ಜಿಲ್ಲಾ ಸುದ್ದಿ

ಚಿಕ್ಕಬಳ್ಳಾಪುರ ಸಂಪೂರ್ಣ ಬಂದ್

ಚಿಕ್ಕಬಳ್ಳಾಪುರ ಸಂಪೂರ್ಣ ಬಂದ್
ಚಿಕ್ಕಬಳ್ಳಾಪುರ ಬಂದ್
Published On :

ಚಿಕ್ಕಬಳ್ಳಾಪುರ: ವಾಣಿಜ್ಯ ತೆರಿಗೆ ಜಂಟಿ ಆಯುಕ್ತರಾಗಿದ್ದ ಡಿ.ಕೆ. ರವಿ ನಿಗೂಢ ಸಾವು ಖಂಡಿಸಿ ಮತ್ತು ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಲು ಆಗ್ರಹಿಸಿ ನಾನಾ ಸಂಘಟನೆಗಳ ನೀಡಿದ್ದಚಿಕ್ಕಬಳ್ಳಾಪುರ ಬಂದ್ ಕರೆಗೆ ಬುಧವಾರ ಉತ್ತಮ ಪ್ರತಿಕ್ರಿಯೆ  ವ್ಯಕ್ತವಾಯಿತು. ದಲಿತ, ರೈತಪರ, ಮಹಿಳಾ ಮತ್ತು ಕನ್ನಡ ಸಂಘಟನೆಗಳು ಬೆಳಗಿನಿಂದಲೇ ನಗರದ ಅಂಗಡಿ ಮುಂಗಟ್ಟುಗಳನ್ನು ಮುಚ್ಚಿ ಪ್ರಾಮಾಣಿಕ ಅಧಿಕಾರಿ ಪರ ನಡೆಯುತ್ತಿರುವ ಬಂದ್‍ಗೆ ಸಹಕರಿಸುವಂತೆ ಮನವಿ ಮಾಡಿದರು. ಇದಕ್ಕೆ ಸ್ಪಂದಿಸಿದ ವ್ಯಾಪಾರಿಗಳು ಸ್ವಯಂ ಪ್ರೇರಿತರಾಗಿ ಅಂಗಡಿ ಮುಂಗಟ್ಟುಗಳನ್ನು ಮುಚ್ಚಿ ಬಂದ್‍ಗೆ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದರು. ನಾನಾ ಸಂಘಟನೆಗಳ ಮುಖಂಡರು ಮತ್ತು ಸದಸ್ಯರು ನಗರದ ಪ್ರಮುಖ ಬೀದಿಯಲ್ಲಿ ಸಂಚರಿಸಿದರು. ದಿವಂಗತ ಡಿ.ಕೆ. ರವಿ ಪರ ಘೋಷಣೆಗಳನ್ನು ಕೂಗಿ, ಅವರ ನಿಗೂಢ ಸಾವಿನ ಪ್ರಕರಣವನ್ನು ಸಿಬಿಐಗೆ ಒಪ್ಪಿಸುವಂತೆ ಆಗ್ರಹಿಸಿದರು. ನಂತರ ಪ್ರತಿಭಟನಾಕಾರನ್ನುದ್ದೇಶಿಸಿ ಮಾತನಾಡಿದ ಮುಖಂಡರು, ಪ್ರಾಮಾಣಿಕ ಮತ್ತು ದಕ್ಷ ಜಿಲ್ಲಾಧಿಕಾರಿಯಾಗಿ ನೆರೆ ಜಿಲ್ಲೆ ಕೋಲಾರದಲ್ಲಿ ಹೆಸರು ಮಾಡಿದ್ದ ಡಿ.ಕೆ. ರವಿ ಸಾವಿನ ಹಿಂದೆ ಕಾಣದ ಕೈಗಳ ಕೈವಾಡ ಇದೆ. ಸತ್ಯ ಹೊರ ಬರದಂತೆ ತಡೆಯಲು ಸರಕಾರ ಹುನ್ನಾರ ನಡೆಸುತ್ತಿದೆ.
