ಪೂಜೆ ವೇಳೆ ಸೀರೆಗೆ ಬೆಂಕಿ: ಮಹಿಳೆ ಸಾವು

ಪೂಜೆ ಮಾಡುತ್ತಿದ್ದ ವೇಳೆ ದೀಪದಿಂದ ಆಕಸ್ಮಿಕವಾಗಿ ಸೀರೆಗೆ ಬೆಂಕಿ ಹೊತ್ತಿಕೊಂಡ ಪರಿಣಾಮ ಸುಟ್ಟ ಗಾಯಗಳಾಗಿದ್ದ ಕೆ.ರೇಖಾ (43) ಎಂಬುವರು ಗಿರಿನಗರದ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ...
ಪೂಜೆ ವೇಳೆ ಸೀರೆಗೆ ಬೆಂಕಿ: ಮಹಿಳೆ ಸಾವು (ಸಾಂದರ್ಭಿಕ ಚಿತ್ರ)
ಪೂಜೆ ವೇಳೆ ಸೀರೆಗೆ ಬೆಂಕಿ: ಮಹಿಳೆ ಸಾವು (ಸಾಂದರ್ಭಿಕ ಚಿತ್ರ)
Updated on: 

ಬೆಂಗಳೂರು: ಪೂಜೆ ಮಾಡುತ್ತಿದ್ದ ವೇಳೆ ದೀಪದಿಂದ ಆಕಸ್ಮಿಕವಾಗಿ ಸೀರೆಗೆ ಬೆಂಕಿ ಹೊತ್ತಿಕೊಂಡ ಪರಿಣಾಮ ಸುಟ್ಟ ಗಾಯಗಳಾಗಿದ್ದ ಕೆ.ರೇಖಾ (43) ಎಂಬುವರು ಗಿರಿನಗರದ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.

ಶ್ರೀನಗರ 15ನೇ ಮುಖ್ಯರಸ್ತೆ ನಿವಾಸಿ ರೇಖಾ ಅವರು, ಜುಲೈ 17ರಂದು ಮನೆಯಲ್ಲಿ ತುಳಸಿ ಪೂಜೆ ಮಾಡುತ್ತಿದ್ದರು. ಈ ವೇಳೆ ಅವರ ಸೀರೆಗೆ ಬೆಂಕಿ ತಗುಲಿ ಇಡೀ ದೇಹವನ್ನೇ ವ್ಯಾಪಿಸಿತ್ತು. ಕಿರುಚಾಟ ಕೇಳಿದ ಸಹೋದರಿ ಪದ್ಮಾವತಿ, ಸ್ಥಳೀಯರ ನೆರವಿನಿಂದ ಬೆಂಕಿ ನಂದಿಸಿ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಿದ್ದರು.

ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಗಿರಿನಗರದ ಖಾಸಗಿ ಆಸ್ಪತ್ರೆಗೆ ಕರೆದೊಯ್ದಿದ್ದರು. ಚಿಕಿತ್ಸೆ ಫಲಿಸದೆ ರೇಖಾ, ಬುಧವಾರ ರಾತ್ರಿ 11.45ಕ್ಕೆ ಮೃತಪಟ್ಟಿ ದ್ದಾರೆ. ಮೃತರ ಪತಿ ನಾಗರಾಜ್, ವಾಸವಿ ಶಿಕ್ಷಣ ಸಂಸ್ಥೆಯಲ್ಲಿ ಸಹಾಯಕರಾಗಿ ಕೆಲಸ ಮಾಡುತ್ತಿದ್ದಾರೆ. ಘಟನೆ ವೇಳೆ ಮನೆಯಲ್ಲಿರಲಿಲ್ಲ ಎಂದು ಪೊಲೀಸರು ಹೇಳಿದ್ದಾರೆ. ಹನುಮಂತನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com