ಮಾದಕವಸ್ತು ಮಾರಾಟ: ಆರೋಪಿ ಸೆರೆ

ಮಾದಕ ವಸ್ತು ಗಾಂಜಾ ಹಾಗೂ ಕೊಕೈನ್ ಮಾರಾಟ ಮಾಡುತ್ತಿದ್ದ ನೈಜೀರಿಯಾ ಮೂಲದ ಪಾಲ್ ಎಜೆನ್ವ(27) ಎಂಬಾತನನ್ನು ಸಿಸಿಬಿ...
ಮಾದಕವಸ್ತು ಮಾರಾಟ: ಆರೋಪಿ ಸೆರೆ

ಬೆಂಗಳೂರು: ಮಾದಕ ವಸ್ತು ಗಾಂಜಾ ಹಾಗೂ ಕೊಕೈನ್ ಮಾರಾಟ ಮಾಡುತ್ತಿದ್ದ ನೈಜೀರಿಯಾ ಮೂಲದ ಪಾಲ್ ಎಜೆನ್ವ(27) ಎಂಬಾತನನ್ನು ಸಿಸಿಬಿ ಪೊಲೀಸರು ಬಂಧಿಸಿದ್ದು, ಆತನಿಂದ ಕೊಕೈನ್ ಹಾಗೂ 50 ಗ್ರಾಂ. ಗಾಂಜಾ ವಶಪಡಿಸಿಕೊಂಡಿದ್ದಾರೆ.

ಎರಡು ವರ್ಷದ ಹಿಂದೆ ಗೋವಾ ಮುಖಾಂತರ ಭಾರತಕ್ಕೆ ಬಂದಿದ್ದ ಈತ ಗೋವಾದಲ್ಲಿನ ಮಾದಕವಸ್ತು ಮಾರಾಟ ಗಾರರ ಜತೆ ಈ ಕೃತ್ಯದಲ್ಲಿ ಭಾಗಿಯಾಗಿದ್ದ. ಈತನ ವಿರುದ್ಧ ಹಲವು ಪ್ರಕರಣಗಳು ದಾಖಲಾಗಿದ್ದು, ಪೊಲೀಸರು ಆತನ ಪಾಸ್ಪೋರ್ಟ್ ವಶಪಡಿಸಿ ಕೊಂಡಿದ್ದಾರೆ. ಈತನ ವಿರುದ್ಧ ಎನ್ಡಿಪಿಎಸ್ ಕಾಯ್ದೆ ಅಡಿ ದೂರು ದಾಖಲಿಸಿ ಕೊಂಡಿದ್ದು, ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com