ಪ್ರಕರಣವನ್ನು ಸಿಬಿಐಗೆ ವಹಿಸದೆ ಸತ್ಯಾಂಶ ಹೊರ ಬರಲು ಸಾಧ್ಯವಿಲ್ಲ. ಆದ್ದರಿಂದ ಕೇಂದ್ರ ಸರ್ಕಾರ ಸ್ವಯಂ ಪ್ರೇರಿತವಾಗಿ ಮಧ್ಯೆ ಪ್ರವೇಶಿಸಿ ಸತ್ಯಾಂಶ ಹೊರ ತರಬೇಬೇಕಿದೆ ಎಂದು ಆಗ್ರಹಿಸಿದರು. ಶ್ರದ್ದಾಂಜಲಿ: ಬಂದ್ ಹಿನ್ನೆಲೆಯಲ್ಲಿ ನಗರದಾದ್ಯಂತ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿತ್ತು. ಬೆಳಗಿನಿಂದಲೇ ಬಸ್ ಸಂಚಾರ ಸಂಪೂರ್ಣ ಸ್ಥಗಿತಗೊಂಡಿತ್ತು. ಮಧ್ಯಾಹ್ನದ ನಂತರ ವಾಹನ ಸಂಚಾರ ಆರಂಭವಾಯಿತಾದರೂ, ಪ್ರಯಾಣಿಕರ ಸಂಖ್ಯೆ ವಿರಳವಾಗಿತ್ತು. ನಗರದ
ಶಿಡ್ಲಘಟ್ಟ ರಸ್ತೆ ಸೇರಿದಂತೆ ನಾನಾ ವೃತ್ತಗಳಲ್ಲಿ ದಿವಂಗತ ಡಿ.ಕೆ. ರವಿ ಫ್ಲೆಕ್ಸ್  ಹಾಕಿ ಶ್ರದ್ದಾಂಜಲಿ ಸಲ್ಲಿಸಲಾಯಿತು. ಬೆಂಗಳೂರು ಸೇರಿದಂತೆ ದೂರದ ಊರುಗಳಿಗೆ ತೆರಳುವ ಪ್ರಯಾಣಿಕರಿಗೆ ತೊಂದರೆಯಾಗದಂತೆ ಬೈಪಾಸ್ ರಸ್ತೆಯಲ್ಲಿನ ವಾಹನ ಸಂಚಾರಕ್ಕೆ ಪ್ರತಿಭಟ ನಾಕಾರರು ಅಡ್ಡಿ ಮಾಡಲಿಲ್ಲ. ಇದರಿಂದಾಗಿ ಪ್ರಯಾಣಿಕರನ್ನು ಬೈಪಾಸ್ ರಸ್ತೆಯಲ್ಲಿ ಇಳಿಸಿದ
ಪರಿಣಾಮ ನಗರಕ್ಕೆ ಬರಲು ವೃದ್ಧರು  ಪರದಾಡುವಂತಾಯಿತು. ಅವರನ್ನು ಸಾಗಿಸುವ ಆಟೋದಂತಹ ವಾಹನಗಳಿಗೆ ಪ್ರತಿಭಟನಾಕಾರಿಂದ ಯಾವುದೇ
ಅಡ್ಡಿಯಾಗಲಿಲ್ಲ.ಜಿಲ್ಲಾ ಕೇಂದ್ರ ಹೊರತು ಪಡಿಸಿದರೆಜಿಲ್ಲೆಯ ಐದು ತಾಲೂಕುಗಳಾದ ಗೌರಿ ಬಿದನೂರು, ಗುಡಿಬಂಡೆ, ಬಾಗೇಪಲ್ಲಿ, ಚಿಂತಾಮಣಿ ಮತ್ತು
ಶಿಡ್ಲಘಟ್ಟಗಳಲ್ಲಿ ಬಂದ್‍ಗೆ ಮಿಶ್ರ ಪ್ರತಿಕ್ರಿಯೆ  ವ್ಯಕ್ತವಾಗಿದೆ. ವಾಹನ ಸಂಚಾರಕ್ಕೆ ಯಾವುದೇ ಅಡಚಣೆಯಾಗಿಲ್ಲ. ಆದರೆ, ಬಾಗೇಪಲ್ಲಿಯಲ್ಲಿ ಪ್ರತಿಭಟನೆ ನಡೆಸಲು
ಪಿಎಸ್‍ಐ ಮುನಿರೆಡ್ಡಿ ಅವಕಾಶ ನೀಡಲಿಲ್ಲವೆಂಬ ಕಾರಣಕ್ಕೆ ಹಲವು ಪ್ರಗತಿಪರ ಸಂಘಟನೆಗಳ ಮುಖ್ಯಸ್ಥರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಶಾಸಕರ ಆಣತಿಯಂತೆ ನಡೆಯುವ ಸಬ್‍ಇನ್ಸ್ ಪೆಕ್ಟರ್ ಪ್ರಾಮಾಣಿಕ ಅಧಿಕಾರಿ ಸಾವಿನ ಹಿನ್ನೆಲೆಯಲ್ಲಿ ಶಾಂತಿಯುತ ಬಂದ್‍ಗೆ ಅನುಮತಿ ನೀಡದಿರುವ ಬಗ್ಗೆ ವಿದ್ಯಾರ್ಥಿ ಸಂಘಟನೆಗಳೂ ಅಸಮÁಧಾನ
ವ್ಯಕ್ತಪಡಿಸಿವೆ.


