

ವಿಧಾನಪರಿಷತ್ತು: ಇನ್ಮುಂದೆ ಬೆಂಗಳೂರು ನಗರದಲ್ಲಿ ಟು ಸ್ಟ್ರೋಕ್ ಆಟೋ ರಿಕ್ಷಾಗಳು ರಸ್ತೆಗಿಳಿಯುವುದಿಲ್ಲ. ಈ ಆಟೋಗಳ ನಿಷೇಧವನ್ನು ಮುಂದಿನ ಅಧಿವೇಶನದ ಒಳಗೆ ನಿರ್ಧಾರ ಪ್ರಕಟಿಸಲಾಗುವುದು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಹೇಳಿದ್ದಾರೆ.
ನಗರದಲ್ಲಿ 30000ಕ್ಕೂ ಹೆಚ್ಚು ಟು ಸ್ಟ್ರೋಕ್ ಆಟೋಗಳಿವೆ. ಅವುಗಳಿಂದ ಮಾಲಿನ್ಯ ಹೆಚ್ಚಾಗುತ್ತಿದ್ದರೂ ಸರ್ಕಾರ ಆ ಆಟೋಗಳನ್ನು ನಿಷೇಧಿಸುತ್ತಿಲ್ಲ ಎಂದು ಜೆಡಿಎಸ್‍ನ ಕೃಷ್ಣಪ್ಪ
ಪ್ರಶ್ನೋತ್ತರ ಕಲಾಪದಲ್ಲಿ ದೂರಿದರು. ಇದಕ್ಕೆ ಉತ್ತರಿಸಿದ ಸಚಿವ ರಾಮಲಿಂಗಾರೆಡ್ಡಿ, ಟು ಸ್ಟ್ರೋಕ್ ಆಟೋಗಳನ್ನು ಹೊಂದಿರುವವರಿಗೆ ಸರ್ಕಾರದಿಂದ ರು. 30,000 ನೀಡುತ್ತೇವೆ ಎಂದರೂ ಅನೇಕ ಮಂದಿ ಅದನ್ನು ನಿಷ್ಕ್ರಿಯಗೊಳಿತ್ತಿಲ್ಲ ಎಂದರು.
ಈ ಬಗ್ಗೆ ಆಟೋ ಮಾಲೀಕರಿಗೆ ಜಾಗೃತಿ ಮೂಡಿಸಬೇಕಿದೆ. ಹಾಗೆಯೇ ಅವರಿಗೆ ನೀಡುವ ಹಣವನ್ನು ಇನ್ನಷ್ಟು ಹೆಚ್ಚಿಸಿ ಈ ಬಗ್ಗೆ ಕ್ರಮಕೈಗೊಳ್ಳಬೇಕಿದೆ. ಒಟ್ಟಾರೆ ಮುಂದಿನ ಅಧಿವೇಶನದ ವೇಳೆಗೆ ಈ ಬಗ್ಗೆ ಸೂಕ್ತ ನಿರ್ಧಾರ ಪ್ರಕಟಿಸಲಾಗುತ್ತದೆ ಎಂದು ರಾಮಲಿಂಗಾರೆಡ್ಡಿ ಹೇಳಿದರು.