

ವಿಧಾನಪರಿಷತ್: ಕೆಪಿಎಸ್‍ಸಿ ನೇಮಕಾತಿ ವೇಳೆ ಲಂಚ ಕೇಳಿದರೆಂದು ಬೇಸತ್ತ ಸೇನಾಧಿಕಾರಿಯೊಬ್ಬರು ತಮಗೆ ಲಭಿಸಿದ ರಾಷ್ಟ್ರಪತಿ ಪದಕ ವಾಪಸ್ ಮಾಡಲು ನಿರ್ಧರಿಸಿದ್ದು, ಇದು ರಾಜ್ಯ ಸರ್ಕಾರದ ಆಡಳಿತದ ಅಸಹಿಷ್ಣುತೆ ಎಷ್ಟಿದೆ ಎಂಬುದನ್ನು ತೋರುತ್ತದೆ ಎಂದು ಪ್ರತಿಪಕ್ಷ ನಾಯಕ ಕೆ.ಎಸ್. ಈಶ್ವರಪ್ಪ ಹೇಳಿದರು.
ಸಮಾಜ ಕಲ್ಯಾಣ ಇಲಾಖೆಯಲ್ಲಾದ ಭ್ರಷ್ಟಾಚಾರಕ್ಕೆ ಸಂಬಂಧಿಸಿದಂತೆ ನಿಲುವಳಿ ಸೂಚನೆ ಮಂಡನೆಗೆ ಅವಕಾಶ ಕೋರಿ ವಿಷಯ ಪ್ರಸ್ತಾಪ ಮಾಡುವ ವೇಳೆ, ಈಶ್ವರಪ್ಪನವರು ಈ ಸಂಗತಿಯನ್ನೂ ಪ್ರಸ್ತಾಪಿಸಿದರು.
ನಿವೃತ್ತ ಸೇನಾಧಿಕಾರಿ ಮೇಜರ್ ಜಯ ಪ್ರಕಾಶ್ ಈ ಹಿಂದೆಯೇ 1 ಬಾರಿ ಕೆಪಿಎಸ್ ಸಿ ಪರೀಕ್ಷೆ ಬರೆದಿದ್ದು, ನೇಮಕಾತಿಗೆ ಸದಸ್ಯರೊಬ್ಬರು ಲಂಚ ಕೇಳಿದ್ದಾರೆ. ಇದರಿಂದ ಬೇಸರಗೊಂಡ ಜಯಪ್ರಕಾಶ್ ರಾಷ್ಟ್ರಪತಿ ಪದಕವನ್ನು ಹಿಂತಿರುಗಿಸುವ ನಿರ್ಧಾ ರ ಕೈಗೊಂಡಿದ್ದಾರೆ. ಸರ್ಕಾರ ಎಷ್ಟು ಭ್ರಷ್ಟಾಚಾರದಿಂದ ಕೂಡಿದೆ ಎಂಬುದಕ್ಕೆ ಇದೂ ಒಂದು ಉದಾಹರಣೆ ಎಂದು ಹೇಳಿದರು.
ಈ ವಿಚಾರಕ್ಕೆ ಆಡಳಿತ ಪಕ್ಷದ ನಾಯಕರು ತೀವ್ರ ಆಕ್ಷೇಪ ವ್ಯಕ್ತಪಡಿಸಿ, ನಿಲುವಳಿ ಸೂಚನೆಯಲ್ಲಿ ಈ ವಿಷಯ ಉಲ್ಲೇಖ ಆಗಿಲ್ಲ. ವಿಷಯಕ್ಕೆ ಸಂಬಂಧಿಸಿದಂತೆ ಮಾತನಾಡ ಬೇಕು ಎಂದರು. ಈ ಗೊಂದಲಗಳಲ್ಲಿ ಜಯಪ್ರಕಾಶ ವಿಚಾರ ಮುಂದುವರೆಯಲಿಲ್ಲ.
ಲಂಚಕ್ಕಿಂತ ಸಾವು ಮೇಲು: ಈ ಮಧ್ಯೆ ಮಾಧ್ಯಮಗಳೊಂದಿಗೆ ಮಾತನಾಡಿದ ಮಾಜಿ ಸೇನಾನಿ ಮೇಜರ್ ಜಯಪ್ರಕಾಶ್, ನಾವು ಗಡಿಯಲ್ಲಿ ಶತ್ರು ಸೈನಿಕರು, ಭಯೋತ್ಪಾದಕರ ವಿರುದ್ಧ ಪ್ರಾಣದ ಹಂಗು ತೊರೆದು ಹೋರಾಟ ಮಾಡುತ್ತೇವೆ. ಕಳೆದ ಬಾರಿ ಲಂಚ ಕೇಳಿದವರೇ ಈಗಲೂ ಅಲ್ಲಿದ್ದಾರೆ. ಇಂತಹ ಅಸಹ್ಯ ನೊಡಲಾರೆ. ಇಂತಹ ಭ್ರಷ್ಟಾಚಾರ ನೊಡುವ ಬದಲು ಸಾಯುವುದೇ ಮೇಲೆಂದು ಬೇಸರಿಸಿದರು.
ವೀರಯ್ಯ ವೀರಾವೇಶ ಮೇಲ್ಮನೆ ಕಲಾಪದ ಕೊನೆಯಲ್ಲಿ ವಿಪಕ್ಷ ಮುಖ್ಯ ಸಚೇತಕ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಮೇಲೆ ಬಿಜೆಪಿ ಸದಸ್ಯ ಡಿ.ಎಸ್. ವೀರಯ್ಯ ರೇಗಾಡಿದ ಪ್ರಸಂಗ ನಡೆ
ಯಿತು. ತಮ್ಮ ಪ್ರಶ್ನೆಗೆ ಕಾರ್ಣಿಕ್ ಸರಿಯಾಗಿ ಉತ್ತರಿಸಲಿಲ್ಲ ಎಂಬ ಕಾರಣಕ್ಕೆ ಬೇಸರ ಗೊಂಡ ವೀರಯ್ಯ ತಾಳ್ಮೆ ಕೆಟ್ಟು ಮಾತನಾಡಿದ್ದು ಇಡೀ ಸಭಾಂಗಣವೇ ಸ್ಥಬ್ಧವಾಗುವಂತೆ ಮಾಡಿತು.