ರಾಜ್ಯಾದ್ಯಂತ ಪ್ರತಿಭಟನೆ
ಬೆಂಗಳೂರು: ಡಿ.ಕೆ.ರವಿ ಸಾವಿನ ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸುವಂತೆ ಆಗ್ರಹಿಸಿ ರಾಜ್ಯಾದ್ಯಂತ ಬುಧವಾರವೂ ಪ್ರತಿಭಟನೆಗಳು ನಡೆದಿವೆ. ಸಿಐಡಿ
ತನಿಖೆಯಿಂದ ವಾಸ್ತವ ಸಂಗತಿ ಹೊರ ಬರುವ ಬಗ್ಗೆ ಅನುಮಾನ ವ್ಯಕ್ತಪಡಿಸಿರುವ ನಾನಾ ಸಂಘಟನೆಗಳು, ಸಿಬಿಐ ತನಿಖೆಗೆ ಹಿಂದೇಟು ಹಾಕುತ್ತಿರುವ ಸರ್ಕಾರದ ಕ್ರಮ ಖಂಡಿಸಿವೆ.ಬಿಜೆಪಿ ಕಾರ್ಯಕರ್ತರು ಸಹ ಹಲವೆಡೆ ಪ್ರತಿಭಟನೆ ನಡೆಸಿದ್ದಾರೆ.


ತುಮಕೂರು ಬಂದ್ ಇಂದು
ತುಮಕೂರು: ಐಎಎಸ್ ಅಧಿಕಾರಿ ಡಿ.ಕೆ.ರವಿ ನಿಗೂಢ ಸಾವಿನ ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸಬೇಕೆಂದು ಆಗ್ರಹಿಸಿ ನಾನಾ ಸಂಘಟನೆಗಳು ಗುರುವಾರ ತುಮಕೂರು ಬಂದ್‍ಗೆ ಕರೆ ನೀಡಿವೆ. ಗುರುವಾರ ಬೆಳಗ್ಗೆ 6 ಗಂಟೆಯಿಂದ ಮಧ್ಯಾಹ್ನ 3 ಗಂಟೆವರೆಗೆ ಬಂದ್ ಆಚರಿಸುವಂತೆ ಜಯಕರ್ನಾಟಕ, ಕನ್ನಡ ಸೇನೆ, ಕರವೇ, ಹೊಯ್ಸಳ ವೇದಿಕೆ, ಸ್ವಾಭಿಮಾನಿ ಬಣ, ಮಾನವ ಹಕ್ಕುಗಳ ಸಂರಕ್ಷಣಾ ಮತ್ತು ಸೇವಾ ಟ್ರಸ್ಟ್, ಅಂಬೇಡ್ಕರ್ ಯುವ ಸೇನೆ, ದಲಿತ ಸೇನೆ, ಭಗತ್ ಸೇನೆ, ಕನ್ನಡ ರಕ್ಷಣಾ ವೇದಿಕೆ, ಡಿಎಸ್‍ಎಸ್, ಸರ್ವಜನಾ ಸಂರಕ್ಷಣಾ ವೇದಿಕೆ, ಜಿಲ್ಲಾ ಪೋಲೀಸ್ ನಿವೃತ್ತ ಅ„ಕಾರಿಗಳ ಸಂಘ, ಬಸವ ಸೇನೆ, ಜೈ ಭಾರತ್ ರಕ್ಷಣಾ ವೇದಿಕೆ, ಕರ್ನಾಟಕ ಸಂಸ್ಕೃತಿ ರಕ್ಷಣಾವೇದಿಕೆ, ಛಲವಾದಿ ಮಹಾಸಭಾಗಳು ಕರೆ ನೀಡಿವೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.