

ಬೆಂಗಳೂರು: ನೈಜಿರಿಯಾದ ಮಹಿಳೆ ಬಿಎಂಟಿಸಿ ನಿರ್ವಾಹಕನ ಮೇಲೆ ಹಲ್ಲೆ ಮಾಡಿರುವ ಘಟನೆ ಬೆಂಗಳೂರಿನ ವಿಲ್ಸನ್ ಗಾರ್ಡನ್ ನ ಹತ್ತನೇ ಅಡ್ಡರಸ್ತೆಯಲ್ಲಿ ನಡೆದಿದೆ.
ದಿನದ ಪಾಸ್ ಗೆ ಸಹಿ ಹಾಕಿ ಎಂದ ಬಸ್ ಕಂಡಕ್ಟರ್ ಮೇಲೆ ಕೋಪಗೊಂಡ ನಾಲ್ವರು ನೈಜಿರಿಯಾದ ಮಹಿಳೆಯರು ಹಲ್ಲೆ ನಡೆಸಿದ್ದಾರೆ. ನಿರ್ವಾಹಕ ದೇವೇಗೌಡ ಹಲ್ಲೆಗೊಳಗಾದವರು.
ನೈಜಿರೀಯಾ ಮಹಿಳೆಯರ ವಿರುದ್ಧ ನಿರ್ವಾಹಕ ದೂರು ದಾಖಲಿಸಿದ್ದು, ವಿಲ್ಸನ್ ಗಾರ್ಡನ್ ಪೊಲೀಸ್ ಠಾಣೆ ಎದುರು ಪ್ರತಿಭಟನೆ ನಡೆಸಿದರು.
ಕೂಡಲೇ ಪೊಲೀಸರು ನೈಜಿರಿಯಾ ಮಹಿಳೆಯರನ್ನು ಬಂಧಿಸಿದ್ದಾರೆ. ಕೆಂಪೇಗೌಡ ಬಸ್ ನಿಲ್ದಾಣದಿಂದ ಆನೇಕಲ್ ಮಾರ್ಗದ ಬಸ್ ಆಗಿತ್ತು. ಮಹಾರಾಣಿಗೆ ಕಾಲೇಜು ಬಳಿ ಬಸ್ ನಿಲ್ಲಿಸಿ ಪಾಸ್ ತೋರಿಸುವಂತೆ ನಿರ್ವಾಹಕರು ಕೇಳಿದ್ದಾರೆ. ಬಸ್ ಪಾಸ್ ನಲ್ಲಿ ಸಹಿ ಇಲ್ಲದೇ ಇರುವ ಕಾರಣ ಸಹಿ ಮಾಡುವಂತೆ ನಿರ್ವಾಹಕ ಸೂಚಿಸಿದ್ದಾರೆ. ಇದಕ್ಕೆ ಕುಪಿತಗೊಂಡ ನೈಜಿರಿಯಾ ಮಹಿಳೆಯರು ಏಕಾಎಕಿ ನಿರ್ವಾಹಕ ಮೇಲೆ ಹಲ್ಲೆ ಮಾಡಿದ್ದಾರೆ. ಇದನ್ನು ಪ್ರಯಾಣಿಕರೊಬ್ಬರು ಮೊಬೈಲ್ ನಲ್ಲಿ ಚಿತ್ರೀಕರಿಸಿದ್ದಾರೆ.