ಉ.ಕ. ಎಂದರೆ ಉತ್ತಮ ಕರ್ನಾಟಕ: ಸುಧಾಮೂರ್ತಿ

``ಉತ್ತರ ಕರ್ನಾಟಕದ ಮಂದಿ ಸಂಘ ಜೀವಿಗಳು. ಒಗ್ಗೂಡುವ ಸ್ವಭಾವದವರು. ಆದ್ದರಿಂದಲೇ ಉ.ಕ. ಎಂದರೆ ಉತ್ತಮ ಕರ್ನಾಟಕ ,'' ಎಂದು ಇನ್ಫೋಸಿಸ್ ಫೌಂಡೇಶನ್ ಅಧ್ಯಕ್ಷೆ ಸುಧಾ ಮೂರ್ತಿ ಬಣ್ಣಿಸಿದರು...
ಇನ್ಫೋಸಿಸ್ ಫೌಂಡೇಶನ್ ಅಧ್ಯಕ್ಷೆ ಸುಧಾ ಮೂರ್ತಿ
ಇನ್ಫೋಸಿಸ್ ಫೌಂಡೇಶನ್ ಅಧ್ಯಕ್ಷೆ ಸುಧಾ ಮೂರ್ತಿ
Updated on: 

ಬೆಂಗಳೂರು: ``ಉತ್ತರ ಕರ್ನಾಟಕದ ಮಂದಿ ಸಂಘ ಜೀವಿಗಳು. ಒಗ್ಗೂಡುವ ಸ್ವಭಾವದವರು. ಆದ್ದರಿಂದಲೇ ಉ.ಕ. ಎಂದರೆ ಉತ್ತಮ ಕರ್ನಾಟಕ ,'' ಎಂದು ಇನ್ಫೋಸಿಸ್ ಫೌಂಡೇಶನ್ ಅಧ್ಯಕ್ಷೆ ಸುಧಾ ಮೂರ್ತಿ ಬಣ್ಣಿಸಿದರು.

ಉತ್ತರ ಕರ್ನಾಟಕ ನಾಗರಿಕರ ಅಭಿವೃದ್ಧಿ ಸಂಘ ಶುಕ್ರವಾರ ಆಯೋಜಿಸಿದ್ದ ಬನ್ನಿ-ಬಂಗಾರ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ``ಉತ್ತರ ಕರ್ನಾಟಕಕ್ಕೆ ಐತಿಹಾಸಿಕ ನೆಲೆಗಟ್ಟಿದೆ. ಈ ಭಾಗದಲ್ಲಿ ಜಾತಿ ಪದಟಛಿತಿ ಕಡಿಮೆ. ಜನ ಸಂಘ ಜೀವಿಗಳು. ಪರಸ್ಪರ ಕಷ್ಟ-ಸುಖದಲ್ಲಿ ಭಾಗಿಯಾಗುವವರು.

ಕಠಿಣ ಪರಿಶ್ರಮಕ್ಕೆ ಹೆಸರಾದ ಈ ಭಾಗದ ಮಂದಿ ಎಂದಿಗೂ ಶ್ರೀಮಂತಿಕೆ, ದರ್ಪ ಪ್ರದರ್ಶಿಸಿದವರಲ್ಲ. ಹೆಣ್ಣು ಮಕ್ಕಳು ಕೂಡ ಹೊಂದಿಕೊಂಡು ಹೋಗುವ ಗುಣದವರಾಗಿದ್ದಾರೆ. ಇವೇ ಅವರ ದೊಡ್ಡ ಗುಣ,'' ಎಂದು ಶ್ಲಾಘಿಸಿದರು. ಉ.ಕ. ನಾಗರಿಕರ ಸಂಘದ ಅಧ್ಯಕ್ಷ ಡಾ.ಚಂದ್ರಶೇಖರ ಸಾಂಬ್ರಾಣಿ, ಉಪಾಧ್ಯಕ್ಷ ಚಂದ್ರಶೇಖರ ಇದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com