ಜೋಶ್ ಗಾಗಿ ಅತ್ಯಾಚಾರ -ಆರೋಪಿಗಳ ತಪ್ಪೊಪ್ಪಿಗೆ

ಬೆಂಗಳೂರಿನಲ್ಲಿ ಅತ್ಯಾಚಾರ ಪ್ರಕರಣದ ಆರೋಪಿಗಳನ್ನು ಪೊಲೀಸರು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ. ಈ ವೇಳೆ ಬಂಧಿತರು, ``ನಾವು ಕುಡಿದಿದ್ದೆವು. ಜೋಶ್ ಗಾಗಿ ಈ ರೀತಿ ಮಾಡಿದೆವು,...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on: 

ಬೆಂಗಳೂರಿನಲ್ಲಿ ನಡೆದ ಬಿಪಿಒ ಉದ್ಯೋಗಿ ಮೇಲಿನ ಅತ್ಯಾಚಾರ ಪ್ರಕರಣದ ಆರೋಪಿಗಳನ್ನು ಪೊಲೀಸರು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ. ಈ ವೇಳೆ ಬಂಧಿತರು, ``ನಾವು ಕುಡಿದಿದ್ದೆವು. ಜೋಶ್ ಗಾಗಿ ಈ ರೀತಿ ಮಾಡಿದೆವು,'' ಎಂದು ಪೊಲೀಸರ ಸಮ್ಮುಖದಲ್ಲಿ ತಪ್ಪೊಪ್ಪಿಕೊಂಡಿದ್ದಾರೆ ಎನ್ನಲಾಗಿದೆ.

ಈ ನಡುವೆ ಬುಧವಾರ ಆರೋಪಿ ಸುನಿಲ್ ಮತ್ತು .ಯೋಗೇಶರನ್ನು ಎಸಿಎಂಎಂ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಯಿತು. ಇಬ್ಬರು ಆರೋಪಿಗಳನ್ನು 14 ದಿನಗಳ ಪೊಲೀಸ್ ಕಸ್ಟಡಿಗೆ  ಒಪ್ಪಿಸಿ ನ್ಯಾಯಾಲಯ ಆದೇಶಿಸಿದೆ. ಆರೋಪಿಗಳ ಹೆಚ್ಚಿನ ವಿಚಾರಣೆಗೆ ಹೆಚ್ಚಿನ ಕಾಲ ತಮ್ಮ ವಶಕ್ಕೆ ನೀಡಬೇಕೆಂದು ಪೊಲೀಸರು ನ್ಯಾಯಾಲಯದಲ್ಲಿ ಮನವಿ ಮಾಡಿದರು. ಪೊಲೀಸರ ಕೋರಿಗೆ ಮನ್ನಸಿದ ನ್ಯಾಯಾದೀಶ ಮೋಹನ್ ಪ್ರಭು, ಆರೋಪಿಗಳನ್ನು ಅ.20ರ ವರೆಗೆ ಪೊಲೀಸ್ ವಶಕ್ಕೆ ನೀಡಿದರು. ಇದಕ್ಕೂ ಮೊದಲು ಆರೋಪಿಗಳನ್ನು ನಗರದ ಸೇಂಟ್ ಜಾನ್ ಆಸ್ಪತ್ರೆಗೆ ಕರೆದೊಯ್ದು ವೈದ್ಯಕೀಯ ಪರೀಕ್ಷೆ ಮಾಡಿಸಲಾಯಿತು.

ಪ್ರತಿಭಾಳನ್ನು ನೆನೆದು ಕಣ್ಣೀರಿಟ್ಟ ತಾಯಿ
`ಪ್ರತಿಭಾ ಹತ್ಯೆಯ ತೀರ್ಪು ಬಂದು ಇಂದಿಗೆ (ಅಕ್ಟೋಬರ್8) ಬರೋಬ್ಬರಿ ಹತ್ತು ವರ್ಷ. ಘಟನೆ ನಡೆದಾಗ ಮಾತ್ರ ಜನ ಹಾಗೂ ಪೊಲೀಸರು ಈ ಕುರಿತು ಸಾಕಷ್ಟು ಬಡಬಡಾಯಿಸಿದರು. ಆದರೆ, ಇಂದು ವ್ಯವಸ್ಥೆ ಏನಾಗಿದೆ?  ನಾನು ಎಷ್ಟೇ ಹೋರಾಡಿರೂ ನನ್ನ ಮಗಳು ವಾಪಾಸ್ ಬರುವುದಿಲ್ಲ. ಜೀವಭಯದಿಂದ ನಾನೂ ಹೋರಾಟ ನಿಲ್ಲಿಸಿದ್ದೇನೆ . ನ್ಯಾಯಾಧಿಶರು ನೀಡಿದ ತೀರ್ಪಿನ ಪ್ರತಿ ಓದಿದರೆ ವ್ಯವಸ್ಥೆ ಬಗ್ಗೆ ಅಸಹ್ಯ ಹುಟ್ಟುತ್ತದೆ'

