ಹಾಲಿನ ದರ ರು.4 ಏರಿಕೆಗೆ ಸರ್ಕಾರ-ಕೆಎಂಎಫ್ ನಡುವೆ ಮಾತುಕತೆ

ಲೀಟರ್ ಹಾಲಿನ ದರವನ್ನು 3 ರಿಂದ 4 ರೂ. ಹೆಚ್ಚಳ ಮಾಡುವಂತೆ ಕೆಎಂಎಫ್ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದೆ ಎಂದು ಮೂಲಗಳು ತಿಳಿಸಿವೆ....
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on: 

ಬೆಂಗಳೂರು: ಲೀಟರ್ ಹಾಲಿನ ದರವನ್ನು 3 ರಿಂದ 4 ರೂ. ಹೆಚ್ಚಳ ಮಾಡುವಂತೆ ಕೆಎಂಎಫ್ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದು, ಈ ಸಂಬಂಧ ಸರ್ಕಾರ ಮತ್ತು ಕರ್ನಾಟಕ ಹಾಲು ಮಹಾಮಂಡಳದ ನಡುವೆ ಮಾತುಕತೆ ನಡೆಯುತ್ತಿದೆ ಎಂದು ಮೂಲಗಳು ತಿಳಿಸಿವೆ.

ಕೆಎಂಎಫ್ 3 ಹಿಂದೆಯೇ ಆಡಳಿತ ಮಂಡಳಿ ಸಭೆಯಲ್ಲಿ ಹಾಲಿನ ದರ ಹೆಚ್ಚಳದ ನಿರ್ಧಾರವನ್ನು ತೆಗೆದುಕೊಂಡು ಸರ್ಕಾರಕ್ಕೆ ಪ್ರಸ್ತಾವನೆ ಕಳಿಸಿದೆ. ದರ ಹೆಚ್ಚಳವಾದರೆ ರೈತರಿಗೆ ಎಷ್ಟು ಲಾಭ ದೊರೆಯಲಿದೆ? ಲೀಟರ್ ಹಾಲಿಗೆ 2 ರಿಂದ 3 ರೂ. ಹೆಚ್ಚಳ ಮಾಡಿದರೆ ಅದರಲ್ಲಿ ನೀವು ರೈತರಿಗೆ ಎಷ್ಟು ಹಂಚಿಕೆ ಮಾಡುತ್ತೀರಿ? ಎಂದು ಪಶುಸಂಗೋಪನಾ ಇಲಾಖೆ ಮಾಹಿತಿ ಕೇಳಿದ್ದು, ಎಲ್ಲಾ ಒಕ್ಕೂಟಗಳು ವರದಿ ನೀಡಿವೆ ಎಂದು ತಿಳಿದು ಬಂದಿದೆ.

ಸೋಮವಾರ ಉಳಿದ ಒಕ್ಕೂಟಗಳು ಸರ್ಕಾರಕ್ಕೆ ಮಾಹಿತಿಯನ್ನು ಸಲ್ಲಿಸಲಿವೆ. ಎಲ್ಲಾ ಒಕ್ಕೂಟಗಳ ವರದಿ ಆಧರಿಸಿ ಹಾಲಿನ ದರ ಏರಿಕೆ ಕುರಿತು ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದು ಪಶುಸಂಗೋಪನಾ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

2014ರ ಸೆ.11ರಂದು ಕೆಎಂಎಫ್ ಹಾಲಿನ ದರವನ್ನು ಏರಿಕೆ ಮಾಡಿತ್ತು. ಎಲ್ಲಾ ರೀತಿಯ ಹಾಲಿನ ದರವನ್ನು 2 ರೂ. ಮತ್ತು ಅರ್ಧ ಲೀಟರ್ ಮೊಸರಿನ ಬೆಲೆಯನ್ನು 1 ರೂ. ಹೆಚ್ಚಳ ಮಾಡಲಾಗಿತ್ತು. ಸದ್ಯ 3 ರಿಂದ 4 ರೂ. ಹೆಚ್ಚಳದ ಪ್ರಸ್ತಾವನೆ ಕಳುಹಿಸಲಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com