

ಬಳ್ಳಾರಿ: ವಿಶ್ವ ಪಾರಂಪರಿಕ ತಾಣಗಳ ಪಟ್ಟಿಯಲ್ಲಿರುವ 8 ಸ್ಮಾರಕಗಳ ಚಿತ್ರಗಳನ್ನು ನೋಟುಗಳಲ್ಲಿ ಮುದ್ರಿಸಲು ಆರ್‌ಬಿಐ ನಿರ್ಧರಿಸಿದ್ದು, ವಿಜಯನಗರ ಸಾಮ್ರಾಜ್ಯದ ಅಪರೂಪದ ಸ್ಮಾರಕ ಹಂಪಿಯ ಕಲ್ಲಿನ ರಥ ಇನ್ಮುಂದೆ 10 ರೂಪಾಯಿ ನೋಟಿನಲ್ಲಿ ಕಂಗೊಳಿಸಲಿದೆ.
ಭಾರತೀಯ ನೋಟುಗಳ ವಿನ್ಯಾಸ ಬದಲಿಸಲು ಆರ್‌ಬಿಐ ತೀರ್ಮಾನವಾಗಿದೆ. ದೇಶದ ಇತಿಹಾಸ, ಸಂಸ್ಕೃತಿ ಹಾಗೂ ಪುರಾತನ ಸ್ಮಾರಕಗಳನ್ನು ಪರಿಚಯಿಸುವ ಸಲುವಾಗಿ ಆರ್‌ಬಿಐ ವಿವಿಧ ರಾಜ್ಯಗಳ ಸ್ಮಾರಕಗಳನ್ನು ಆಯ್ದುಕೊಂಡಿದೆ. ಇದರಲ್ಲಿ ಐತಿಹಾಸಿಕ ಹಂಪಿಯ ಕಲ್ಲಿನ ತೇರು ಇರುವುದು ವಿಶೇಷವಾಗಿದೆ.
ಹಂಪಿಯ ಕಲ್ಲಿನ ರಥದ ಜೊತೆ ದೆಹಲಿಯ ಕೆಂಪುಕೋಟೆ, ಕೊನಾರ್ಕ್ ನ ಸೂರ್ಯ ದೇವಾಲಯ, ಆಗ್ರಾದ ತಾಜ್ ಮಹಲ್ , ಗೋವಾದ ಪುರಾತನ ಚರ್ಚ್ ಹಾಗೂ ಕನ್ವೆಂಟ್ಸ್ , ಅಜಂತಾ ಗುಹಾಲಯ ಹಾಗೂ ಗುಹಾಲಯದ ಪದ್ಮಪಾಣಿ ಚಿತ್ರವೂ ನೋಟುಗಳಲ್ಲಿ ರಾರಾಜಿಸಲಿದೆ.