ಸಿಇಟಿ ಅರ್ಜಿ ಸಲ್ಲಿಕೆಗೆ ಕೊನೆಯ ದಿನ ಇಂದು

ಸಿಇಟಿ ಅರ್ಜಿ ಸಲ್ಲಿಕೆಗೆ ಮಾ.5 ಕೊನೆಯ ದಿನವಾಗಿದ್ದು, ಅರ್ಜಿಯಲ್ಲಿ ತಪ್ಪುಗಳಾಗಿದ್ದರೆ ಮಾ.6ರಿಂದ 10ರವರೆಗೆ ಸರಿಪಡಿಸಲು...
ವಿದ್ಯಾರ್ಥಿ
ವಿದ್ಯಾರ್ಥಿ

ಬೆಂಗಳೂರು: ಸಿಇಟಿ ಅರ್ಜಿ ಸಲ್ಲಿಕೆಗೆ ಮಾ.5 ಕೊನೆಯ ದಿನವಾಗಿದ್ದು, ಅರ್ಜಿಯಲ್ಲಿ ತಪ್ಪುಗಳಾಗಿದ್ದರೆ ಮಾ.6ರಿಂದ 10ರವರೆಗೆ ಸರಿಪಡಿಸಲು ಅವಕಾಶ ನೀಡಲಾಗಿದೆ.
ಸಾಕಷ್ಟು ಅಭ್ಯರ್ಥಿಗಳು, ಪೋಷಕರು ಈ ಸಂಬಂಧ ಪ್ರಾಧಿಕಾರಕ್ಕೆ ಮನವಿ ಮಾಡಿದ್ದ ಹಿನ್ನೆಲೆಯಲ್ಲಿ ಈ ಅವಕಾಶವನ್ನು ಕಲ್ಪಿಸಲಾಗಿದೆ. ಈ ಅವಧಿಯಲ್ಲಿ ಅಭ್ಯರ್ಥಿಗಳು ತಮ್ಮ ಯೂಸರ್ ಐಡಿ ಮತ್ತು ಪಾಸ್‍ವರ್ಡ್ ಬಳಸುವ ಮೂಲಕ ತಾವು ಸಲ್ಲಿಕೆ ಮಾಡಿದ್ದ ಅರ್ಜಿಯನ್ನು ತೆರೆದು ಯಾವುದೇ ತಪ್ಪುಗಳಾಗಿದ್ದಲ್ಲಿ ಸರಿಪಡಿಸಬಹುದು. ಯಾವುದೇ ಮಾಹಿತಿಯನ್ನು ಅಪೂರ್ಣವಾಗಿ ತುಂಬಿದ್ದಲ್ಲಿ ಪೂರ್ಣ ಮಾಹಿತಿ ಭರ್ತಿ ಮಾಡಬಹುದಾಗಿದೆ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಪ್ರಕಟಣೆ ತಿಳಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com