1500 ಪ್ರಗತಿಪರ ರೈತರಿಗೆ ಉಚಿತ ಟ್ಯಾಬ್ಲೆಟ್

ತಲೆನೋವಾದರೆ ಟ್ಯಾಬ್ಲೆಟ್ ತೆಗೆದುಕೊಳ್ಳುವುದು ಸಾಮಾನ್ಯ, ಆದರೆ ರೈತರು ಇನ್ನು ಕೃಷಿ ಕುರಿತ ತಲೆಬೇನೆ..
ಇ-ಕಿಸಾನ್ ಪ್ರತಿಷ್ಠಾನದಿಂದ ಪ್ರಗತಿಪರ ರೈತರಿಗೆ ಉಚಿತ ಟ್ಯಾಬ್ಲೆಟ್ (ಸಂಗ್ರಹ ಚಿತ್ರ)
ಇ-ಕಿಸಾನ್ ಪ್ರತಿಷ್ಠಾನದಿಂದ ಪ್ರಗತಿಪರ ರೈತರಿಗೆ ಉಚಿತ ಟ್ಯಾಬ್ಲೆಟ್ (ಸಂಗ್ರಹ ಚಿತ್ರ)
Updated on: 

ಬೆಂಗಳೂರು: ತಲೆನೋವಾದರೆ ಟ್ಯಾಬ್ಲೆಟ್ ತೆಗೆದುಕೊಳ್ಳುವುದು ಸಾಮಾನ್ಯ, ಆದರೆ ರೈತರು ಇನ್ನು ಕೃಷಿ ಕುರಿತ ತಲೆಬೇನೆಗೂ ಟ್ಯಾಬ್ಲೆಟ್ ಮೊರೆಹೋಗಬಹುದು!

ಅನಿವಾಸಿ ಭಾರತೀಯ ಯುವಕರು ಸೇರಿಕೊಂಡು ಇಂತಹದೊಂದು ವಿನೂತನ ಯೋಜನೆಯನ್ನು ರಾಜ್ಯ ಸರ್ಕಾರದ ಸಹಯೋಗದೊಂದಿಗೆ ಆರಂಭಿಸಿದ್ದಾರೆ. ಬಾಗಲಕೋಟೆ ಹಾಗೂ ವಿಜಯಪುರ ಜಿಲ್ಲೆಯ 1500 ಪ್ರಗತಿಪರ ರೈತರಿಗೆ ಇದರ ಲಾಭ ದೊರೆಯಲಿದೆ. ರೈತರಿಗೆ ಕೃಷಿ ಪದ್ಧತಿ, ಕೀಟ ಬಾಧೆ, ಹವಾಮಾನ ಮುನ್ಸೂಚನೆ, ಶಿಕ್ಷಣ ಹಾಗೂ ಆರೋಗ್ಯಕ್ಕೆ ಸಂಬಂಧಿಸಿದ ಮಾಹಿತಿಗಳನ್ನು ನೀಡಲಾಗುತ್ತದೆ.

ಯೋಜನೆ ಜವಾಬ್ದಾರಿ ಹೊತ್ತಿರುವ ಇ-ಕಿಸಾನ್ ಪ್ರತಿಷ್ಠಾನವು ಆಯ್ದ ಪ್ರಗತಿಪರ ರೈತರಿಗೆ ಆರಂಭದಲ್ಲಿ ಟ್ಯಾಬ್ಲೆಟ್ ಬಳಕೆ ಕುರಿತು ತರಬೇತಿ ನೀಡಲಿದೆ. ಬಳಿಕ ಉಚಿತವಾಗಿ ಈ ಟ್ಯಾಬ್ಲೆಟ್‍ಗಳನ್ನು ವಿತರಿಸಲಾಗುತ್ತದೆ. ಅಮೆರಿಕದಲ್ಲಿ ವಾಸವಾಗಿರುವ ಭಾರತದ ಎಂಜಿನಿಯರ್‍ಗಳ ಆಸಕ್ತಿಯಿಂದ ಈ ಯೋಜನೆ ನಡೆಯುತ್ತಿದೆ. ಆರಂಭದ ಮೂರು ತಿಂಗಳುಗಳ ಕಾಲ ಏರ್‍ಟೆಲ್ ಟೆಲಿಕಾಮ್ ಸಂಸ್ಥೆ ಉಚಿತವಾಗಿ ಡಾಟಾ ಸಂಪರ್ಕ ನೀಡಲಿದೆ. ನಂತರ ರೈತರು ಡಾಟಾ ಸಂಪರ್ಕಕ್ಕೆ ಹಣ ಖರ್ಚು ಮಾಡಬೇಕಾಗುತ್ತದೆ.

ಈ ಸಂದರ್ಭದಲ್ಲಿ ಮಾತನಾಡಿದ ಮಾಹಿತಿ ಹಾಗೂ ಜೈವಿಕ ತಂತ್ರಜ್ಞಾನ ಸಚಿವ ಎಸ್.ಆರ್.ಪಾಟೀಲ್, ದೇಶದ ಬಗ್ಗೆ ಅಪಾರ ನಿರೀಕ್ಷೆ ಹೊಂದಿರುವ ಅನಿವಾಸಿ ಭಾರತೀಯರು ಈ ಯೋಜನೆಗಾಗಿ ಸರ್ಕಾರಕ್ಕೆ ನೆರವು ನೀಡಿದ್ದಾರೆ. ಟ್ಯಾಬ್ಲೆಟ್ ಅಭಿವೃದ್ಧಿ ಹಾಗೂ ವಿತರಣೆಯ ಸಂಪೂರ್ಣ ಜವಾಬ್ದಾರಿಯನ್ನು ಇ- ಕಿಸಾನ್ ಪ್ರತಿಷ್ಠಾನವೇ ಹೊತ್ತಿದೆ ಎಂದು ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com