ಜಿಲ್ಲಾ ಸುದ್ದಿ

14 ಸಾಧಕರಿಗೆ ನಮ್ಮ ಬೆಂಗಳೂರು ಪ್ರಶಸ್ತಿ

14 ಸಾಧಕರಿಗೆ ನಮ್ಮ ಬೆಂಗಳೂರು ಪ್ರಶಸ್ತಿ
ನಮ್ಮ ಬೆಂಗಳೂರು-2014' ಪ್ರಶಸ್ತಿ
Published On :

ಬೆಂಗಳೂರು: ನಗರದ ಏಳಿಗೆಗಾಗಿ ಶ್ರಮಿಸಿದ 14 ಸಾಧಕರಿಗೆ `ನಮ್ಮ ಬೆಂಗಳೂರು ಪ್ರತಿಷ್ಠಾನ' ಪ್ರಶಸ್ತಿ ನೀಡಿ ಗೌರವಿಸಲಾಯಿತು.ಜಯನಗರದ ಶಾಲಿನಿ ಮೈದಾನದಲ್ಲಿ
ಶನಿವಾರ ನಡೆದ ವರ್ಣರಂಜಿತ ಕಾರ್ಯಕ್ರಮದಲ್ಲಿ ಪ್ರತಿಷ್ಠಾನದಿಂದ ನೀಡುವ `ನಮ್ಮಬೆಂಗಳೂರಿಗ' ಪ್ರಶಸ್ತಿಗೆ ಒಬ್ಬರು ಹಾಗೂ`ನಮ್ಮ ಬೆಂಗಳೂರು-2014' ಪ್ರಶಸ್ತಿಗೆ 13
ಗಣ್ಯರು ಪಾತ್ರರಾದರು. 6ನೇ ಆವೃತ್ತಿಯ ಈ ಪ್ರಶಸ್ತಿಗೆ 76,250 ಮಂದಿ ನಾಮ
ನಿರ್ದೇಶನಗೊಂಡಿದ್ದು, 70 ಮಂದಿಯನ್ನುಅಂತಿಮ ಸುತ್ತಿಗೆ ಆಯ್ಕೆ ಮಾಡಲಾಗಿತ್ತು. ಅಂತಿಮ ನಾಮಾಂಕಿತರಲ್ಲಿ 14 ಮಂದಿ ಸಾಧಕರು ವಿವಿಧ ವಿಭಾಗಗಳಲ್ಲಿ ಪ್ರಶಸ್ತಿಗೆ ಆಯ್ಕೆ ಯಾದರು.
ಮೈಕ್ರೋಲ್ಯಾಂಡ್‍ನ ಸಂಸ್ಥಾಪಕ ಅಧ್ಯಕ್ಷ ನಿರ್ದೇಶಕ ಪ್ರದೀಪ್ ಕರ್, ಮಾಧ್ಯಮ ಮತ್ತು ಕಾರ್ಪೋರೇಟ್ ವೃತ್ತಿಪರ ಡಾ. ಗೌತಮ್  ಮಾಚಯ್ಯ, ಮಾಜಿ ಲೋಕಾ
ಯುಕ್ತ ನ್ಯಾ.ಸಂತೋಷ್ ಹೆಗ್ಡೆ, ಸಾಹಿತಿ ಪ್ರೊ .ಜಿ.ಎಸ್.ಸಿದ್ದಲಿಂಗಯ್ಯ, ಫೀ ಡ್‍ಬ್ಯಾಕ್ ಕನ್ಸಲ್ಟಿಂಗ್ ಅಧ್ಯಕ್ಷ ವಿ.ರವಿಚಂದ್ರ, ನಮ್ಮ ಬೆಂಗಳೂರು ಪ್ರಶಸ್ತಿ-2014ರ ರಾಯಭಾರಿ
ತಾರಾ ಅನುರಾಧ, ಕಿರುತೆರೆ ನಿರ್ದೇಶಕ ಟಿ. ಎನ್.ಸೀತಾರಾಂ, ಬ್ರೇಸ್ ಸದಸ್ಯ ಎನ್. ಎಸ್.ಮುಕುಂದ, ಹಿರಿಯ ಪತ್ರಕರ್ತ ಎಚ್.ಎಸ್.ಬಲರಾಮ್ , ಕವಿ.ಎಚ್.ಎಸ್. ವೆಂಕಟೇಶಮೂರ್ತಿ, ರೇಡಿಯೋ  ಉದ್ಘೋಷಕಿ ವಾಸಂತಿ ಹರಿಪ್ರಕಾಶ್ ಸೇರಿದಂತೆ 23 ತೀರ್ಪುಗಾರರ ತಂಡ 14 ವಿಭಾಗದಲ್ಲಿ ಪುರಸ್ಕೃತರನ್ನು ಆಯ್ಕೆ  ಮಾಡಿದೆ.
ಪ್ರಶಸ್ತಿ ವಿತರಿಸಿ ಮಾತನಾಡಿದ ನಟ ರವಿಚಂದ್ರನ್, ಬೇರೆಯವರ ಮುಖದಲ್ಲಿ ಸಂತಸ ತರಲು ಪ್ರತಿಯೊ ಬ್ಬರೂ ಯತ್ನಿಸಬೇಕು. ನಗರದಲ್ಲಿ ಪಕ್ಕದ ಮನೆಯರನ್ನೂ
