

ಮಂಗಳೂರು: `ಮುಖ್ಯಮಂತ್ರಿಗಳೇ, ನಿಮಗೆ ಅಧಿಕಾರವೇ ಮುಖ್ಯವೇ? ಅಧಿಕಾರ ಇಲ್ಲದಿದ್ದರೆ ಬದುಕಲು ಸಾಧ್ಯವಿಲ್ಲವೇ? ಡಿ.ಕೆ. ರವಿ ಸಾವು ಪ್ರಕರಣ ಸಿಬಿಐಗೆ ಒಪ್ಪಿಸಿ, ಇಲ್ಲವಾದಲ್ಲಿ ಕಾಂಗ್ರೆಸ್ ಪರಿಸ್ಥಿತಿ ದಿಲ್ಲಿಗಿಂತಲೂ ಕಡೆಯಾದೀತು' ಹೀಗೆ ಎಚ್ಚರಿಕೆ ನೀಡಿದ್ದು ಕಾಂಗ್ರೆಸ್ ಮುಖಂಡ ಬಿ. ಜನಾರ್ದನ ಪೂಜಾರಿ!
ಗುರುವಾರ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಠಿ ಯಲ್ಲಿ ಮಾತನಾಡಿದ ಅವರು, ಜನರಿಗೆ ಸಂಶಯ ಬಂದಿದೆ, ಸಿಐಡಿಗೆ ವಹಿಸುವ ಕುರಿತು ನೀವೇ ಸಮೀಕ್ಷೆ ಮಾಡಿ ಅಭಿಪ್ರಾಯ ಕೇಳಿ, ನಿಮಗೇ ಗೊತ್ತಾಗುತ್ತದೆ. ಐಎಎಸ್ ಅಧಿಕಾರಿಗಳು ಸುದ್ದಿವಾಹಿನಿಗಳಲ್ಲಿ ಕುಳಿತು ಸಂಶಯ ನಿವಾರಣೆ ಮಾಡಿ ಎಂದು ಕೇಳುತ್ತಾರೆ. ಜನರ ಅಭಿಮತಕ್ಕೆ ತಲೆ ಕೊಡಬೇಕಾದದ್ದು ಮುಖ್ಯಮಂತ್ರಿ ಕರ್ತವ್ಯ ಎಂದು ಸಲಹೆ ಮಾಡಿದರು.