ಶಹಾಪುರ/ಮಸ್ಕಿ/ ಮಂಡ್ಯ: ಸಾಲಬಾಧೆಯಿಂದ ಬೇಸತ್ತು ರಾಜ್ಯ ದಲ್ಲಿ ಮೂವರು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಯಾದಗಿರಿ ಜಿಲ್ಲೆಯ ಗೋಗಿ ಹತ್ತಿರದ ಸಿಂಗನಹಳ್ಳಿಯಲ್ಲಿ ದಾವಲಸಾಬ್ ಹುಸೇನ್ ಸಾಬ್ ಜಾಲಿಕಾಯಿ(45), ಮಂಡ್ಯದ ಕಾಗೆಹಳ್ಳದ ದೊಡ್ಡಿ ಗ್ರಾಮದ ಪುಟ್ಟ ಸ್ವಾಮಿ(55) ರಾಯಚೂರು ಜಿಲ್ಲೆಯ ಮಸ್ಕಿ ಹತ್ತಿರದ ಮೆದಕಿನಾಳ ತಾಂಡಾದ ಕೇಶಪ್ಪ ರಾಠೋಡ್(45) ಆತ್ಮಹತ್ಯೆ ಮಾಡಿಕೊಂಡವರು.
ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿರುವ ದಾವಲಸಾಬ್ ಅವರು ಬ್ಯಾಂಕಿನಲ್ಲಿ ಬೆಳೆ ಸಾಲ ರು.20 ಸಾವಿರ, ರು.50 ಸಾವಿರ ಬಂಗಾರದ ಆಭರಣಗಳ ಮೇಲೆ ಸಾಲ ಹಾಗೂ ಸುಮಾರು ರು.2 ಲಕ್ಷದಷ್ಟು ಕೈಸಾಲ ಮಾಡಿಕೊಂಡಿದ್ದರು ಎನ್ನಲಾಗಿದೆ.
ಇನ್ನು ಬ್ಯಾಂಕಿನಲ್ಲಿ ರು.5 ಲಕ್ಷ ಸಾಲ ಮಾಡಿಕೊಂಡಿದ್ದ ರಾಥೋಡ್ ಅದನ್ನು ತೀರಿಸಲಾಗಿದೆ ನೇಣು ಬಿಗಿದುಕೊಂಡಿದ್ದಾರೆ. ಪುಟ್ಟಸ್ವಾಮಿ ಅವರು ರು.4 ರಿಂದ ರು.5 ಲಕ್ಷ ಸಾಲ ಮಾಡಿಕೊಂಡಿದ್ದರು. ಅದನ್ನು ತೀರಿಸುವ ದಾರಿ ಕಾಣದೆ ಜಮೀನಿನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.