ಕಾಲ್ ಸೆಂಟರ್ ಉದ್ಯೋಗಿ ಪ್ರತಿಭಾ ಅವರ ತಾಯಿಯ ಬೇಸರದ ನುಡಿಗಳಿವು. ಪ್ರತಿಭಾ ಕ್ಯಾಬ್ ಚಾಲಕನಿಂದಲೇ ಅತ್ಯಾಚಾರಕ್ಕೊಳಗಾಗಿ ಹತ್ಯೆಯಾಗಿದ್ದರು. ಮೂರು ದಿನಗಳ ಹಿಂದೆ ನಡೆದ ಇಂಥದ್ದೇ ಘಟನೆಯಲ್ಲಿ ಬಿಪಿಒ ಉದ್ಯೋಗಿಯೊಬ್ಬರು ಅತ್ಯಾಚಾರಕ್ಕೊಳಗಾಗಿದ್ದಾರೆ.

ಪ್ರತಿಭಾ ತಾಯಿ ಗೌರಮ್ಮ, `ನಾನು ಮಗಳನ್ನು ಕಳೆದುಕೊಂಡು 10 ವರ್ಷ ಆಗಿದೆ. ಸಮಾಜದಲ್ಲಿ ಯಾವ ಸುಧಾರಣೆ ಆಗಿದೆ? ಆರೋಪಿಗೆ ಏನಾಗಿದೆ? ಘಟನೆಗಳು ಮಾತ್ರ ಮರುಕಳಿಸುತ್ತಲೇ ಇವೆ. ಘಟನೆ ನಡೆದಾಗ ದೊಡ್ಡ ಸುದ್ದಿ ಮಾಡುವ, ಮಾಧ್ಯಮಗಳು ನಂತರ ಅದನ್ನು ಮರೆತು ಬಿಡುತ್ತವೆ,'' ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

`ಹತ್ಯೆ ಪ್ರಕರಣದಲ್ಲಿ ಪೊಲೀಸರು ಕೆಲವು ವಿಷಯವನ್ನು ಮುಚ್ಚಿ ಹಾಕಿದ್ದಾರೆ. ವ್ಯವಸ್ಥೆ  ವಿರುದ್ಧ ಮಾತನಾಡುವಂತಿಲ್ಲ. ಮಾತನಾಡಿದರೆ ನಮ್ಮ ಮೇಲೆ ದೂರು ದಾಖಲಾಗುತ್ತದೆ. ಹಾಗಾಗಿ ನಾನೂ ಬಾಯಿಮುಚ್ಚಿ ಕುಳಿತಿದ್ದೇನೆ. ನನಗೂ ವಯಸ್ಸಾಯಿತು. ಈಗ ನ್ಯಾಯಕ್ಕಾಗಿ ಹೋರಾಡುವ ಶಕ್ತಿಯಿಲ್ಲ. ಯಾವ ವ್ಯವಸ್ಥೆಯೂ ಸರಿಯಿಲ್ಲ. ಸಾಮಾನ್ಯರಿಗೆ ನ್ಯಾಯ ಎಂಬುದು ಮರೀಚಿಕೆಯಾಗಿದೆ.  ಪ್ರಕರಣದಲ್ಲಿ ಮರೆ ಮಾಚಿದ ಸಂಗತಿಗಳುಸಾಕಷ್ಟಿವೆ, ಏನೇ ಆದರೂ ಅಂತಹ ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸಬೇಕು. ಹತ್ತು ಜನರನ್ನು ನೇಣಿಗೇರಿಸಿದರೆ ಮತ್ತೊಬ್ಬರಿಗೆ ಬುದ್ದಿ ಬರುತ್ತದೆ. ಅತ್ಯಾಚಾರಕ್ಕೆ ಗಲ್ಲು ಶಿಕ್ಷೆ ಎಂದಾದರೇ ಇಂತಹ ಪ್ರಕರಣಗಳನ್ನು ತಡೆಗಟ್ಟಬಹುದು ಎಂದು ಮಗಳನ್ನು ನೆನೆದು ಕಣ್ಣೀರಿಟ್ಟರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com