಂಸ್ಥೆಗೆ 30 ವರ್ಷ ಗುತ್ತಿಗೆಗೆ ನೀಡಲಾಗಿತ್ತು.ಗುತ್ತಿಗೆ ಅವಧಿ ಮುಗಿದ ಮೇಲೆ ಗೋಲ್ಡನ್ ವ್ಯಾಲಿ ಎಜುಕೇಷನ್ ಟ್ರಸ್ಟ್‍ನ 15 ಎಕರೆ ಜಮೀನಿನಲ್ಲಿ ನಾಲ್ಕು ಎಕರೆಯನ್ನು ಶೆಟ್ಟರ್ ಅವರು ಮುಖ್ಯಮಂತ್ರಿಯಾಗಿದ್ದ ವೇಳೆ ಸುಂದರೇಶ್‍ಗೆ ಮಂಜೂರು ಮಾಡಿದ್ದಾರೆ ಎಂಬ ಆರೋಪ ಸಂಬಂಧ ಬಿಎಂಟಿಎಸಿ ಎಫ್ಐಆರ್ ದಾಖಲಿಸಿತ್ತು.