ಅವಸರವೇ ಅವಸಾನವಾಯ್ತು

ಲಾರಿ ಹಾಗೂ ಬೈಕ್ ನಡುವೆ ಸಂಭವಿಸಿ ದ ಅಪಘಾತದಲ್ಲಿ ಎಂಜಿನಿ-ಯರಿಂಗ್ ವಿದ್ಯಾರ್ಥಿಗಳಿಬ್ಬರು ಮೃತಪಟ್ಟಿರುವ ಘಟನೆ ಹೊರಮಾವು ಮುಖ್ಯರಸ್ತೆ ಗಾಂಧಿಪ್ರತಿಮೆ ಬಳಿ ಶುಕ್ರವಾರ ಬೆಳಗ್ಗೆ ನಡೆದಿದೆ...
(ಸಾಂದರ್ಭಿಕ  ಚಿತ್ರ)
(ಸಾಂದರ್ಭಿಕ ಚಿತ್ರ)
Updated on: 

ಬೆಂಗಳೂರು: ಲಾರಿ ಹಾಗೂ ಬೈಕ್ ನಡುವೆ ಸಂಭವಿಸಿ ದ ಅಪಘಾತದಲ್ಲಿ ಎಂಜಿನಿ-ಯರಿಂಗ್ ವಿದ್ಯಾರ್ಥಿಗಳಿಬ್ಬರು ಮೃತಪಟ್ಟಿರುವ ಘಟನೆ ಹೊರಮಾವು ಮುಖ್ಯರಸ್ತೆ ಗಾಂಧಿಪ್ರತಿಮೆ ಬಳಿ ಶುಕ್ರವಾರ ಬೆಳಗ್ಗೆ ನಡೆದಿದೆ.

ಕಮ್ಮನಹಳ್ಳಿ ನಿವಾಸಿಗಳಾದ ಗೆರಾಲ್ಡ್ ಕ್ಸೇವಿಯರ್ (19) ಮತ್ತು ಕಿಷನ್ (19) ಮೃತರು. ವೇಗವಾಗಿ ವಾಹನ ಚಲಾಯಿಸಿ ಲಾರಿಯನ್ನು ಓವರ್ ಟೇಕ್ ಮಾಡಲು ಯತ್ನಿಸಿದ್ದೆ ಅಪಘಾತಕ್ಕೆ ಕಾರಣ ಎಂದು ಶಂಕಿಸಲಾಗಿದೆ. ಮೃತ ಕ್ಸೇವಿಯರ್ ಮತ್ತು ಕಿಷನ್ ಕೆ.ಆರ್.ಪುರ ಸಮೀಪದ ಖಾಸಗಿ ಕಾಲೇಜಿನಲ್ಲಿ ಪ್ರಥಮ ವರ್ಷದ ಎಂಜಿನಿಯರಿಂಗ್ ವ್ಯಾಸಂಗ ಮಾಡುತ್ತಿದ್ದರು. ಗಾಂಧಿ ಜಯಂತಿ ಹಿನ್ನೆಲೆಯಲ್ಲಿ ಕಾಲೇಜಿಗೆ ರಜೆ ಇತ್ತು. ಆದರೆ, ಸ್ಪೆಷಲ್ ಕ್ಲಾಸ್ ಇದೆ ಎಂದು ಹೇಳಿ ದ್ವಿಚಕ್ರ ವಾಹನದಲ್ಲಿ ಕಾಲೇಜಿಗೆ ಹೋಗಿದ್ದರು ಎಂದು ಕುಟುಂಬ ಸದಸ್ಯರು ಹೇಳಿಕೆ ನೀಡಿರುವುದಾಗಿ ಪೊಲೀಸರು ಹೇಳಿದ್ದಾರೆ.

ಕ್ಸೇವಿಯರ್ ಬೈಕ್ ಓಡಿಸುತ್ತಿದ್ದು ಕಿಷನ್ ಹಿಂಬದಿ ಕುಳಿತಿದ್ದ. ಬೆಳಗ್ಗೆ 7.40ರ ಸುಮಾರಿಗೆ ಹೊರಮಾವು ಮುಖ್ಯರಸ್ತೆ ಗಾಂಧಿ ಪ್ರತಿಮೆ ಸಮೀಪದ ಯಲ್ಲಮ್ಮ ದೇವಸ್ಥಾನದ ಎದುರು
ಹೋಗುತ್ತಿದ್ದಾಗ ಅಪಘಾತ ಸಂಭವಿಸಿದೆ. ಸಿಲಿಂಡರ್ ಗ್ಯಾಸ್‍ಗಳನ್ನು ಸಾಗಿಸುತ್ತಿದ್ದ ಲಾರಿ ಗಾಂಧಿ ಪ್ರತಿಮೆ ಕಡೆಯಿಂದ ಜಯಂತಿನಗರ ಕಡೆ ತೆರಳುತ್ತಿತ್ತು.

ಲಾರಿಯನ್ನು ಹಿಂದಿಕ್ಕುವ ಭರದಲ್ಲಿ ವೇಗವಾಗಿ ದ್ವಿಚಕ್ರ ವಾಹನ ಚಲಾಯಿಸಿಕೊಂಡು ಬಂದ ಕ್ಸೇವಿಯರ್, ಬಲಭಾಗದಿಂದ ಹಿಂದಿಕ್ಕಲು ಯತ್ನಿಸಿದ್ದ. ಈ ವೇಳೆ ದ್ವಿಚಕ್ರ ವಾಹನಕ್ಕೆ ಲಾರಿ ತಾಕಿ ನಿಯಂತ್ರಣ ತಪ್ಪಿ ವಿದ್ಯಾರ್ಥಿಗಳು ಕೆಳಗೆ ಬಿದ್ದಾಗ ಅವರ ತಲೆ ಮೇಲೆ ಲಾರಿ ಚಕ್ರ ಹರಿದಿದೆ. ಗಂಭೀರವಾಗಿ ಗಾಯಗೊಂಡಿದ್ದ ವಿದ್ಯಾರ್ಥಿಗಳನ್ನು ಸ್ಥಳೀಯರು 108 ಆ್ಯಂಬುಲೆನ್ಸ್ ನಲ್ಲಿ ಆಸ್ಪತ್ರೆಗೆ ಕರೆದೊಯ್ದರಾದರೂ ತೀವ್ರರಕ್ತ ಸ್ರಾವವಾಗಿ ಮಾರ್ಗಮಧ್ಯೆ ಮೃತಪಟ್ಟಿದ್ದಾರೆ.

ಅಪಘಾತ ಬಳಿಕ ಲಾರಿಯನ್ನು ಸ್ಥಳದಲ್ಲೇ ಬಿಟ್ಟು ಚಾಲಕ ಪರಾರಿಯಾಗಿದ್ದಾನೆ. ನೋಂದಣಿ ಸಂಖ್ಯೆ ಆಧರಿಸಿ ಆರೋಪಿ ಪತ್ತೆ ಮಾಡಲಾಗುತ್ತಿ ದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದರು. ಈ ಸಂಬಂಧ ಬಾಣಸವಾಡಿ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com