ದವನಂ ಪ್ರಕರಣ ಬಯಲಿಗೆ: ವಿಚಾರಣೆ ವೇಳೆ ಆರೋಪಿ ದವನಂ ಆಭರಣ ಮಳಿಗೆಯಲ್ಲಿ ಕಳ್ಳತನ ಮಾಡಿರುವ ವಿಚಾರವನ್ನೂ ಬಾಯ್ಬಿಟ್ಟಿದ್ದಾನೆ. ಆ.7ರ ತಡರಾತ್ರಿ ಕಟ್ಟಡದ ಶೀಟ್ ಕತ್ತರಿಸಿ ಭದ್ರತಾ ಕಪಾಟು ಕೊಠಡಿಗೆ ನುಗ್ಗಿ ಒಂದೂವರೆ ಕೆಜಿ ಚಿನ್ನದ ಬಿಸ್ಕೆಟ್, 200 ಗ್ರಾಂ ಚಿನ್ನದ ನಾಣ್ಯ, 50 ಗ್ರಾಂ ಚಿನ್ನದ ಡಾಲರ್, 60 ಗ್ರಾಂ ಉಂಗುರ, 220 ಗ್ರಾಂ ಸರ ಕಳವು ಮಾಡಿದ್ದ. ಕೃತ್ಯಕ್ಕೆ ಮುನ್ನ ಮಳಿಗೆಯಲ್ಲಿ ಅಳವಡಿಸಿದ್ದ 4 ಸಿಸಿ ಕ್ಯಾಮೆರಾಗಳನ್ನು ಧ್ವಂಸಗೊಳಿಸಿ, ಡಿವಿಆರ್ ಗಳ ನ್ನೂ ಕದ್ದೊಯ್ದಿದ್ದ. ಬಳಿಕ ಅದಕ್ಕೆ ಹೊಂದಿಕೊಂಡಂತೆ ಇರುವ ಎರಡು ಬಟ್ಟೆ ಮಳಿಗೆಗಳ ಬಾಗಿಲು ಮುರಿದು ರು.25 ಸಾವಿರ ನಗದು ದೋಚಿದ್ದ. ಬೆಂಗಳೂರು ತುಮಕೂರು, ಮೈಸೂರು, ಮಂಡ್ಯ, ರಾಮ ನಗರ ಮುಂತಾ-ದೆಡೆ ಕಳ್ಳತನ ಮಾಡಿದ್ದ ಆನಂದ, ಹಗಲಿನಲ್ಲಿ ಸಭ್ಯಸ್ಥನಂತೆ ತಿರುಗಾಡುತ್ತಿದ್ದ. ಮಧ್ಯರಾತ್ರಿ ಚಾವಣಿ ಮೂಲಕ ಒಳ ಪ್ರವೇಶಿಸಿ ಕಳವು ಮಾಡುತ್ತಿದ್ದ.