ವರ್ತೂರು ಪ್ರಕಾಶ್ ವಿರುದ್ಧ ಎಫ್ ಐಆರ್

ಅಕ್ರಮ ಆಸ್ತಿ ಗಳಿಕೆ ಹಾಗೂ ಹಣಕ್ಕಾಗಿ ಧಮಕಿ ಹಾಕಿದ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಕೋಲಾರ ಶಾಸಕ ವರ್ತೂರು ಪ್ರಕಾಶ್ ವಿರುದ್ಧ...
ಶಾಸಕ ವರ್ತೂರು ಪ್ರಕಾಶ್
ಶಾಸಕ ವರ್ತೂರು ಪ್ರಕಾಶ್
Updated on: 

ಕೋಲಾರ: ಅಕ್ರಮ ಆಸ್ತಿ ಗಳಿಕೆ ಹಾಗೂ ಹಣಕ್ಕಾಗಿ ಧಮಕಿ ಹಾಕಿದ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಕೋಲಾರ ಶಾಸಕ ವರ್ತೂರು ಪ್ರಕಾಶ್ ವಿರುದ್ಧ ಲೋಕಾಯುಕ್ತ ಪೊಲೀಸರು ದೂರು ದಾಖಲಿಸಿದ್ದಾರೆ.

ಕೋಲಾರ ಜಿಲ್ಲೆ ಮುಳಬಾಗಿಲು ಡಿವೈಎಸ್ಪಿ ಗೋವಿಂದಯ್ಯ ಅವರಿಗೆ ಹಣಕ್ಕಾಗಿ ವರ್ತೂರು ಪ್ರಕಾಶ್ ಅವರು ಧಮಕಿ ಹಾಕಿದ್ದರು ಎಂಬ ಆಪಾದನೆ ಕೇಳಿ ಬಂದಿದೆ.

ಇತ್ತೀಗಷ್ಟೆ ಆರ್ ಟಿಐ ಕಾರ್ಯಕರ್ತ ಲೋಕೇಶ್ ಗೌಡ ಎಂಬುವವರು ಬೆಂಗಳೂರಿನಲ್ಲಿರುವ ಲೋಕಾಯುಕ್ತ ಕಛೇರಿಯಲ್ಲಿ ದೂರನ್ನು ದಾಖಲಿಸಿದ್ದರು. ಈ ಪ್ರಕರಣವನ್ನು ಕೋಲಾರ ಲೋಕಾಯುಕ್ತಕ್ಕೆ ವರ್ಗಾಯಿಸಲಾಗಿತ್ತು. ಈ ಹಿನ್ನಲೆಯಲ್ಲಿ ವರ್ತೂರು ಪ್ರಕಾಶ್ ವಿರುದ್ಧ ಎಫ್ ಐಆರ್ ದಾಖಲಾಗಿದೆ ಎಂದು ಮೂಲಗಳು ತಿಳಿಸಿವೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com