

ಬೆಂಗಳೂರು: ಪತ್ನಿ ಆತ್ಮಹತ್ಯೆ ಮಾಡಿಕೊಂಡಿರುವ ಸುದ್ದಿ ಕೇಳಿ ಪತಿಯು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಮಡಿವಾಳ ಸಮೀಪದ ಹೊಂಗಸಂದ್ರದಲ್ಲಿ ಶುಕ್ರವಾರ ನಡೆದಿದೆ.
ರಾಮನಗರ ಜಿಲ್ಲೆ ಚನ್ನಪಟ್ಟಣದ ಬಸನಹಳ್ಳಿ ಗ್ರಾಮದ ಮಂಗಳಮ್ಮ (32) ಹಾಗೂ ಅವರ ಪತಿ ಬಸವಲಿಂಗಪ್ಪ (38) ಆತ್ಮಹತ್ಯೆಗೆ ಶರಣಾದ ದಂಪತಿ, ಚೆನ್ನಪಟ್ಟಣದಲ್ಲಿದ್ದ ಪತ್ನಿ ಮಂಗಳಮ್ಮ ಶುಕ್ರವಾರ ಸಂಜೆ ನಿದ್ರೆ ಮಾತ್ರೆಸ ಸೇವಿಸಿದ್ದರು. ಅಸ್ವಸ್ಥಗೊಂಡಿದ್ದ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ, ಸಾವಿಗೀಡಾದರು. ಆಗ ಬೆಂಗಳೂರಿನಲ್ಲಿದ್ದ ಪತಿ ಬಸವಲಿಂಗಪ್ಪ ಅರಿಗೆ ಕರೆ ಮಾಡಿದ ಸಂಬಂಧಿಕರು, ಮಂಗಳಮ್ಮ ಮೃತಪಟ್ಟಿರುವ ವಿಷಯ ತಿಳಿಸಿದ್ದರು.
ಇದನ್ನು ಕೇಳಿದ ಪತಿ ಹೊಂಗಸಂದ್ರದ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಶನಿವಾರ ಬೆಳಗ್ಗೆ ಪ್ರಕರಣ ಬೆಳಕಿಗೆ ಬಂದಿದೆ. ಕೃಷಿಗಾಗಿ ಬಸವಲಿಂಗಪ್ಪ ರು.4 ಲಕ್ಷ ಸಾಲ ಮಾಡಿಕೊಂಡಿದ್ದರು. ಬೆಳೆ ಕೈಕೊಟ್ಟಿದ್ದರಿಂದ ಆರ್ಥಿಕ ಸಂಕಷ್ಟ ಉಂಟಾಗಿತ್ತು. ಸಾಲ ಕೊಟ್ಟವರು ಮನೆಗೆ ಬಂದು ಕೇಳಲಾರಂಭಿಸಿದರು. ಬ್ಯಾಂಕ್‍ಗಳಿಂದಲೂ ನೋಟಿಸ್‍ಗಳು ಬಂದವು ಎಂದು ಮೃತರ ಸಂಬಂಧಿಕರು ಹೇಳಿದ್ದಾರೆಂದು ಪೊಲೀಸರು ಹೇಳಿದ್ದಾರೆ.