ಸೆರೆಸಿಕ್ಕರು ಎಲೆಕ್ಟ್ರಾನಿಕ್ಸ್ ಉಪಕರಣ ಕಳ್ಳರು

ಮನೆಗಳವು ಮತ್ತು ಎಲೆಕ್ಟ್ರಾನಿಕ್ಸ್ ಉಪಕರಣ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಮಹಿಳೆಯರು ಸೇರಿದಂತೆ ನಾಲ್ವರನ್ನು ಬಂಧಿಸಿರುವ ಗಿರಿನಗರ ಪೊಲೀಸರು ರು.7 ಲಕ್ಷ ಮೌಲ್ಯದ ವಸ್ತುಗಳನ್ನು ವಶಕ್ಕೆ ಪಡೆದಿದ್ದಾರೆ...
(ಸಾಂದರ್ಭಿಕ  ಚಿತ್ರ)
(ಸಾಂದರ್ಭಿಕ ಚಿತ್ರ)
Updated on: 

ಬೆಂಗಳೂರು: ಮನೆಗಳವು ಮತ್ತು ಎಲೆಕ್ಟ್ರಾನಿಕ್ಸ್ ಉಪಕರಣ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಮಹಿಳೆಯರು ಸೇರಿದಂತೆ ನಾಲ್ವರನ್ನು ಬಂಧಿಸಿರುವ ಗಿರಿನಗರ ಪೊಲೀಸರು ರು.7 ಲಕ್ಷ ಮೌಲ್ಯದ ವಸ್ತುಗಳನ್ನು ವಶಕ್ಕೆ ಪಡೆದಿದ್ದಾರೆ.

ಸೆಂಧಿಲ್ ಮುರುಗನ್ (30), ಜಿ.ವಿ.ವಿನಯ್ ಕುಮಾರ್ (30) ಸರೋಜ (48) ಹಾಗೂ ಲಕ್ಷ್ಮೀ (46) ಬಂಧಿತರು. ಇವರಿಂದ 4 ಚಿನ್ನದ ಸರಗಳು, 1 ಚಿನ್ನದ ಲಾಕೆಟ್, 1 ಚಿನ್ನದ ಉಂಗುರ, 4 ಚಿನ್ನದ ಬಳೆಗಳು ಸೇರಿದಂತೆ 200 ಗ್ರಾಂ ಚಿನ್ನಾಭರಣ, ಐ-ಪಾಡ್, ಕ್ಯಾಮರಾ, ಪೆನ್‍ಡ್ರೈವ್, ಡೇಟಾಕಾರ್ಡ್, ವಾಚ್, ಕೃತ್ಯಕ್ಕೆ ಬಳಸಿದ್ದ ನಕಲಿ ಕೀ ಜಪ್ತಿ ಮಾಡಲಾಗಿದೆ.

ಇವರ ಬಂಧನದಿಂದ 3 ಕಳವು ಪ್ರಕರಣಗಳು ಬೆಳಕಿಗೆ ಬಂದಿವೆ ಎಂದು ಪೊಲೀಸರು ತಿಳಿಸಿದ್ದಾರೆ. ಮೊಬೈಲ್ ಕಳ್ಳನ ಬಂಧನ: ಮನೆ, ಬಸ್ ಗಳಲ್ಲಿ ಮೊಬೈಲ್ ಕಳ್ಳತನ ಮಾಡುತ್ತಿದ್ದ ಆರೋಪಿಯನ್ನು ಬಂಧಿಸಿರುವ ಪೊಲೀಸರು ರು.80 ಸಾವಿರ ಮೌಲ್ಯದ ವಿವಿಧ ಕಂಪನಿಗಳ 4 ಮೊಬೈಲ್ ಫೋನ್, 1 ಟ್ಯಾಬ್ಲೆಟ್ ವಶಪಡಿಸಿಕೊಂಡಿದ್ದಾರೆ. ಹೊಸಕರೆಹಳ್ಳಿ ಈಶ್ವರಿನಗರದ ನಿವಾಸಿ ವಿಜಯ್(19) ಬಂಧಿತ. ಆರೋಪಿ ನೀಡಿದ ಮಾಹಿತಿ ಮೇರೆಗೆ 4 ಮೊಬೈಲ್ ಜಪ್ತಿ ಮಾಡಲಾಗಿದೆ. ಸಹಚರರಾದ ರೇಣು ಟಾಂಗು, ಕಿರಣ ಹಾಗೂ ಕಾಂತರಾಜು ತಲೆ ಮರೆಸಿಕೊಂಡಿ ದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com