

ಬೆಂಗಳೂರು: ರಾಜ್ಯದಲ್ಲಿ ಈಗಾಗಲೇ ಸದ್ದಡಗಿರುವ ಮುಂಗಾರು ಇನ್ನೂ ಮೂರು ದಿನ ಮಂಕಾಗಿಯೇ ಮುಂದುವರಿಯಲಿದೆ. ರಾಜ್ಯದ ಕರಾವಳಿ, ಮಲೆನಾಡಿನ ಅನೇಕ ಕಡೆ ಮಳೆಯಾಗುತ್ತಿದ್ದು, ಉಳಿದ ಭಾಗದಲ್ಲಿ ಮಳೆ ಅಪರೂಪ ಎನ್ನುವಂತಾಗಿದೆ. ಮುಂದಿನ ಎರಡು ದಿನಗಳಲ್ಲಿ ಮುಂಗಾರು ದುರ್ಬಲವಾಗಲಿದ್ದು, ಆನಂತರ ಕೂಡ ಮುಂಗಾರು ಚೇತರಿಸಿಕೊಳ್ಳುವ ಸಾಧ್ಯತೆ ಕಡಿಮೆ ಇದೆ. ಆದರೆ ಬಂಗಾಳಕೊಲ್ಲಿ ಕಾಣಿಸಿ ಕೊಂಡಿರುವ ವಾಯುಭಾರ ಕುಸಿತದಿಂದ ಉತ್ತರದ ಕೆಲವು ಕಡೆ ಸಾಧಾರಣ ಮಳೆ ಯಾಗಬಹುದು ಎಂದು ಹವಾಮಾನ ಇಲಾಖೆ ತಿಳಿಸಿದೆ. ಮುಂಗಾರು ರಾಜ್ಯವನ್ನು ಆವರಿಸಿ 15
ದಿನಗಳೇ ಕಳೆದಿವೆ. ಆದರೆ ನಿರೀಕ್ಷಿತ ರೀತಿಯಲ್ಲಿ ಮಳೆಯಾಗುತ್ತಿಲ್ಲ. ಆರಂಭದಿಂದಲೂ ಕರಾವಳಿ, ಮಲೆನಾಡಿನ ಕೆಲವು ಭಾಗದಲ್ಲಿ ಮಳೆ ಸುರಿಸುತ್ತಿರುವ ಮುಂಗಾರು ದಕ್ಷಿಣ
ಮತ್ತು ಉತ್ತರ ಒಳನಾಡಿನಲ್ಲಿ ಸಂಪೂರ್ಣ ದುರ್ಬಲವಾಗಿದೆ.