ಪರಿಚಯ ಮಾಡಿಕೊಳ್ಳದ ಜನರು ಸದಾ ಸಾಮಾಜಿಕ ಜಾಲತಾಣಗಳಲ್ಲಿ ನಿರತರಾಗುತ್ತಿ ದ್ದಾರೆ. ಸಂಬಂಧಿಕರು ಹಾಗೂ ಸ್ನೇಹಿತರಿಂದ ದೂರವಾಗುವುದನ್ನು ಬಿಟ್ಟು,
ಎಲ್ಲರೊಂದಿಗೆ ಬೆರೆಯುವ ಸ್ವಭಾವ ರೂಡಿsಸಿಕೊಳ್ಳಬೇಕು. ನಗರದ ಸಮಸ್ಯೆಗಳನ್ನು ನಿವಾರಿಸಲು ನೆರೆಮನೆಯವರೊಂದಿಗೆ ಸೌಹಾರ್ದದಿಂದ ಇರಬೇಕು. ಈ ರೀತಿಯ
ಮನೋಭಾವ ಬಂದರೆ ಮಾತ್ರ ಒಗ್ಗಟ್ಟಾಗಲು ಸಾಧ್ಯ. ಸ್ವಾರ್ಥವಿಲ್ಲದ ಹಾಗೂ ಗುರುತಿಸಿಕೊಳ್ಳಲು ಇಚ್ಛಿಸದ ಮಂದಿ ನಗರದ
ಬೆಳವಣಿಗೆಗೆ ಶ್ರಮಿಸುತ್ತಿದ್ದಾರೆ. ಸಾಮಾನ್ಯ ಜನರೂ ಈ ಹಾದಿಯಲ್ಲೇ ಸಾಗಬೇಕು ಎಂದರು.
ಪ್ರತಿಷ್ಠಾನದ ಮುಖ್ಯಸ್ಥ ಶ್ರೀಧರ್ ಪಬ್ಬಿಸೆಟ್ಟಿ ಮಾ ತನಾಡಿ, ಪ್ರತಿ ವರ್ಷ ಪ್ರತಿಷ್ಠಾನದಿಂದ ಹಲವು ಯೋಜನೆಗಳನ್ನು ಕೈಗೊಳ್ಳಲಾಗಿದೆ. ಮಕ್ಕಳ ಸುರಕ್ಷತೆ, ನಗರದ ಕೆರೆಗಳ ಸಂರಕ್ಷಣೆ, ಭೂ ಒತ್ತುವರಿ ಸೇರಿದಂತೆ ಹಲವು ಸಮಸ್ಯೆಗಳ ಬಗ್ಗೆ ಗಮನಹರಿಸಿದ್ದು, ಕಾನೂನಿನ ಮೂಲಕ ಹೋರಾಟ ನಡೆಸಲಾಗುತ್ತಿದೆ. ಕಳೆದ ವರ್ಷ ಪ್ರಶಸ್ತಿಗಾಗಿ 71,000 ಮಂದಿ ನಾಮ ನಿರ್ದೇಶನಗೊಂಡಿ ದ್ದರು. ಆದರೆ ಈಗ 76,250 ಮಂದಿ ನಾಮನಿರ್ದೇಶನಗೊಳ್ಳುವ ಮಟ್ಟಿಗೆ ಪ್ರಶಸ್ತಿ ಜನಪ್ರಿಯವಾಗಿದೆ. ನಿಜವಾದ ಬೆಂಗಳೂರು ನಾಯಕರನ್ನು ಗೌರವಿಸಲು ಪ್ರತಿಷ್ಠಾನಕ್ಕೆ ಉತ್ತಮ ಅವಕಾಶ ಸಿಕ್ಕಿದೆ ಎಂದರು.ಪ್ರಶಸ್ತಿಯ ರಾಯಭಾರಿ ತಾರಾ ಅನುರಾಧ ಮಾತನಾಡಿ, ಪ್ರತಿಷ್ಠಾನ ಗುರುತಿಸಿರುವ ಮಂದಿ ನಗರದ ಏಳಿಗೆಗಾಗಿ ಶ್ರಮಿಸುತ್ತಿದ್ದು, ಕೋಟ್ಯಂತರ ಜನರನ್ನು ಪ್ರತಿನಿಧಿಸುತ್ತಿದ್ದಾರೆ. ನಗರದ ಅಭಿವೃದ್ಧಿ ಗೆ ಸಾಧಕರ ಮಾದರಿಯಲ್ಲೇ ಸಾಮಾನ್ಯ ಜನರೂ ಶ್ರಮಿಸಬೇಕು ಎಂದರು. ಸಂಗೀತ ಕಾರ್ಯಕ್ರಮ: ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಪ್ರೇಕ್ಷಕರಿಗಾಗಿ ಸಂಗೀತ ಸುಧೆ ಹರಿಸಿದರು. ಇದಕ್ಕೂ ಮುನ್ನ ಗಾಯಕ ಸುನಿಲ್ ಕೋಶಿ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟು ನೆರೆದವರನ್ನು ರಂಜಿಸಿದರು.

