ಗಿರೀಶ್ ಕಾರ್ನಾಡ್ ಉದ್ಧಟತನ: ಕನ್ನಡ ಪತ್ರಕರ್ತರನ್ನು ಹೊರಗಟ್ಟಿದ ಸಾಹಿತಿ

ಕನ್ನಡದ ಸುದ್ದಿ ಚಾನಲ್‌ ಗಳ ಪ್ರತಿನಿಧಿಗಳಿಗೆ ಜ್ಞಾನಪೀಠ ಪುರಸ್ಕೃತ ಸಾಹಿತಿ ಡಾ. ಗಿರೀಶ್‌ ಕಾರ್ನಾಡ್‌ ತಮ್ಮ ಮನೆಯೊಳಗೆ ಪ್ರವೇಶ ನೀಡದೆ ಗೇಟ್‌ನಿಂದ ...
ಗಿರೀಶ್ ಕರ್ನಾಡ್
ಗಿರೀಶ್ ಕರ್ನಾಡ್
Updated on: 

ಬೆಂಗಳೂರು : ಕನ್ನಡದ ಸುದ್ದಿ ಚಾನಲ್‌ ಗಳ ಪ್ರತಿನಿಧಿಗಳಿಗೆ  ಜ್ಞಾನಪೀಠ ಪುರಸ್ಕೃತ ಸಾಹಿತಿ ಡಾ. ಗಿರೀಶ್‌ ಕಾರ್ನಾಡ್‌ ತಮ್ಮ ಮನೆಯೊಳಗೆ ಪ್ರವೇಶ ನೀಡದೆ ಗೇಟ್‌ನಿಂದ ಹೊರಕಳುಹಿಸಿ ಅವಮಾನ ಮಾಡಿದ ಘಟನೆ ನಡೆದಿದೆ.

ಜೆ.ಪಿ.ನಗರದಲ್ಲಿರುವ ಕಾರ್ನಾಡ್‌ ನಿವಾಸಕ್ಕೆ ಕನ್ನಡ, ಹಿಂದಿ ಮತ್ತು ಇಂಗ್ಲೀಷ್‌ ಟಿ.ವಿ ಸುದ್ದಿ ವಾಹಿನಿಗಳ ಪ್ರತಿನಿಧಿಗಳು ತೆರಳಿದ್ದರು. ಮನೆಯಲ್ಲಿದ್ದ ಕಾರ್ನಾಡ್‌ ಉಳಿದ ಭಾಷೆಯ ಚಾನೆಲ್‌ ಗಳ ಪ್ರತಿನಿಧಿಗಳಿಗೆ ಮನೆಯೊಳಗೆ ಪ್ರವೇಶಿಸಲು ಅವಕಾಶ ನೀಡಿದ್ದರು. ಆದರೆ ಕನ್ನಡ ಭಾಷೆಯ ಸುದ್ದಿ ಚಾನಲ್‌ಗ‌ಳಿಗೆ ಅವಕಾಶ ನಿರಾಕರಿಸಿದರು.

ಕಾರ್ನಾಡ್ ತಾರತಮ್ಯದ ಬಗ್ಗೆ ಪತ್ರಕರ್ತರು ಪ್ರಶ್ನಿಸಿದಾಗ "ಕನ್ನಡ ಚಾನಲ್‌ಗ‌ಳು ಇಡೀ ಪ್ರಕರಣವನ್ನು ಹಾದಿತಪ್ಪಿಸುತ್ತಿವೆ. ನನ್ನ ಮಾತುಗಳನ್ನು ಸರಿಯಾಗಿ ಕೇಳದ ನಿಮ್ಮೊಂದಿಗೆ ಏಕೆ ನಾನು ಮಾತಾಡಬೇಕು' ಎಂದು ಕಾರ್ನಾಡ್‌ ಆಕ್ರೋಶಭರಿತವಾಗಿ ನುಡಿದು ಗೇಟು ಮುಚ್ಚಿದ್ದಾರೆ. ಅನಂತರ ಹಿಂದಿ ಹಾಗೂ ಇಂಗ್ಲಿಷ್‌ ಟಿ.ವಿ ಸುದ್ದಿ ವಾಹಿನಿಗಳ ಪ್ರತಿನಿಧಿಗೆ ಬಿಡಿ-ಬಿಡಿಯಾಗಿ ತಮ್ಮ ಹೇಳಿಕೆ ನೀಡಿದ್ದಾರೆ.

ಕೆಂಪೇಗೌಡರ ವಿರುದ್ಧ ಹೇಳಿಕೆ ನೀಡಿ ವಿವಾದಕ್ಕೆ ತುತ್ತಾಗಿರುವ ಗಿರೀಶ್‌ ಕಾರ್ನಾಡ್‌ ಅವರಿಗೆ ಸಾಮಾಜಿಕ ತಾಣದಲ್ಲಿ ದುಷ್ಕರ್ಮಿಯೊಬ್ಬ ಜೀವ ಬೆದರಿಕೆ ಹಾಕಿದ್ದಾನೆ. ಈ ಬೆದರಿಕೆ ಸಂದೇಶದ ಹಿನ್ನೆಲೆಯಲ್ಲಿ ಕಾರ್ನಾಡ್‌ ಅವರಿಗೆ 24 ತಾಸು ಗನ್‌ ಮ್ಯಾನ್‌ ಹಾಗೂ ಬೆಂಗಳೂರಿನ ಜೆ.ಪಿ.ನಗರದಲ್ಲಿರುವ ಅವರ ನಿವಾಸಕ್ಕೆ ಬಿಗಿ ಪೊಲೀಸ್‌ ಭದ್ರತೆ ಕಲ್ಪಿಸಲಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com