ವಿದ್ಯಾರ್ಥಿಗಳಿಗೇನು ಲಾಭ?: ಕರ್ನಾಟಕದಲಿ ಪ್ರತಿ ವರ್ಷ 13 ಸಂಸ್ಥೆಗಳು ಪ್ರವೇಶ ಪರೀಕ್ಷೆ ನಡೆಸುತ್ತಿವೆ.ಸರ್ಕಾರಿ ಸೀಟುಗಳಿಗಾಗಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರ, ಕಾಮೆಡ್-ಕೆ, ಕೆಆರ್‍ಎಲ್‍ಎಂ(2) ಸೇರಿದಂತೆ ರಾಜ್ಯದಲ್ಲಿರುವ ಡೀಮ್ಡ್ ವಿವಿಗಳು ಪ್ರತ್ಯೇಕವಾಗಿ ತಮ್ಮದೇ ಪರೀಕ್ಷೆ ನಡೆಸುತ್ತಿವೆ. ಇದರ ಹೊರತಾಗಿ ರಾಷ್ಟ್ರೀಯ ಮಟ್ಟದ ಎಐ-ಪಿಎಂಟಿ, ಎಐಐಎಂಎಸ್ ಸೇರಿದಂತೆ ಒಟ್ಟಾರೆ 13 ಸಂಸ್ಥೆಗಳ ಪರೀಕ್ಷೆಗಳನ್ನುವಿದ್ಯಾರ್ಥಿಗಳು ಎದುರಿಸುತ್ತಾರೆ. ಒಂದೇ ಸಾಮಾನ್ಯ ಪ್ರವೇಶ ಪರೀಕ್ಷೆ ನಡೆಯುವುದರಿಂದ ವಿದ್ಯಾರ್ಥಿಗಳಿಗೆ ಪ್ರವೇಶ ಪರೀಕ್ಷೆಗಾಗಿನ ಸಾವಿರಾರು ರುಪಾಯಿ ಶುಲ್ಕ, ಪರೀಕ್ಷೆ ತಯಾರಿ,