ವಿಭಾಗ ಪುರಸ್ಕೃತರು
 ನಮ್ಮ ಬೆಂಗಳೂರಿಗ ಕಾತ್ಯಾಯಿನಿ ಚಾಮರಾಜ್
(ಸಿವಿಕ್ ಸಂಸ್ಥೆಯ ಕಾರ್ಯಕಾರಿ ಟ್ರಸ್ಟಿ)
 ನಾಗರಿಕ ವ್ಯಕ್ತಿ ಪಿ.ಜಿ.ಭಟ್
ಸರ್ಕಾರಿ ನೌಕರ ಎಚ್.ಬಾಳೇಗೌಡ
 ಸರ್ಕಾರಿ ಸಂಸ್ಥೆ ನಿಮ್ಹಾ ನ್ಸ್
 ನಾಗರಿಕ ಯುವ ವಿಭಾಗ ಸುರೇಂದ್ರನ್ ಮುರುಗಾನಂದ ಕೃಷ್ಣನ್ ಹಾಗೂ ಸುಭೇಂದು ಶರ್ಮಾ
 ಸ್ವಯಂ ಸೇವಾ ಸಂಸ್ಥೆ ಅಕ್ಷರ  ಫೌಡೇಷನ್
ಮಾಧ್ಯಮ ವ್ಯಕ್ತಿ ವಿಜಯಲಕ್ಷ್ಮೀ  ಶಿಬರೂರು
 ಮಾಧ್ಯಮ ಸಂಸ್ಥೆ ಪ್ರಜಾವಾಣಿ
 ವಿದೇಶಿ ನಿವಾಸಿಗ ಸೇನ್ ಬ್ಲಾಗ್‍ವೆಡ್ಟ್ ನಿವಾಸಿ ಕ್ಷೇಮಾಭಿವೃದ್ಧಿ   ಸಂಸ್ಥೆ ವೈಟ್‍ ಫೀಲ್ಡ್ ರೈಸಿಂಗ್
 ಚುನಾಯಿತ ಪ್ರತಿನಿಧಿ ಸಿ.ಕೆ.ರಾಮಮೂರ್ತಿ (ಕಾರ್ಪೊರೇಟರ್)
 ಅನಿವಾಸಿ ಬೆಂಗಳೂರಿಗ ಬಿ.ಟಿ.ಲಕ್ಷ್ಮಣ್
 ಸಾಮಾಜಿಕ ಉದ್ಯಮ ಲೇಬರ್ ನೆಟ್
 ಸಾಮಾಜಿಕ ಹೊಣೆಗಾರಿಕೆ ಕೆನರಾ ಬ್ಯಾಂಕ್


ರಾಜೀವ್ ಚಂದ್ರಶೇಖರ್ ಸಂದೇಶ

ರಾಜ್ಯಸಭಾ ಸದಸ್ಯ ರಾಜೀವ್ ಚಂದ್ರಶೇಖರ್ ಅವರ ಸಂದೇಶವನ್ನು ರಾಯಭಾರಿ ತಾರಾ ಅನುರಾಧಾ ನೆರೆದ ಪ್ರೇಕ್ಷಕರಿಗೆ ತಿಳಿಸಿದರು. `ನಗರಕ್ಕಾಗಿ ಶ್ರಮಿಸಿದ ವ್ಯಕ್ತಿಗಳನ್ನು ಗುರುತಿಸುತ್ತಿರುವ ಪ್ರತಿಷ್ಠಾನ ಸಾಧಕರಿಗೆ ನೆರವಾಗಿದೆ. ನಗರದ ಅಬಿsವೃದಿಟಛಿಗಾಗಿ, ನಾಗರಿಕರಾಗಿ ಅನನ್ಯ ಸೇವೆ ಸಲ್ಲಿಸುತ್ತಿರುವ ಮಂದಿಯನ್ನು ಗುರುತಿಸುವುದು
ಸಂಘ ಸಂಸ್ಥೆಗಳ ಕರ್ತವ್ಯ ವಾಗಬೇಕು. ಇಂತಹ ಸಾಧಕರನ್ನು ನಾಮನಿರ್ದೇಶಿಸಿದ ಜನರಿಗೆ ಹಾಗೂ ಸಾಧಕರನ್ನು ಗುರುತಿಸಿದ ಪ್ರತಿಷ್ಠಾನವನ್ನು ಅಬಿsನಂದಿಸುತ್ತೇನೆ' ಎಂಬ
ಸಂದೇಶವನ್ನು ತಿಳಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.