

ಬೆಂಗಳೂರು: ಎಸ್ ಜಿಎಸ್ ಅಂತರಾಷ್ಟ್ರೀಯ ಯೋಗ ಪ್ರತಿಷ್ಠಾನದ ಸಂಸ್ಥಾಪಕ ಅಧ್ಯಕ್ಷ ಆಚಾರ್ಯ ಎಂ ನಿರಂಜನಮೂರ್ತಿ ಅವರಿಗೆ ಅಂತರ ರಾಷ್ಟ್ರೀಯ ಮಾಸ್ಟರ್ ಎಂಬ ಬಿರುದು ಪ್ರಧಾನ ಮಾಡಲಾಗಿದೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ನಿರಂಜನಮೂರ್ತಿ, ಬೀಜಿಂಗ್ ನಲ್ಲಿ ಜೂ.25ರಂದು ನಡೆದ ಅಂತರಾಷ್ಟ್ರೀಯ ಯೋಗ ಮಾಸ್ಟರ್ ಸಮಾರೋಪ ಸಮಾರಂಭದಲ್ಲಿ ಈ ಬಿರುದು ಪ್ರದಾನ ಮಾಡಲಾಯಿತು ಎಂದು ತಿಳಿಸಿದ್ದಾರೆ.
ನಿರಂಜನಮೂರ್ತಿ ಅವರು ವಿಶ್ವಯೋಗಿ, ಆನಂದಯೋಗಿ, ಯೋಗಭಾಸ್ಕರ ಸೇರಿದಂತೆ ಸುಮಾರು 25ಕ್ಕೂ ಹೆಚ್ಚು ಬಿರುದು ಹಾಗೂ ಕೆಂಪೇಗೌಡ ಪ್ರಶಸ್ತಿ ಸೇರಿದಂತೆ ಹತ್ತಾರು ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ. ಅಲ್ಲದೇ, ಬೀಜಿಂಗ್ ನಲ್ಲಿ ನಡೆದ ಯೋಗ ಚಾಂಪಿಯನ್ ಶಿಪ್ ಸ್ಪರ್ಧೆಯಲ್ಲಿ ಎಸ್ ಜಿಎಸ್ ಅಂತರಾಷ್ಟ್ರೀಯ ಯೋಗ ಪ್ರತಿಷ್ಠಾನದಿಂದ ಭಾಗವಹಿಸಿದ ಯೋಗಪಟುಗಳು ಸ್ವರ್ಣ, ಕಂಚು, ರಜತ ಪದಕಗಳನ್ನು ತಮ್ಮದಾಗಿಸಿಕೊಂಡಿದ್ದಾರೆ.