

ಪುತ್ತೂರು/ಬಂಟ್ವಾಳ: ರಾಜ್ಯದ ಕಾನೂನು ಹಾಗೂ ಸುವ್ಯವಸ್ಥೆ ಬಗ್ಗೆ ಕೇಂದ್ರ ಸರ್ಕಾರ ಗಮನ ಇರಿಸಿದೆ. ಪರಿಸ್ಥಿತಿಯನ್ನು ಅವಲೋಕಿಸಿ ಮುಂದಿನ ಕ್ರಮ ಕೈಗೊಳ್ಳಲಿದೆ ಎಂದು ಕೇಂದ್ರ ಕಾನೂನು ಸಚಿವ ಸದಾನಂದ ಗೌಡ ತಿಳಿಸಿದ್ದಾರೆ.
ಪುತ್ತೂರು ಬೊಳುವಾರು ಶ್ರೀ ಉಳ್ಳಾಲ್ತಿ ಮಲರಾಯ ದೇವಸ್ಥಾನಕ್ಕೆ ಭಾನುವಾರ ಭೇಟಿ ನೀಡಿದ ಸಂದರ್ಭದಲ್ಲಿ ಸುದ್ದಿಗಾರರೊಂ ದಿಗೆ ಮಾತನಾಡಿದರು. ಸಿಎಂ ಸ್ವಯಂಕೃತಾಪರಾಧ: ಬಂಟ್ವಾಳ ತಾಲೂಕಿನ ಮಣಿಹಳ್ಳ ಸಮೀಪ ಚೂರಿ ಇರಿತದಿಂದ ಮೃತಪಟ್ಟ ಹರೀಶ್ ಪೂಜÁರಿ ಮನೆಗೆ ಭಾನುವಾರ ಬೆಳಗ್ಗೆ ಭೇಟಿ ನೀಡಿ ಸಾಂತ್ವನ ಹೇಳಿದ ಸದಾನಂದ ಗೌಡರು,
ಟಿಪ್ಪು ಹೆಸರಿನಲ್ಲಿ ರಾಜ್ಯದಲ್ಲಿ ನಡೆಯುತ್ತಿರುವ ಅಹಿತಕರ ಘಟನೆಗಳು ಮುಖ್ಯ ಮಂತ್ರಿಗಳ ಸ್ವಯಂಕೃತ ಅಪರಾಧ. ರಾಜ್ಯದಲ್ಲಿ ಕಾನೂನು ವ್ಯವಸ್ಥೆ ಸಂಪೂರ್ಣ ಹದಗೆಟ್ಟಿದ್ದು, ಪರಿಸ್ಥಿತಿ ನಿಭಾಯಿಸುವಲ್ಲಿ ಗೃಹ ಇಲಾಖೆ ಸಂಪೂರ್ಣ ವಿಫಲವಾಗಿದೆ ಎಂದು ಹೇಳಿದರು.
`ಟಿಪ್ಪು ಜಯಂತಿ ಬಗ್ಗೆ ವಿಧಾನಸಭೆ, ವಿಧಾನ ಪರಿಷತ್‍ನಿಂದ ತೊಡಗಿ ಜನಸಾಮಾ ನ್ಯನಿಂದಲೂ ವಿರೋಧ ಕೇಳಿಬಂದರೂ ಅದನ್ನು ನಡೆಸಿರುವ ಉದ್ದೇಶ ಏನು? ಹಾಗಿದ್ದರೂ ಟಿಪ್ಪು ಜಯಂತಿಯ ಆಚರಣೆ ಅಗತ್ಯವಿತ್ತೆ' ಎಂದು ಪ್ರಶ್ನಿಸಿದರು.