ಮೈಸೂರು ಇನ್ಫಿ ಕ್ಯಾಂಪಸ್ ಮೊದಲ ಸ್ಮಾರ್ಟ್ ಸಿಟಿ

ಕರ್ನಾಟಕಕ್ಕೆ ಇದು ಹೆಮ್ಮೆ ತರುವ ವಿಚಾರ. ಇನ್ಫೋಸಿಸ್‌ನ ಮೈಸೂರಿನ ಕ್ಯಾಂಪಸ್ ಅನ್ನು...
ಮೈಸೂರು ಇನ್ಫಿ ಕ್ಯಾಂಪಸ್ ಮೊದಲ ಸ್ಮಾರ್ಟ್ ಸಿಟಿ

ನವದೆಹಲಿ: ಕರ್ನಾಟಕಕ್ಕೆ ಇದು ಹೆಮ್ಮೆ ತರುವ ವಿಚಾರ.

ಇನ್ಫೋಸಿಸ್‌ನ ಮೈಸೂರಿನ ಕ್ಯಾಂಪಸ್ ಅನ್ನು ದೇಶದ ಮೊದಲ ಮಾದರಿ ಸ್ಮಾರ್ಟ್ ಸಿಟಿ ಎಂದು ಏಪ್ರಿಲ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಘೋಷಿಸಲಿದ್ದಾರೆ.

ಸ್ವತಃ ಇನ್ಫೋಸಿಸ್ ಸಿಇಒ ವಿಶಾಲ್ ಸಿಕ್ಕಾ ಈ ವಿಷಯ ತಿಳಿಸಿದ್ದಾರೆ. ಬುಧವಾರ ಅವರು ಪ್ರಧಾನಿ ಮೋದಿ ಅವರನ್ನು ಭೇಟಿಯಾಗಿದ್ದು ಈ ಬಗ್ಗೆ ಚರ್ಚಿಸಿದ್ದಾಗಿ ತಿಳಿಸಿದ್ದಾರೆ. ನಮ್ಮ ಮೈಸೂರು ಕ್ಯಾಂಪಸ್ ಒಂದು ಸಣ್ಣ ಸ್ಮಾರ್ಟ್ ಸಿಟಿಯಾಗಿದೆ. ಅಲ್ಲಿ ಸುಮಾರು 30 ಸಾವಿರ ಮಂದಿ ಬದುಕುತ್ತಿದ್ದಾರೆ ಹಾಗೂ ಕೆಲಸ ಮಾಡುತ್ತಿದ್ದಾರೆ. ಹಾಗಾಗಿ ನಾವು ನಮ್ಮ ಮೈಸೂರು ಕ್ಯಾಂಪಸ್ ಅನ್ನೇ ಮೊದಲ ಮಾದರಿ ಸ್ಮಾರ್ಟ್ ಸಿಟಿಯನ್ನಾಗಿ ಘೋಷಿಸಬೇಕೆಂದು ಪ್ರಧಾನಿಯನ್ನು ಕೇಳಿಕೊಂಡೆವು. ಏಪ್ರಿಲ್‌ನಲ್ಲಿ ಅದನ್ನು ಲೋಕಾರ್ಪಣೆ ಮಾಡಲು ಪ್ರಧಾನಿ ಮೋದಿ ಒಪ್ಪಿದ್ದಾರೆ ಎಂದು ಸಿಕ್ಕಾ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com