ಅವೆನ್ಯೂ ರಸ್ತೆಯಲ್ಲಿ ಸಂಚಾರಕ್ಕಿಳಿದ ಬಿಎಂಟಿಸಿ ಬಸ್

ವಿಧಾನಸೌಧದ ಉದ್ಯೋಗಿಗಳಿಗೆ ಅನುಕೂಲವಾಗುವ ಸಲುವಾಗಿ ಕೆ.ಆರ್.ಮಾರ್ಕೆಟ್ ಮಾರ್ಗವಾಗಿ ತೆರಳುವ ಬಸ್ ಗಳು ಅವೆನ್ಯೂ ರಸ್ತೆ ಮಾರ್ಗವಾಗಿ ಸಂಚರಿಸಲು ಗುರುವಾರದಿಂದ ಪ್ರಾರಂಭಿಸಿವೆ...
ಅವೆನ್ಯೂ ರಸ್ತೆ (ಸಂಗ್ರಹ ಚಿತ್ರ)
ಅವೆನ್ಯೂ ರಸ್ತೆ (ಸಂಗ್ರಹ ಚಿತ್ರ)

ಬೆಂಗಳೂರು: ವಿಧಾನಸೌಧದ ಉದ್ಯೋಗಿಗಳಿಗೆ ಅನುಕೂಲವಾಗುವ ಸಲುವಾಗಿ ಕೆ.ಆರ್.ಮಾರ್ಕೆಟ್ ಮಾರ್ಗವಾಗಿ ತೆರಳುವ ಬಸ್ ಗಳು ಅವೆನ್ಯೂ ರಸ್ತೆ ಮಾರ್ಗವಾಗಿ ಸಂಚರಿಸಲು ಗುರುವಾರದಿಂದ ಪ್ರಾರಂಭಿಸಿವೆ.

ಇಂದು ಬೆಳಿಗ್ಗೆಯಿಂದಲೇ ಬಿಎಂಟಿಸಿ ಬಸ್ ಗಳು ಅವೆನ್ಯೂ ರಸ್ತೆಗಳಿದಿದ್ದು ತನ್ನ ಸಂಚಾರ ಪ್ರಾರಂಭಿಸಿದೆ. ಅವೆನ್ಯೂ ರಸ್ತೆಯ ಮಾರ್ಗವಾಗಿ ಈಗಾಗಲೇ 12 ಬಿಎಂಟಿಸಿ ಬಸ್ ಗಳು ಸಂಚಾರವನ್ನು ಪ್ರಾರಂಭಿಸಿದೆ. ಬೆಳಿಗಿನ ಸಮಯದಲ್ಲಿ ರಸ್ತೆಯಲ್ಲಿ ಅಂಗಡಿ ಮುಗ್ಗಟ್ಟುಗಳು ಮುಚ್ಚಿರುವ ಕಾರಣ ಜನದಟ್ಟನೆಯು ಕಡಿಮೆ ಇರುತ್ತದೆ. ಹೀಗಾಗಿ ಈ ಸಮಯವು ಬಸ್ ಸಂಚಾರಕ್ಕೆ ಸುಗಮವಾಗಿರುವ ಉದ್ದೇಶದಿಂದ, ಬಸ್ ಸಂಚಾರ ವ್ಯವಸ್ಥೆಯನ್ನು ಬೆಳಿಗ್ಗೆ 8 ರಿಂದ 10.30ರವರೆಗೆ ಮಾತ್ರ ನೀಡಲಾಗಿದೆ ಎಂದು ತಿಳಿದುಬಂದಿದೆ.

ಅವೆನ್ಯೂ ರಸ್ತೆಯಲ್ಲಿ ಬಸ್ ಸಂಚಾರ ಕುರಿತಂತೆ ಮುನ್ನೆಚ್ಚರಿಕೆ ವಹಿಸಿದ್ದ ಸಂಚಾರಿ ಪೊಲೀಸರು, ಸ್ಥಳದಲ್ಲಿದ್ದು ಸಂಚಾರ ದಟ್ಟಣೆ ಉಂಟಾಗದಂತೆ ನೋಡಿಕೊಂಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com