ವ್ಹೀಲಿಂಗ್ ಮಾಡುತ್ತಿದ್ದ ನಾಲ್ವರ ಬಂಧನ

ಪುಲಕೇಶಿನಗರದಲ್ಲಿ ವ್ಹೀಲಿಂಗ್ ಮತ್ತು ಡ್ರ್ಯಾಗ್ ರೇಸಿಂಗ್ ಹಾವಳಿ ಹೆಚ್ಚಾಗಿದ್ದರಿಂದ ವಿಶೇಷ ಕಾರ್ಯಾಚರಣೆ ನಡೆಸಿದ ಸಂಚಾರ ಪೊಲೀಸರು ನಾಲ್ವರು ಯುವಕರನ್ನು ಬಂಧಿಸಿ 10 ಬೈಕ್ ಗಳನ್ನು ವಷಪಡಿಸಿಕೊಂಡಿದ್ದಾರೆ...
(ಸಾಂದರ್ಭಿಕ  ಚಿತ್ರ)
(ಸಾಂದರ್ಭಿಕ ಚಿತ್ರ)

ಬೆಂಗಳೂರು: ಪುಲಕೇಶಿನಗರದಲ್ಲಿ ವ್ಹೀಲಿಂಗ್ ಮತ್ತು ಡ್ರ್ಯಾಗ್ ರೇಸಿಂಗ್ ಹಾವಳಿ ಹೆಚ್ಚಾಗಿದ್ದರಿಂದ ವಿಶೇಷ ಕಾರ್ಯಾಚರಣೆ ನಡೆಸಿದ ಸಂಚಾರ ಪೊಲೀಸರು ನಾಲ್ವರು ಯುವಕರನ್ನು ಬಂಧಿಸಿ 10 ಬೈಕ್ ಗಳನ್ನು ವಷಪಡಿಸಿಕೊಂಡಿದ್ದಾರೆ.

ರಿಚರ್ಡ್ಸ್ ಪಾರ್ಕ್, ಮೋರ್ ರಸ್ತೆ, ಸ್ಟೀಫನ್ ರಸ್ತೆ ಮತ್ತು ಟ್ಯಾನರಿ ರಸ್ತೆಗಳಲ್ಲಿ ಶಾಲಾ-ಕಾಲೇಜುಗಳು ಹಾಗೂ ಶಾಪಿಂಗ್ ಮಾಲ್ ಗಳು ಹೆಚ್ಚಾಗಿವೆ. ಇಲ್ಲಿ ಯುವಕರು ವ್ಹೀಲಿಂಗ್ ಮತ್ತು ಡ್ರ್ಯಾಗ್ ರೇಸ್ ಮಾಡುತ್ತಿರುವ ಬಗ್ಗೆ ಸಾರ್ವಜನಿಕರು ಪೊಲೀಸರಿಗೆ ದೂರು ನೀಡಿದ್ದರು.

ಈ ಹಿನ್ನೆಲೆಯಲ್ಲಿ ಗುರುವಾರ ಬೆಳಗ್ಗೆಯಿಂದ ಸಂಜೆಯವರೆಗೆ ಕಾರ್ಯಾಚರಣೆ ನಡೆಸಿ 10 ಬೈಕ್ ಗಳನ್ನು ಪೊಲೀಸರು ಜಪ್ತಿ ಮಾಡಿ ದಂಡ ವಿಧಿಸಿದ್ದಾರೆ. ನಾಲ್ವರು ಯುವಕರು ಸಿಕ್ಕಿಬಿದ್ದಿದ್ದು, ಉಳಿದವರು ಬೈಕ್ ಗಳ ಬಿಟ್ಟು ಪರಾರಿಯಾಗಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com