ಬೆಂಗಳೂರಿನಲ್ಲಿ ಒಂಟಿ ಮಹಿಳೆ ಕೊಲೆ

ಬೆಂಗಳೂರಿನಲ್ಲಿ ಒಂಟಿ ಮಹಿಳೆ ಕೊಲೆ
Updated on

ಬೆಂಗಳೂರು: ರಾಜಗೋಪಾಲ ನಗರದ ಪ್ರೀತಿ ನಗರದಲ್ಲಿ ಒಂಟಿ ಮಹಿಳೆ ಉಮಾ(35) ಅವರನ್ನು ಮಂಗಳವಾರ ಹಾಡಹಗಲೇ ಉಸಿರುಗಟ್ಟಿಸಿ ಕೊಲೆ ಮಾಡಲಾಗಿದೆ.

ಉಮಾ ಅವರಿಗೆ ರಮೇಶ್ ಎಂಬುವರ ಜತೆ 15 ವರ್ಷ ಹಿಂದೆ ಮದುವೆಯಾಗಿತ್ತು. ದಂಪತಿ ಇಬ್ಬರು ಮಕ್ಕಳಿದ್ದಾರೆ. ರಮೇಶ್ ಮೆಡಿಕಲ್ ಶಾಪ್ ನಡೆಸುತ್ತಿದ್ದಾರೆ. ಮಕ್ಕಳ ಪೈಕಿ ಒಬ್ಬಾತ ಶಾಲೆಗೆ, ಇನ್ನೊಬ್ಬ ಅಜ್ಜಿ ಮನೆಗೆ ಹೋಗಿದ್ದಾಗ ಮಧ್ಯಹ್ನ 2.30ರ ಸುಮಾರಿಗೆ ಕೃತ್ಯ ಎಸಗಲಾಗಿದೆ. ರಮೇಶ್ ಊಟಕ್ಕೆ ಬಂದಾಗ ಘಟನೆ ಬೆಳಕಿಗೆ ಬಂದಿದೆ.

ಮಧ್ಯಾಹ್ನ 1.30ರ ಹೊತ್ತಿಗೆ ಮನೆಯಿಂದ ಗಲಾಟೆ ಕೇಳಿಬಂದಿದ್ದು, ದಂಪತಿ ನಡುವೆ ಜಗಳವಾಗಿದೆ.  ಗಂಡನೇ ಕೊಲೆ ಮಾಡಿರಬಹುದು ಎನ್ನುವ ಶಂಕೆ ಇದೆ. ಆದರೆ ದಂಪತಿ ಅನ್ಯೋನ್ಯವಾಗಿದ್ದರೆಂದು ಮನೆ ಮಾಲೀಕ ತಿಳಿಸಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.

ರಾಜಗೋಪಾಲ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com