ಸುವರ್ಣ ವಿಧಾನಸೌಧದ ಸುತ್ತ ಗ್ರೀನ್ ಬೆಲ್ಟ್‌ಗೆ ರೆಡ್ ಸಿಗ್ನಲ್!

ಸುವರ್ಣ ವಿಧಾನಸೌಧದ ಸುತ್ತಮುತ್ತಲಿನ...
ಸುವರ್ಣ ವಿಧಾನಸೌಧ
ಸುವರ್ಣ ವಿಧಾನಸೌಧ
Updated on: 

ಬೆಳಗಾವಿ: ಸುವರ್ಣ ವಿಧಾನಸೌಧದ ಸುತ್ತಮುತ್ತಲಿನ ಪ್ರದೇಶದಲ್ಲಿನ ಗ್ರೀನ್ ಬೆಲ್ಟ್ ಯೋಜನೆ ಪ್ರಸ್ತಾವ ಸರ್ಕಾರಿ ಕಡತದಲ್ಲಿ ಧೂಳು ತಿನ್ನುತ್ತ ಬಿದ್ದಿದೆ.

ಮೂರು ವರ್ಷ ಹಿಂದೆಯೇ ಬೆಳಗಾವಿ ನಗರಾಭಿವೃದ್ಧಿ ಪ್ರಾಧಿಕಾರ ಸುವರ್ಣ ವಿಧಾನಸೌಧದ ಸುರಕ್ಷತೆಯ ದೃಷ್ಟಿಯಿಂದ ಈ ಯೋಜನೆಯ ಪ್ರಸ್ತಾವ ಸಿದ್ಧಪಡಿಸಿ ಮಂಜೂರಾತಿಗಾಗಿ ಸರ್ಕಾರಕ್ಕೆ ಕಳುಹಿಸಿದೆ. ಈವರೆಗೂ ಮಂಜೂರಾತಿ ಸಿಕ್ಕಿಲ್ಲ. ವಿಚಿತ್ರವೆಂದರೆ ಈ ನಿಯೋಜಿತ ಯೋಜನೆ ವ್ಯಾಪ್ತಿಯಲ್ಲಿಯೇ ಖಾಸಗಿ ಬಡಾವಣೆ ನಿರ್ಮಾಣಕ್ಕೆ ಆರಂಭಿಕ ಕಾರ್ಯಗಳು ನಡೆಯುತ್ತಿವೆ. ಗ್ರೀನ್ ಬೆಲ್ಟ್‌ಗೆ ಸರ್ಕಾರ ಅನುಮತಿ ನೀಡದಿದ್ದಲ್ಲಿ ಶೀಘ್ರದಲ್ಲಿಯೇ ಖಾಸಗಿ ಬಡಾವಣೆ ತಲೆ ಎತ್ತಲಿದೆ.

ಸುವರ್ಣ ವಿಧಾನಸೌಧದ ಸುತ್ತಮುತ್ತ ಸುಮಾರು 5 ಕಿ.ಮೀ.ವ್ಯಾಪ್ತಿ ಪ್ರದೇಶವನ್ನು ಹಸಿರು ವಲಯ ಎಂದು ಘೋಷಿಸಲು ಮೊದಲು ಬುಡಾ ನಿರ್ಧರಿಸಿತ್ತು. ಹಸಿರು ವಲಯ ಘೋಷಣೆಯಾದರೆ ಎಲ್ಲಿ ತಮ್ಮ ಜಮೀನನ್ನು ಕಳೆದುಕೊಳ್ಳಬೇಕಾಗುತ್ತದೋ ಎಂಬ ಭೀತಿಯಿಂದ ಈ ಯೋಜನೆಗೆ ರೈತರು ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಈ ಹಿನ್ನೆಲೆಯಲ್ಲಿ ಬುಡಾ ಅಧಿಕಾರಿಗಳು ಹಸಿರು ವಲಯದ ವ್ಯಾಪ್ತಿಯನ್ನು 1ಕಿ.ಮೀಗೆ ಸೀಮಿತಗೊಳಿಸಿದ್ದರು.

ಏನಿದು ಗ್ರೀನ್ ಬೆಲ್ಟ್?

ಸುವರ್ಣ ವಿಧಾನಸೌಧ ಸುತ್ತಮುತ್ತಲಿನ 1 ಕಿ.ಮೀ. ವ್ಯಾಪ್ತಿಯೊಳಗೆ ಗ್ರೀನ್ ಬೆಲ್ಟ್ (ಹಸಿರು ವಲಯ) ಯೋಜನೆ ಅನುಷ್ಠಾನಗೊಂಡರೆ ಈ ಪ್ರದೇಶ ವ್ಯಾಪ್ತಿಯಲ್ಲಿ ಯಾವುದೇ ಕಟ್ಟಡ ನಿರ್ಮಿಸುವುದು ನಿಷಿದ್ಧ. ಭೂ ಪರಿವರ್ತನೆ ಮಾಡಿ ಮಾರಾಟ ಮಾಡುವಂತಿಲ್ಲ.

ಬೆಳಗಾವಿ ನಗರ ಅಭಿವೃದ್ಧಿ ಯೋಜನೆ (ಸಿಡಿಪಿ)ಗೆ ರಾಜ್ಯ ಸರ್ಕಾರ ಕಳೆದ ವರ್ಷವಷ್ಟೇ ಮಂಜೂರು ನೀಡಿದೆ. ಈ ನಿಯೋಜನೆಯಲ್ಲಿ ಕಾಲಿ ಜಾಗ, ಟ್ರಕ್ ಟರ್ಮಿನಲ್, ಕೈಗಾರಿಕೆ ಪ್ರದೇಶ ಹಾಗೂ ವಸತಿ ಪ್ರದೇಶದ ಜಾಗದ ಅಭಿವೃದ್ಧಿಯೂ ಸೇರಿದ್ದು, ಈ ಯೋಜನೆ ಮುಂದಿನ 2019ರವರೆಗೆ ಅನ್ವಯವಾಗುತ್ತದೆ. ಹೊಸ ಸಿಡಿಪಿಯಲ್ಲಿ ಗ್ರೀನ್ ಬೆಲ್ಟ್ ಪ್ರಸ್ತಾವವೇ ಇಲ್ಲ. ಬೆಳಗಾವಿ ನಗರಾಭಿವೃದ್ಧಿ ಪ್ರಾಧಿಕಾರದ ವ್ಯಾಪ್ತಿಯಲ್ಲಿ 25 ಗ್ರಾಮಗಳ ರೈತರು ತಮ್ಮ ಜಮೀನು ಭೂ ಪರಿವರ್ತನೆ ಹೆಸರಿನಲ್ಲಿ ಹೊಸ ಬಡಾವಣೆಗಳಿಗೆ ಮಂಜೂರು ಪಡೆದಿದ್ದಾರೆ. ಸುವರ್ಣ ವಿಧಾನಸೌಧದ ಸುತ್ತಮುತ್ತ ಹಲವು ಖಾಸಗಿ ಬಡಾವಣೆಗಳು ತಲೆ ಎತ್ತಲಿವೆ. ಈಗಾಗಲೇ ಈ ಕುರಿತು ಪ್ರಕಟಣೆಗಳನ್ನು ನೀಡಲಾಗುತ್ತಿದೆ. ನಿವೇಶನಗಳನ್ನು ಗುರುತಿಸುವ ಕಾರ್ಯ ನಡೆದಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com